More

    ಸಿಎಂ ಹಾದಿಯಲ್ಲಿ ಜಿ.ಪರಮೇಶ್ವರ​​​: ಸನ್ಮಾನ ರೂಪದಲ್ಲಿ ಹಾರ-ತುರಾಯಿ ಸ್ವೀಕರಿಸದಿರಲು ನಿರ್ಧಾರ

    ಬೆಂಗಳೂರು: ಈಗಾಗಲೇ ಮುಖ್ಯಮಂತ್ರಿಗಳು ಕೈಗೊಂಡಿರುವ ನಿರ್ಧಾರವನ್ನು ಅಭಿನಂಧಿಸುತ್ತಾ, ಇನ್ಮುಂದೆ ಸನ್ಮಾನ ರೂಪದಲ್ಲಿ ಸಾರ್ವಜನಿಕರಿಂದ ಹಾರ, ಶಾಲು, ಹೂವಿನ ಗುಚ್ಛಗಳನ್ನು ಸ್ವೀಕರಿಸುವುದಿಲ್ಲ ಎಂದು ಸಚಿವ ಡಾ| ಜಿ.ಪರಮೇಶ್ವರ ಹೇಳಿದ್ದಾರೆ.

    ಈ ಕುರಿತಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕರು ನನಗೆ ಗೌರವ-ಸನ್ಮಾನದ ರೂಪದಲ್ಲಿ ಹಾಗೂ ಅಭಿಮಾನದಿಂದ ಹಾರ -ತುರಾಯಿ, ಪುಷ್ಪಗುಚ್ಛಗಳು ಮತ್ತು ಶಾಲು-ಶಲ್ಯಗಳನ್ನು ನೀಡುವುದನ್ನು ಅತ್ಯಂತ ವಿನಯ ಪೂರ್ವಕವಾಗಿ ಸ್ವೀಕರಿಸದೇ ಇರಲು ನಿರ್ಧರಿಸಿದ್ದೇನೆ. ಇದು ನನ್ನ ಮನೆ-ಕಚೇರಿ ಹಾಗೂ ಸಾರ್ವಜನಿಕ ಸಮಾರಂಭಗಳಿಗೂ ಅನ್ವಯವಾಗಲಿದೆ. ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು ಕೈಗೊಂಡಿರುವ ನಿರ್ಧಾರವನ್ನು ಅಭಿನಂಧಿಸುತ್ತಾ ನಾನೂ ಅವರನ್ನು ಅನುಸರಿಸಲು ಬಯಸಿದ್ದೇವೆ.ಸಿಎಂ ಹಾದಿಯಲ್ಲಿ ಜಿ.ಪರಮೇಶ್ವರ​​​: ಸನ್ಮಾನ ರೂಪದಲ್ಲಿ ಹಾರ-ತುರಾಯಿ ಸ್ವೀಕರಿಸದಿರಲು ನಿರ್ಧಾರ
    ಕಾಣಿಕೆಗಳ ಮೂಲಕವೇ ಪ್ರೀತಿ ಮತ್ತು ಗೌರವಗಳನ್ನು ಸಲ್ಲಸಬೇಕೆಂದೇನಿಲ್ಲ. ನಮ್ಮೆಲ್ಲರ ಪ್ರೀತಿ ಅಮಾನ ಸದಾ ನನ್ನ ಮೇಲೆ ಅದಕ್ಕೆ ನಾನು ಋಣಿಯಾಗಿರವೆ ಎಂದು ಹೇಳಿದ್ದಾರೆ.

    ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನ ರೂಪದಲ್ಲಿ ಸಾರ್ವಜನಿಕರಿಂದ ಹಾರ ಶಾಲು ಹೂವಿನ ಗುಚ್ಛಗಳನ್ನು ಸ್ವೀಕರಿಸುವುದಿಲ್ಲ. ಒಂದು ವೇಳೆ ಪ್ರೀತಿಯಿಂದ ಕೊಡಬೇಕು ಎಂದಿದ್ದರೆ ಪುಸ್ತಕಗಳನ್ನು ನೀಡುವಂತೆ ಟ್ವೀಟ್​​ ಮಾಡಿದ್ದರು.

    ಜೂನ್ 1ರಿಂದ 200 ಯೂನಿಟ್ ಒಳಗೆ ವಿದ್ಯುತ್ ಬಿಲ್ ಬಂದರೆ ಕಟ್ಟಬೇಡಿ: ಸಂಸದ ಪ್ರತಾಪ್ ಸಿಂಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts