ಚಿನ್ನ ಗೆದ್ದ ಕ್ರೀಡಾಪಟು ಹೃದಯಾಘಾತದಿಂದ ಸಾವು..!

aroora
Published on

ರಾಜಸ್ಥಾನ: ಖ್ಯಾತ ದೇಹದಾರ್ಡ್ಯಪಟು ಹಾಗೂ ಮಾಜಿ ಮಿಸ್ಟರ್ ಇಂಡಿಯಾ ಪ್ರೇಮರಾಜ್ ಅರೋರಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 42 ವರ್ಷದ ಪ್ರೇಮ್​ರಾಜ್​ ಸಾವಿನಿಂದ ಅವರ ಇಡೀ ಕುಟುಂಬವೇ ಆಘಾತಕ್ಕೊಳಗಾಗಿದೆ.

ಮನೆಯಲ್ಲಿ ಬಾತ್​ರೂಮಿಗೆ ಹೋಗಿದ್ದ ಅರೋರಾ ಬಹಳ ಹೊತ್ತಾದರೂ ವಾಪಸ್ಸು ಬಂದಿರಲಿಲ್ಲ. ಇದರಿಂದ ಸಂಶಯಗೊಂಡ ಮನೆಯವರು ಬಾಗಿಲು ಒಡೆದು ನೋಡಿದಾಗ ಅರೋರಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ತಕ್ಷಣವೇ ಆಸ್ಪತ್ರೆಗೆ ಆತ​ನನ್ನು ಕರೆದೊಯ್ಯಲಾಗಿದ್ದು, ಆತ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

2012-13ರಲ್ಲಿ ರಾಜಸ್ಥಾನದ ಬೆಸ್ಟ್ ಪವರ್ ಲಿಫ್ಟಿಂಗ್ ಮತ್ತು 2014 ರಲ್ಲಿ ಮಿಸ್ಟರ್ ಇಂಡಿಯಾ, ನಾಗ್ಪುರ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಹಾಗೂ ಅನೇಕ ಪ್ರಶಸ್ತಿಗಳನ್ನು ಅರೋರಾ ಗೆದ್ದಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net