ಸಿನಿಮಾ

ಪೆಟ್ರೋಲ್ ಹಾಕಿಸುವ ನೆಪದಲ್ಲಿ ನಳಿಕೆಗೆ ಬೆಂಕಿ ಹಚ್ಚಿದ ಮೂವರು

ಭೋಪಾಲ್‌: ಪೆಟ್ರೋಲ್ ಪಂಪ್‌ ನಳಿಕೆಗೆ ಬೆಂಕಿಯಿಟ್ಟಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಭೂಪಾಲ್​ನಲ್ಲಿ ನಡೆದಿದೆ. ಕಟಾರ ಹಿಲ್ಸ್​ನ ಸ್ಪ್ರಿಂಗ್ ವ್ಯಾಲಿ ಕಾಲೋನಿಯಲ್ಲಿರುವ ರೇಣುಕಾ ಪೆಟ್ರೋಲ್ ಪಂಪ್‌ನಲ್ಲಿ ಈ ಘಟನೆ ನಡೆದಿದ್ದು, ಈ ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪೆಟ್ರೊಲ್​ ಹಾಕಿಸಿಕೊಳ್ಳವ ನೆಪದಲ್ಲಿ ಮೂವರ ದುಷ್ಕರ್ಮಿಗಳ ಗುಂಪು ಪೆಟ್ರೋಲ್​ ಬಂಕ್​ಗೆ ಬಂದಿದೆ. ಬಂಕ್​ ಸಿಬ್ಬಂದಿ ಪೆಟ್ರೋಲ್​ ಹಾಕುವ ವೇಳೆ, ಒಬ್ಬ ವ್ಯಕ್ತಿ ತನ್ನ ಜೇಬಿನಿಂದ ಲೈಟರ್​ ತೆಗೆದು ಪೆಟ್ರೋಲ್​ ಹಾಕುವ ನಳಿಕೆಗೆ ಬೆಂಕಿಯನ್ನು ಹಚ್ಚಿದ್ದಾನೆ. ಕೂಡಲೇ ಜ್ವಾಲೆಯು ಬೈಕ್​ನ್ನು ಆವರಿಸಿದೆ.

ತಕ್ಷಣವೇ ಬಂಕ್​ ಸಿಬ್ಬಂದಿ ಮರಳು ಬಳಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಈ ವೇಳೆ ಬೆಂಕಿ ನಂದಿಸಲು ಯತ್ನಿಸಿದ ವ್ಯಕ್ತಿಯೊಬ್ಬನಿಗೆ ಸುಟ್ಟ ಗಾಯಗಳಾಗಿವೆ. ಕೃತ್ಯ ಎಸಗಿದವರ ಪೈಕಿ ಇಬ್ಬರು ವ್ಯಕ್ತಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಆದರೆ ಪೆಟ್ರೋಲ್ ತುಂಬಿಸುತ್ತಿದ್ದ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಯಿತು.

ಬಂಧಿತ ವ್ಯಕ್ತಿ ತನ್ನನ್ನು ವಿಜಯ್ ಸಿಂಗ್ ಎಂದು ಗುರುತಿಸಿಕೊಂಡಿದ್ದು, ಭರತ್ ಗಟ್ಖಾನೆ ಮತ್ತು ಆಕಾಶ್ ಗೌರ್ ಘಟನಾ ಸ್ಥಳದಿಂದ ಎಸ್ಕೇಪ್​ ಆಗಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.(ಏಜೆನ್ಸೀಸ್​)

Latest Posts

ಲೈಫ್‌ಸ್ಟೈಲ್