

ಹೈದರಾಬಾದ್: ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಫೋಟೋ ನೋಡಿ ನಟಿ ರಶ್ಮಿಕಾ ಮಂದಣ್ಣ ಗೊಂದಲಕ್ಕೀಡಾಗಿದ್ದನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಒಂದು ಕ್ಷಣ ಅಲ್ಲು ಅರ್ಜುನ್ ಅವರನ್ನು ಗುರುತು ಹಿಡಿಯಲು ಆಗಲೇ ಇಲ್ಲ ಎಂದಿದ್ದಾರೆ.
ಜುಲೈ 29ರಂದು ಅಲ್ಲು ಅರ್ಜುನ್ ಅವರು ತಮ್ಮ ಟ್ವಿಟರ್ನಲ್ಲಿ ತಮ್ಮ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್ನಲ್ಲಿ ಕಾಣಿಸಿಕೊಂಡಿರು ಅಲ್ಲು, ಕಪ್ಪು ಬಣ್ಣದ ಸ್ಟೈಲಿಶ್ ಕನ್ನಡಕ ಹಾಗೂ ಕೈಯಲ್ಲಿ ಸಿಗಾರ್ ಹಿಡಿದು ಬಹಳ ಸ್ಟೈಲಿಶ್ ಆಗಿ ಪೋಸ್ ನೀಡಿದ್ದಾರೆ.
ಅಲ್ಲು ಅರ್ಜುನ್ ಫೋಟೋ ನೋಡಿ ಗೊಂದಲ್ಲಕ್ಕೀಡಾದ ರಶ್ಮಿಕಾ ಮಂದಣ್ಣ, ಅಯ್ಯೋ ದೇವರೆ, ಒಂದು ಸೆಕೆಂಡ ನನ್ನ ಕೈಯಲ್ಲಿ ಗುರುತು ಹಿಡಿಯಲು ಆಗಲೇ ಇಲ್ಲ ಸರ್ ಎಂದು ಟ್ವೀಟ್ ಮಾಡಿದ್ದಾರೆ.
ರಶ್ಮಿಕಾ ಗೊಂದಲಕ್ಕೀಡಾಗಿರುವುದರಲ್ಲಿ ಸಂಶಯವೇ ಇಲ್ಲ. ಏಕೆಂದರೆ, ಅಲ್ಲು ಅರ್ಜುನ್ ಫೋಟೋ ನೋಡಿದರೆ ತಕ್ಷಣಕ್ಕೆ ಅವರೆಂದು ಗೊತ್ತಾಗುವುದೇ ಇಲ್ಲ. ಏಕೆಂದರೆ, ಇದುವರೆಗೂ ಕಾಣದ ವಿಭಿನ್ನ ಫೋಟೋ ಇದಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ರಶ್ಮಿಕಾ ಮತ್ತು ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದ ಮೊದಲ ಭಾಗ ತೆರೆಕಂಡು ಅದ್ಭುತ ಯಶಸ್ಸು ಗಳಿಸಿದ್ದು, ಎರಡನೇ ಭಾಗದ ಚಿತ್ರೀಕರಣಕ್ಕೆ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. (ಏಜೆನ್ಸೀಸ್)