More

    ಸೆಲೆಬ್ರಿಟಿಗಳಿಂದ ಮತದಾನ ಹುರುಪು

    ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಸಾಮಾನ್ಯರಿಂದ ಗಣ್ಯಾತಿಗಣ್ಯರವರೆಗೂ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದರು.

    ಜನಪ್ರತಿನಿಧಿಗಳು, ಸಿನಿಮಾ ನಟ-ನಟಿಯರು, ಉದ್ಯಮಿಗಳು, ಕ್ರೀಡಾಪಟುಗಳು ಸೇರಿ ಬಹಳಷ್ಟು ಸೆಲೆಬ್ರಿಟಿಗಳು ಕುಟುಂಬಸಮೇತ ಮತಗಟ್ಟೆಗೆ ಆಗಮಿಸಿ ವೋಟ್ ಮಾಡಿದರು. ಅಲ್ಲದೆ 90 ವರ್ಷ ಮೇಲ್ಪಟ್ಟವರು, ಅನಾರೋಗ್ಯಪೀಡಿತರು ಮತಗಟ್ಟೆಗೆ ಆಗಮಸಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಸ್ಫೂರ್ತಿಯಾದರು. ಜನಪ್ರತಿನಿಧಿಗಳು ಎಂದಿನಂತೆ ‘ಟೆಂಪಲ್ ರನ್’ ಮುಗಿಸಿ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

    ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಕುಟುಂಬಸಮೇತರಾಗಿ ಪದ್ಮಾನಾಭನಗರದ ಸಹಕಾರಿ ವಿದ್ಯಾಕೇಂದ್ರದಲ್ಲಿ ಮತದಾನ ಮಾಡಿದರು. ‘ಇದು ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬ. ನಾನು, ನನ್ನ ಶ್ರೀಮತಿ ಮತ್ತು ಮಕ್ಕಳು ಎಲ್ಲರೂ ಮತ ಹಾಕಿದ್ದೇವೆ. ಎಲ್ಲ ದಾನಕ್ಕಿಂತ ಮತದಾನ ಮಹತ್ವದ್ದು. ಹೀಗಾಗಿ ಎಲ್ಲರೂ ಹಕ್ಕು ಚಲಾಯಿಸಬೇಕು’ ಎಂದು ಮನವಿ ಮಾಡಿದರು.

    ದೇಶ ಕಟ್ಟುವ ಸಮಯ: ಇದು ದೇಶ ಕಟ್ಟುವ ಸಮಯ. ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ತಮ್ಮ ನೆಚ್ಚಿನ ನಾಯಕನನ್ನು ಆಯ್ಕೆ ಮಾಡಬೇಕಿದೆ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಲು ಬಂದಿರುವುದು ಸಂತಸದ ವಿಚಾರ ಎಂದು ನಟಿ ತಾರಾ ಅನುರಾಧಾ ಹೇಳಿದರು.

    ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ನಟರಾದ ದರ್ಶನ್, ಯಶ್, ವಿಜಯ್ ರಾಘವೇಂದ್ರ, ಗಣೇಶ್, ರಾಘವೇಂದ್ರ ರಾಜ್‌ಕುಮಾರ್, ಸೃಜನ್ ಲೋಕೇಶ್, ಪ್ರಕಾಶ್ ರೈ, ನಟಿಯರಾದ ರಚಿತಾ ರಾಮ್, ಅಮೂಲ್ಯ, ಹಿರಿಯ ನಟ ದೊಡ್ಡಣ್ಣ ವೋಟ್ ಮಾಡಿ ಕೈಬೆರಳನ್ನು ಹೆಮ್ಮೆಯಿಂದ ಪ್ರದರ್ಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts