ಸಂಗೀತ ನಿರ್ದೇಶಕ ಡಾ.ಕಿರಣ್​ ತೋಟಂಬೈಲ್​ ಮೇಲೆ ರಾಡ್​ನಿಂದ ಹಲ್ಲೆ, ತಲೆಗೆ ಗಾಯ

feature
Published on

ಬೆಂಗಳೂರು: ಸಂಗೀತ ನಿರ್ದೇಶಕ, ಡಾ.ಕಿರಣ್ ತೋಟಂಬೈಲ್​ ಅವರ ಮೇಲೆ ದುಷ್ಕರ್ಮಿಗಳು ರಾಡ್​ನಿಂದ ಹಲ್ಲೆ ಮಾಡಿದ್ದು, ಅವರ ತಲೆಗೆ ಗಾಯವಾಗಿದೆ. ನಿನ್ನೆ ತಡರಾತ್ರಿ ಈ ಪ್ರಕರಣ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಡಾ.ಕಿರಣ್ ಅವರು ನಿನ್ನೆ ಸಂಚಾರಿ ವಿಜಯ್ ಅವರ ಜನ್ಮದಿನ ಪ್ರಯುಕ್ತ ಬೆಂಗಳೂರಿನ ರಾಜರಾಜೇಶ್ವರಿನಗರದ ಗೆಳೆಯರ ಮನೆಯಲ್ಲಿ 'ಉಸಿರು' ತಂಡ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಮರಳುತ್ತಿರುವಾಗ ಈ ಘಟನೆ ನಡೆದಿದೆ. ತಡರಾತ್ರಿ 2.30ರ ಸುಮಾರಿಗೆ ಮಾರುತಿ ಸ್ವಿಫ್ಟ್​ ಕಾರಿನಲ್ಲಿ ಬಂದ ಐವರು ಸರಳಿನಿಂದ ಹಲ್ಲೆ ಮಾಡಿದ್ದಾರೆ. ಪರಿಣಾಮವಾಗಿ ಕಿರಣ್ ಅವರ ತಲೆಯ ಹಿಂದೆ ಗಾಯವಾಗಿದೆ.

ಘಟನೆಗೆ ಕಾರಣವೇನು ಎಂಬುದು ಇನ್ನೂ ಖಚಿತವಾಗಿಲ್ಲ. ಪ್ರಕರಣ ಸಂಬಂಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಡಾ.ಕಿರಣ್​ ಅವರು ಆರ್​.ಚಂದ್ರು ನಿರ್ದೇಶನದ 'ಐ ಲವ್​ ಯೂ' ಸಿನಿಮಾಗೆ ಸಂಗೀತ ಸಂಯೋಜಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net