

ನವದೆಹಲಿ: ಪಂಜಾಬ್ನಲ್ಲಿ ಸದ್ಯ ಸಿಧು ಕೈಗೆ ಕಾಂಗ್ರೆಸ್ ಬ್ಯಾಟ್ ಸಿಕ್ಕಿದ್ದು, ಇನ್ನು ಶೀಘ್ರದಲ್ಲೇ ಅವರ ಬ್ಯಾಟಿಂಗ್ ಶುರುವಾಗಲಿದೆ. ಅರ್ಥಾತ್, ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ನೇಮಕಗೊಂಡಿದ್ದಾರೆ.
ಇವರೊಂದಿಗೆ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸಂಗತ್ ಸಿಂಗ್ ಗಿಲ್ಜಿಯನ್, ಸುಖ್ವಿಂದರ್ ಸಿಂಗ್ ಡ್ಯಾನಿ, ಪವನ್ ಗೋಯೆಲ್, ಕುಲ್ಜಿತ್ ಸಿಂಗ್ ನಗ್ರ ಅವರು ನೇಮಕಗೊಂಡಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರೋಧದ ನಡುವೆಯೂ ಸಿಧುಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನೀಡಿ ಆದೇಶ ಹೊರಡಿಸಿರುವುದು ಕುತೂಹಲ ಮೂಡಿಸಿದೆ.