ಸಿನಿಮಾ

ಡಿಕೆಶಿ vs ಎಂಬಿಪಿ; ಜಲಸಂಪನ್ಮೂಲ ಖಾತೆಗಾಗಿ ಶುರುವಾಯಿತು ಹಗ್ಗಜಗ್ಗಾಟ!

ಬೆಂಗಳೂರು: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿಸಲ್ಪಟ್ಟಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ ಗೆದ್ದು ಬೀಗುವ ಮೂಲಕ ಅಧಿಕಾರದ ಗದ್ದುಗೆ ಏರಿದೆ.

ಕಳೆದ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಗಾದಿಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್​ ನಡುವಿನ ತಿಕ್ಕಾಟ ತಾರಕಕ್ಕೇರಿತ್ತು. ಆ ನಂತರ ಹೈಕಮಾಂಡ್​ ಇಬ್ಬರಯು ನಾಯಕರ ನಡುವೆ ಮಾತುಕತೆ ನಡೆಸಿ ಅಧಿಕಾರಿ ಹಂಚಿಕೆಯನ್ನು ಮಾಡಿದ್ದರು.

ಇನ್ನು ಈ ಮಧ್ಯೆ ಅಧಿಕಾರ ಹಂಚಿಕೆ ಸೂತ್ರದ ಕುರಿತು ಹೈಕಮಾಂಡ್​ ಮಾತನಾಡಿಲ್ಲ ಸಿದ್ದರಾಮಯ್ಯನವರೇ 5 ವರ್ಷಗಳ ಕಾಲ ಮುಖ್ಯಮಂತ್ತಿಯಾಗಿರುತ್ತಾರೆ ಎಂದು ಹೇಳಿ ಆ ನಂತರ ಉಲ್ಟಾ ಹೊಡೆಯುವ ಮೂಲಕ ಸಚಿವ ಎಂ.ಬಿ. ಪಾಟೀಲ್​ ಸುದ್ದಿಯಲ್ಲಿದ್ದರು.

ನೀರಾವರಿಗಾಗಿ ಹೋರಾಟ

ಇದೀಗ ಕಾಂಗ್ರೆಸ್​​ನಲ್ಲಿ ಖಾತೆಯ ವಿಚಾರವಾಗಿ ಸಚಿವರ ನಡುವೆ ಹಗ್ಗಜಗ್ಗಾಟ ಶುರುವಾಗಿದ್ದು ಜಲಸಂಪನ್ಮೂಲ ಇಲಾಖೆಯನ್ನು ತಮ್ಮ ಬಳಿ ಇರಿಸಿಕೊಳ್ಳಲು ಡಿ.ಕೆ. ಶಿವಕುಮಾರ್​ ಹಾಗೂ ಎಂ.ಬಿ. ಪಾಟೀಲ್​ ನಡುವೆ ತಿಕ್ಕಾಟ ಶುರುವಾಗಿದೆ.

dk siddu mbp

ಇನ್ನು ಸಿದ್ದರಾಮಯ್ಯ ಅವರ ಅವಧಿಯಲ್ಲಿ 5 ವರ್ಷಗಳ ಕಾಲ ನೀರಾವರಿ ಇಲಾಖೆ ಸಚಿವರಾಗಿ ಅನುಭವ ಹೊಂದಿರುವ ಆಧಾರದ ಮೇಲೆ ತಮ್ಮಗೆ ಈ ಖಾತೆ ಬೇಕು ಎಂದು ಎಂಬಿಪಿ ಪಟ್ಟು ಹಿಡಿದಿದ್ಧಾರೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವದ ಆಧಾರದ ಮೇಲೆ ತಮ್ಮಗೆ ಈ ಖಾತೆ ನೀಡಬೇಕೆಂದು ಹೈಕಮಾಂಡ್​ ಮುಂದೆ ಡಿಕೆಶಿ ವಾದ ಮಂಡಿಸಿದ್ದಾರೆ ಎಂದು ವರದಿಯಾಗಿದೆ.

ಯಾರತ್ತ ಸಿದ್ದು ಒಲವು?

ಇನ್ನು ಇಬ್ಬರು ಸಚಿವರ ನಡುವಿನ ಕಿತ್ತಾಟದಲ್ಲಿ ಮಧ್ಯ ಪ್ರವೇಶಿಸಿರುವ ಸಿಎಂ ಸಿದ್ದರಾಮಯ್ಯ ಎಂ.ಬಿ. ಪಾಟೀಲ್​ ಪರ ಬ್ಯಾಟ್​ ಬೀಸಿದ್ದಾರೆ ಎಂದು ತಿಳಿದು ಬಂದಿದ್ದು ಡಿಕೆಶಿಗಿಂತ ಎಂ.ಬಿ. ಪಾಟೀಲ್​ ಉತ್ತಮ ಎಂದು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ ಎಂದು ತಿಳಿದು ಬಂದಿದೆ.

ನೀರಾವರಿ ಖಾತೆಯನ್ನು ಬಿಟ್ಟುಕೊಡದಿರಲು ಡಿಸಿಎಂ ಡಿ.ಕೆ. ಶಿವಕುಮಾರ್​ ನಿರ್ಧರಿಸಿದ್ದು ಇಬ್ಬರ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರುವ ಲಕ್ಷಣಗಳು ಗೋಚರಿಸಿವೆ.

Latest Posts

ಲೈಫ್‌ಸ್ಟೈಲ್