More

    ಅಶ್ವಥ್ ನಾರಾಯಣ್ ವಿರುದ್ಧ FIR ದಾಖಲು! “ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ” ಎಂದ ಮಾಜಿ ಸಚಿವ…

    ಬೆಂಗಳೂರು: ಚುನಾವಣಾ ಪ್ರಚಾರದ ಸಂದರ್ಭದಲ್ಲಿ ‘ಉರಿಗೌಡ ಹಾಗೂ ನಂಜೇಗೌಡರು ಟಿಪ್ಪುವನ್ನು ಹೊಡೆದು ಹಾಕಿದ ರೀತಿಯಲ್ಲಿ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು’ ಎಂದು ಕರೆ ನೀಡಿದ್ದರುಎನ್ನುವಂತಹ ಹೇಳಿಕೆಯನ್ನು ಅಶ್ವಥ್ ನಾರಾಯಣ ನೀಡಿದ್ದರು. ಇದೀಗ ಅವರ ಮೇಲೆ ಎಫ್ಐಆರ್ ದಾಖಲಾಗಿದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಅಶ್ವತ್ಥ್ ನಾರಾಯಣ್ “ನಾಲ್ಕು ತಿಂಗಳ ಹಿಂದನೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದೇನೆ. ಟಿಪ್ಪು ಸುಲ್ತಾನ್ ಮೇಲಿನ ಸಿದ್ದು ಪ್ರೇಮದ ಬಗ್ಗೆ ಹೇಳಿ, ಕಾಂಗ್ರೆಸ್ ಸೋಲಿಸಬೇಕು ಎಂಬ ಅರ್ಥದಲ್ಲಿ ಹೇಳಿದ್ದೇನೆ. ಆದರೆ ಯಾರನ್ನೂ ಹಾನಿ ಮಾಡಲು, ತೊಂದರೆ ಕೊಡಲು ಹೇಳಿಕೆ ಕೊಟ್ಟಿಲ್ಲ. ನಾನು ಯಾವತ್ತಿಗೂ ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ. ಅವರ ಮನಸ್ಸಿಗೆ ನೋವು ಆಗಿದ್ರೆ ಈಗಾಗಲೇ ಅವರಿಗೆ ವಿಷಾದ ಕೂಡ ವ್ಯಕ್ತಪಡಿಸೋದಾಗಿ ಹೇಳಿದ್ದೇನೆ. ಆದರೆ ಮುಗಿದು ಹೋಗಿರುವ ವಿಷಯವನ್ನು ಮತ್ತೊಮ್ಮೆ ಸಿಎಂ, ಡಿಸಿಎಂ ಪೊಲೀಸರ ಸಭೆಯಲ್ಲಿ ಪ್ರಸ್ತಾಪಿಸಿ, ಯಾಕೆ ಅವರ ಮೇಲೆ ಇನ್ನೂ ಕೇಸ್ ಹಾಕಿಲ್ಲ ಅಂತಾ ನನ್ನ ಮೇಲೆ ಇವಾಗ ಕೇಸ್ ಹಾಕಿಸಿದ್ದಾರೆ” ಎಂದಿದ್ದಾರೆ.

    “ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ” ಎಂದು ಅಟೆಂಪ್ಟ್ ಟು ಮರ್ಡರ್ ಕೇಸ್ ಬಗ್ಗೆ ಪ್ರತಿಕ್ರಿಯೆ

    ಇದೇ ಸಂದರ್ಭದಲ್ಲಿ ಅವರು, “ಇದರಿಂದಲೇ ಗೊತ್ತಾಗ್ತಿದೆ. ಅವರು ದ್ವೇಷದ ರಾಜಕಾರಣ, ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು. ನಾನು ಇದನ್ನು ರಾಜಕೀಯವಾಗಿ ಮತ್ತು ಕಾನೂನಾತ್ಮಕ ಎದುರಿಸುವ ಕೆಲಸ ಮಾಡುತ್ತೇನೆ. ನಾವು ಯಾವತ್ತಿಗೂ ದ್ವೇಷದ ರಾಜಕಾರಣ ಮಾಡಿಲ್ಲ. ಇವ್ರು ಪೇ ಸಿಎಂ, ೪೦ ಪರ್ಸೆಂಟ್ ಕಮಿಷನ್ ಅಂತೆಲ್ಲ ಮಾಡಿದ್ರು. ಇವ್ರು ಇಷ್ಡೆಲ್ಲಾ ಮಾಡಿದ್ರು ಏನು ನಾವು ಸಾಫ್ಟ್ ಆಗಿ ಇದ್ವೇ ಹೊರತು, ಯಾವತ್ತಿಗೂ ಕೇಸ್ ಹಾಕುವ ಕೆಲಸ ಮಾಡಿಲ್ಲ. ಇವಾಗ ನನ್ನ ಮೇಲೆ ಅಟೆಂಪ್ಟ್ ಮರ್ಡರ್ ಕೇಸ್ ಹಾಕಿದ್ದಾರೆ. ಮುಖ್ಯಮಂತ್ರಿಗಳ ಉಪಸ್ಥಿತಿ ಯಲ್ಲೇ ಈ ರೀತಿ ನಡೆಯುತ್ತಿದೆ ಅಂದರೆ ಏನು ಅರ್ಥ..?

    ಪೊಲೀಸರಿಗೂ ಎಚ್ಚರಿಕೆ ನೀಡಿದ ಅಶ್ವತ್ಥ್ ನಾರಾಯಣ!

    “ರಾಜಕೀಯ ಎದುರಿಸುವ ಶಕ್ತಿಯನ್ನು ಭಗವಂತ ನಮಗೂ ಕೊಟ್ಟಿದ್ಸಾನೆ. ನಿಮಗೆ ಅಧಿಕಾರ ತಲೆಗೆ ಹೋಗಿದೆ. ಇದಕ್ಕೆಲ್ಲಾ ನಾನು ಹೆದರುವ ಭಯ ಪಡುವ ಮಾತೇ ಇಲ್ಲ. ಗಾಜಿನ ಮನೆಯಲ್ಲಿ ಇರೋರಿಗೆ ಇಷ್ಟು ಆದರೆ, ನಾವು ನ್ಯಾಯಯುತ ವಾಗಿ ಇರೋರಿಗೆ ಇನ್ನೂ ಇಷ್ಟು ಇರಬಾರದು. ಇಂತಹದ್ದೆಲ್ಲ ನೋಡೋಕೆ ನಾವು ರೆಡಿ ಇದ್ಸೇವೆ,ಅವ್ರು ಬರಲಿ. ಕಾನೂನಿನಲ್ಲಿ ನಾತ ಹೊಡೆಯೋರೋರೆ ಇಷ್ಟು ಮಾತಾಡಬೇಕಾದರೆ, ನಾವು ನ್ಯಾಯ ಪಾಲನೆ ಮಾಡೋರು ನಮಗೆ ಇನ್ನೂ ಎಷ್ಟು ಧೈರ್ಯ ಇರಬಾರದು? ಪೊಲೀಸರು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಫೋಸ್ಟಿಂಗೋ ಅಥವಾ ಇವರ ಮಾತು ಕೇಳಿ ಅಧಿಕಾರ ದುರ್ಬಳಕೆ ಮಾಡಿಕೊಂಡ್ರೆ ಪೊಲೀಸರೂ ಕಾನೂನಾತ್ಮಕದ ಕ್ರಮ ಎದುರಿಸಬೇಕು” ಎಂದು ಪೊಲೀಸರಿಗೂ ಅಶ್ವಥ್ ನಾರಾಯಣ್ ಎಚ್ಚರಿಕೆ ನೀಡಿದ್ದಾರೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts