More

    ಹಣ ವಾಪಸ್​ ಕೇಳಿದ್ದಕ್ಕೆ ಮಹಿಳೆಯ ಬರ್ಬರ ಹತ್ಯೆ; ಕೈ-ಕಾಲು ಫ್ರಿಡ್ಜ್​ನಲ್ಲಿ, ತಲೆ ಕಸದ ರಾಶಿಯಲ್ಲಿ…

    ಹೈದರಾಬಾದ್​: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಶ್ರದ್ದಾ ವಾಲ್ಕರ್‌(26) ಹತ್ಯೆ ಪ್ರಕರಣ ಮಾಸುವ ಮುನ್ನವೇ ಇದೀಗ ಅದೇ ರೀತಿಯ ಘಟನೆ ಒಂದು ಹೈದರಾಬಾದಿನಲ್ಲಿ ನಡೆದಿದ್ದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮೃತ ದುರ್ದೈವಿಯನ್ನು ಅನುರಾಧ ರೆಡ್ಡಿ(55) ಎಂದು ಗುರುತಿಸಲಾಗಿದ್ದು ಪ್ರಕರಣ ಸಂಬಂಧ ಆರೋಪಿ ಚಂದ್ರ ಮೋಹನ್​(48)ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಅಕ್ರಮ ಸಂಬಂಧ

    ಆರೋಪಿ ಚಂದ್ರ ಮೋಹನ್​ ಅನುರಾಧ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನಂತರ ಆಕೆಯ ದೇಹವನ್ನು ವಿಲೇವಾರಿ ಮಾಡುವ ಸಲುವಾಗಿ ಹಲವು ತುಂಡುಗಳನ್ನಾಗಿ ಕತ್ತಿರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಆಗ್ನೇಯ ವಲಯ ಡಿಸಿಪಿ ರೂಪೇಶ್​ ಮೇ 17ರಂದು ಮೂಸಿ ನದಿ ಸಮೀಪ ಅಫ್ಜಲ್​ ನಗರದ ಸಮುದಾಯ ಭವನ ಬಳಿ ಇರುವ ತೀಗಲ್​ಗಢ ಪ್ರದೇಶದಲ್ಲಿ ಕಪ್ಪು ಕವರ್​ ಒಂದರಲ್ಲಿ ಮಹಿಳೆಯ ತಲೆ ಪತ್ತೆಯಾಗಿರುವ ಕುರಿತು ಪೌರ ಕಾರ್ಮಿಕರೊಬ್ಬರು ದೂರು ನೀಡಿದ್ದರು.

    Police

    ಕೂಡಲ್ಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಒಟ್ಟು ಎಂಟು ತಂಡಗಳನ್ನು ರಚಿಸಿ ಮೊದಲಿಗೆ ಕೊಲೆಯ ಕುರಿತು ವಿಶ್ಲೇಷಿಸಿ ತನಿಖೆ ನಡೆಸಿದಾಗ ಆರೋಪಿ ಸೆರೆ ಸಿಕ್ಕಿದ್ಧಾನೆ. ಆರೋಪಿ ಚಂದ್ರ ಮೋಹನ್​ ಹಾಗೂ ಮೃತ ಮಹಿಳೆ ಅನುರಾಧ ರೆಡ್ಡಿ ನಡುವೆ ಅಕ್ರಮ ಸಂಬಂಧ ಇರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

    2018ರಲ್ಲಿ ಅನುರಾಧಗೆ ಚಂದ್ರ ಮೋಹನ್​ ತನ್ನ ಮನೆಯ ನೆಲ ಮಹಡಿಯಲ್ಲಿರುವ ಒಂದು ಭಾಗದಲ್ಲಿ ಇರಲು ಜಾಗ ನೀಡಿದ್ದಾನೆ. ಈ ವೇಳೆ ಆರೋಪಿಯೂ ಮೃತಳಿಂದ 7 ಲಕ್ಷ ರೂಪಾಯಿ ಹಣವನ್ನು ಪಡೆದು ಹಿಂತಿರುಗಿಸದೆ ಆಟವಾಡಿಸುತ್ತಿದ್ದ. ಈ ವೇಳ ಆರೋಪಿಗೆ ಹಣ ಹಿಂತಿರುಗಿಸುವಂತೆ ಪೀಡಿಸುತ್ತಿದ್ದರು ಎಂದು ತಿಳಿದು ಬಂದಿದೆ.

    ತುಂಡು ತುಂಡು ಕತ್ತರಿಸಿದ ಆರೋಪಿ

    ಇದರಿಂದ ತೀವ್ರ ಒತ್ತಡಕ್ಕೆ ಒಳಗಾಗಿದ್ದ ಚಂದ್ರ ಮೋಹನ್​ ಅನುರಾಧರನ್ನು ಮುಗಿಸಿದರೆ ತನಗೆ ತಾಪತ್ರಯ ಇರುವುದಿಲ್ಲ ಎಂದು ಭಾವಿಸಿ ಮೇ 12ರಂದು ಹಣ ಹಿಂತಿರುಗಿಸಿಉವ ನೆಪದಲ್ಲಿ ಆರೋಪಿಯೂ ಮೃತಳ ಜೊತೆ ಗಲಾಟೆ ತೆಗೆದಿದ್ದಾನೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಮನ ಬಂದಂತೆ ಇರಿದು ಹತ್ಯೆ ಮಾಡಿದ್ದಾನೆ.

    ಇದಾದ ಬಳಿಕ ಮೃತ ದೇಹವನ್ನು ಸಾಗಿಸುವ ಸಲುವಾಗಿ ಆರೋಪಿಯೂ ಕಲ್ಲು ಕಟ್​ ಮಾಡುವ ಎರಡು ಮೆಷಿನ್​ಗಳನ್ನು ಖರೀದಿಸಿದ್ದಾನೆ. ಬಳಿಕ ದೇಹದ ಭಾಗಗಳನ್ನ ಅಡಿಯಿಂದ ಮುಡಿವರೆಗೂ ತುಂಡರಿಸಿ ಕಪ್ಪು ಕವರ್​ನಲ್ಲಿ ಇರಿಸಿ ನಗರದ ವಿವಿಧೆಡೆ ಎಸೆದಿದ್ದಾನೆ.

    ಕೈ-ಕಾಲುಗಳನ್ನು ಫ್ರಿಡ್ಜ್​ನಲ್ಲಿ ಇರಿಸಿದ್ದ ಆರೋಪಿಯೂ ಕಾಂಡವನ್ನು ವಿಲೇವಾರಿ ಮಾಡಲು ಸೂಟ್​ಕೇಸ್​ನಲ್ಲಿ ಇರಿಸಿದ್ದನು ಎಂದು ತಿಳಿದು ಬಂದಿದೆ. ಇದಾದ ಬಳಿಕ ಆರೋಪಿಯೂ ಮೃತ ದೇಹದಿಮದ ದುರ್ವಾಸನೆ ಹರಡದಂತೆ ವಿವಿಧ ದ್ರವಗಳನ್ನು ಮೃತ ದೇಹದ ಭಾಗಗಳ ಸಿಂಪಡಿಸಿದ್ದ. ಬಳಿಕ ಅನುರಾಧ ಅವರ ಮೊಬೈಲ್​ನಿಂದ ಆಕೆಯ ಪರಿಚಯಸ್ಥರಿಗೆ ಮೆಸ್ಸೇಜ್​ ಮಾಡಿ ಜೀವಂತ ಇರುವುದಾಗಿ ನಂಬುವಂತೆ ಮಾಡಿ್ದ ಎಂದು ಆಗ್ನೇಯ ವಲಯ ಡಿಸಿಪಿ ರೂಪೇಶ್​ ತಿಳಿಸಿದ್ದಾರೆ.

    accused
    ಬಂಧಿತ ಆರೋಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts