More

    ಜಾರ್ಖಂಡ್​ನ ಮೂವರು ಕಾಂಗ್ರೆಸ್​ ಶಾಸಕರಿದ್ದ ಕಾರಿನಲ್ಲಿ ರಾಶಿ ರಾಶಿ ಹಣ ವಶಕ್ಕೆ ಪಡೆದ ಬಂಗಾಳದ ಪೊಲೀಸರು!

    ಕೋಲ್ಕತ: ಪಶ್ಚಿಮ ಬಂಗಾಳ ಪೊಲೀಸರು ಶನಿವಾರ (ಜುಲೈ 30) ನಿರ್ದಿಷ್ಟ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ, ಜಾರ್ಖಂಡ್‌ನ ಮೂವರು ಕಾಂಗ್ರೆಸ್ ಶಾಸಕರ ಕಾರನ್ನು ತಡೆದು ಅದರೊಳಗಿದ್ದ ಅಪಾರ ಪ್ರಮಾಣದ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆ ಹೌರಾ ಜಿಲ್ಲೆಯಲ್ಲಿ ನಡೆದಿದೆ.

    ಶಾಸಕರಾದ ಇರ್ಫಾನ್ ಅನ್ಸಾರಿ, ರಾಜೇಶ್ ಕಚ್ಚಪ್ ಮತ್ತು ನಮನ್ ಬಿಕ್ಸಲ್ ಕೊಂಗಾರಿ ಅವರು ಪ್ರಯಾಣಿಸುತ್ತಿದ್ದ ಎಸ್‌ಯುವಿಯನ್ನು ಪಂಚಲಾ ಪೊಲೀಸ್ ಠಾಣಾ ವ್ಯಾಪ್ತಿಯ ರಾನಿಹಟಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ-16 ರಲ್ಲಿ ಪಶ್ಚಿಮ ಬಂಗಾಳ ಪೊಲೀಸರು ತಡೆದು ಪರಿಶೀಲನೆ ನಡೆಸಿದಾಗ ಹಣ ಪತ್ತೆಯಾಗಿದೆ.

    ಈ ಬಗ್ಗೆ ಮಾತನಾಡಿರುವ ಹೌರಾದ ಗ್ರಾಮಾಂತರ ಪೊಲೀಸ್​ ವರಿಷ್ಠಾಧಿಕಾರಿ ಸ್ವಾತಿ ಭಂಗಾಲಿಯಾ, ನಮಗೆ ಸಿಕ್ಕ ಮಾಹಿತಿ ಆಧಾರದ ಮೇಲೆ ನಾವು ಕಾರನ್ನು ನಿಲ್ಲಿಸಿದೆವು. ಅದರ ಒಳಗೆ ಜಾರ್ಖಂಡ್‌ನ ಮೂವರು ಶಾಸಕರು ಇದ್ದರು. ಅಲ್ಲದೆ, ಸಾಕಷ್ಟು ಹಣ ಸಹ ಇತ್ತು. ಅದನ್ನು ವಶಕ್ಕೆ ಪಡೆದಿದ್ದೇವೆ. ತುಂಬಾ ನಗದು ಇರುವುದರಿಂದ ಅದರ ಎಣಿಗೆ ಯಂತ್ರ ಬೇಕಾಗಿದೆ. ಪೂರ್ಣ ಎಣಿಕೆ ಮಾಡಿದ ನಂತರವೇ ಎಷ್ಟು ಹಣ ಸಿಕ್ಕಿದೆ ಎಂದು ಹೇಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

    ಅನ್ಸಾರಿ, ಖಾರ್ಖಂಡ್​ನ ಜಮ್ತಾರಾ ಕ್ಷೇತ್ರ ಶಾಸಕರಾಗಿದ್ದರೆ, ಕಚ್ಚಪ್, ರಾಂಚಿ ಜಿಲ್ಲೆಯ ಖಿಜ್ರಿ ಶಾಸಕರಾಗಿದ್ದರೆ ಮತ್ತು ಕೊಂಗಾರಿ, ಸಿಮ್ಡೆಗಾ ಜಿಲ್ಲೆಯ ಕೊಲೆಬಿರಾ ಶಾಸಕರಾಗಿದ್ದಾರೆ. ಶಾಸಕರಲ್ಲದೆ, ಎಸ್‌ಯುವಿಯಲ್ಲಿ ಇಬ್ಬರು ವ್ಯಕ್ತಿಗಳಿದ್ದರು.

    ಮೂರು ಕಾಂಗ್ರೆಸ್ ಶಾಸಕರಿಂದ ನಗದು ವಶಪಡಿಸಿಕೊಂಡ ಬಗ್ಗೆ ಪ್ರತಿಕ್ರಿಯಿಸಿರುವ ಜಾರ್ಖಂಡ್ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಅಧ್ಯಕ್ಷ ರಾಜೇಶ್ ಠಾಕೂರ್, ಈ ಪಿತೂರಿಯ ಹಿಂದೆ ಬಿಜೆಪಿ ಇದೆ ಎಂದು ಆರೋಪಿಸಿದ್ದಾರೆ. ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ಸರ್ಕಾರಗಳನ್ನು ಅಸ್ಥಿರಗೊಳಿಸಲು ಬಹಳ ಸಮಯದಿಂದ ಬಿಜೆಪಿ ಪ್ರಯತ್ನಿಸುತ್ತಿದೆ. ಮಹಾರಾಷ್ಟ್ರ ಸರ್ಕಾರವನ್ನು ಹೇಗೆ ಅಸ್ಥಿರಗೊಳಿಸಿದರು ಎಂಬುದು ಸಾರ್ವಜನಿಕರಿಗೆ ತಿಳಿದಿದೆ ಎಂದರು. (ಏಜೆನ್ಸೀಸ್​)

    ಅಯ್ಯೋ ದೇವರೆ ಇದು ನೀವಾ? ಅಲ್ಲು ಅರ್ಜುನ್​ ನೋಡಿ ಒಂದು ಕ್ಷಣ ಕನ್ಫ್ಯೂಸ್​ ಆದ ಕಿರಿಕ್​ ಬ್ಯೂಟಿ!

    ಬಿಜೆಪಿ ಅಗ್ನಿಕುಂಡ, ಸಿಎಂ ಕೆಂಡ: ತಣಿಯದ ಕಾರ್ಯಕರ್ತರ ಆಕ್ರೋಶ; ಇಕ್ಕಟ್ಟಿನಲ್ಲಿ ನಾಯಕರು..

    ಪುಸ್ತಕ ಬರೀತಾರಂತೆ ಶ್ವೇತಾ; ಜನರಿಗೆ ಸ್ಫೂರ್ತಿ ತುಂಬಲು ಹೊಸ ಪುಸ್ತಕ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts