ಸಿನಿಮಾ

ಸಿಎಂ ಸಿದ್ದರಾಮಯ್ಯರಿಗೆ ಬಿಜೆಪಿಯಿಂದ ಜೀವ ಬೆದರಿಕೆ ಇದೆ; ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಈಗಲೂ ಬಿಜೆಪಿಯಿಂದ ಜೀವ ಬೆದರಿಕೆ ಇದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ನೇರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕ ಅಶ್ವಥ್ ನಾರಾಯಣ್ ವಿರುದ್ಧ ನೀಡಿದ್ದ ದೂರಿನ ಕ್ರಮಕ್ಕೆ ಒತ್ತಾಯಿಸುತ್ತಿದ್ದೇವೆ. ಉರಿಗೌಡ, ನಂಜೇಗೌಡ ಟಿಪ್ಪುವನ್ನ ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನ ಹೊಡೆದು ಹಾಕಿ ಎಂದಿದ್ದ ಅಶ್ವಥ್ ನಾರಾಯಣ‌ ಈ ಹೇಳಿಕೆ ವಿಡಿಯೋ ಈಗಲೂ ವೈರಲ್ ಆಗುತ್ತಿದೆ. ಇದರಿಂದ ಸಿದ್ದರಾಮಯ್ಯರ ಮೇಲೆ ಮತ್ತೆ ದಾಳಿಯಾಗುವ ಸಾಧ್ಯತೆ ಇದೆ. ಸಿದ್ದರಾಮಯ್ಯರಿಗೆ ಏನೇ ಆದರು ಅದಕ್ಕೆ ಬಿಜೆಪಿ, ಅಶ್ವಥ್ ನಾರಾಯಣ್ ಹೊಣೆ‌ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಬಜರಂಗದಳ ಬ್ಯಾನ್ ಮಾಡ್ತಾರಾ? ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುತ್ತಾರಾ? ಪರಂ ಹೇಳೋದೇನು?

ಈ ಕೂಡಲೇ ಅಶ್ವಥ್ ನಾರಾಯಣರನ್ನ ಪೊಲೀಸರು ಬಂಧಿಸಬೇಕು.ನಾವು ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನಲೆ ಪೊಲೀಸರು ಈ ಬಗ್ಗೆ ಸ್ಪೀಕರ್‌ಗೆ ಮಾಹಿತಿ ನೀಡಿದ್ದಾರೆ ಎಂದಿದ್ದಾರೆ.

ರಾಜ್ಯಾದ್ಯಂತ ಹಿಂದೆ ಬಿಜೆಪಿ ವಿರುದ್ಧ ನೀಡಿದ್ದ ದೂರಿನ ಕ್ರಮಕ್ಕೆ ಒತ್ತಾಯಿಸುತ್ತೇವೆ. ಹಿಂದೆ ಪೊಲೀಸರು ಬಿಜೆಪಿ ಏಜೆಂಟರಂತೆ ವರ್ತಿಸಿದ್ದರು. ಹೀಗಾಗಿ ದೂರಿನ ಕ್ರಮ ಕೈಗೊಂಡಿರಲಿಲ್ಲ. ಈಗ ಸಮಗ್ರವಾದ ತನಿಖೆಯಾಗಬೇಕು. ಅಶ್ವಥ್ ನಾರಾಯಣ್ ಯಾವ ಉದ್ದೇಶದಿಂದ ಈ ಹೇಳಿಕೆ ಕೊಟ್ಟಿದ್ರು ಎಂಬುದು ತಿಳಿಯಬೇಕಿದೆ. ಅವರ ಮೇಲೆ ಕಠಿಣ ಕ್ರಮವೂ ಆಗಬೇಕು ಎಂದು ವತ್ತಾಯಿಸಿದ್ದಾರೆ.

ನಿತಿನ್ ಗಡ್ಕರಿಗೆ ಕೊಲೆ ಬೆದರಿಕೆ ಪ್ರಕರಣ; ಎನ್​ಐಎ ಅಧಿಕಾರಿಗಳಿಂದ ಎಫ್​​ಐಆರ್​​​ ದಾಖಲು

Latest Posts

ಲೈಫ್‌ಸ್ಟೈಲ್