'NTR31': ಜೂ. ಎನ್​ಟಿಆರ್​ ಸಿನಿಮಾ ಬಗ್ಗೆ ಪ್ರಶಾಂತ್ ನೀಲ್ ಕೊಟ್ರು ಸುಳಿವು!

ವಿಜಯವಾಣಿ (1)
Published on

ಬೆಂಗಳೂರು: ಸ್ಯಾಂಡಲ್‌ವುಡ್​ನ ಖ್ಯಾತ ನಿರ್ದೇಶಕ, ಕೆಜಿಎಫ್​ ಖ್ಯಾತಿಯ ಪ್ರಶಾಂತ್ ನೀಲ್ ಪ್ರಸ್ತುತ ಪ್ರಭಾಸ್ ನಟನೆಯ ಸಲಾರ್​ ಭಾಗ 1ರ ಚಿತ್ರದ ಬಿಡುಗಡೆ ಕೆಲಸಗಳಲ್ಲಿ ನಿರತರಾಗಿದ್ದು, ಇದೆಲ್ಲದರ ಮಧ್ಯೆ ಟಾಲಿವುಡ್​ ನಟ ಜೂ. ಎನ್​ಟಿಆರ್​ ಅವರ ಮುಂದಿನ NTR31 ಚಿತ್ರದ ಕುರಿತಂತೆ ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಗ್ಯಾಂಗ್‌ಸ್ಟರ್ ಸಿನಿಮಾ ಸಲಾರ್‌ ಬಿಡುಗಡೆಗೆ ಕಾತರ ಹೆಚ್ಚಾಗಿದ್ದು, ಚಿತ್ರದ ಕಥಾಹಂದರ ಹೇಗಿರಲಿದೆ? ಯಾವ ವಿಷಯವನ್ನು ಪ್ರಭಾಸ್​ ಸಿನಿಮಾ ಹೇಳಲು ಹೊರಟಿದೆ ಎಂಬ ಕುತೂಹಲ ಚಿತ್ರಪ್ರೇಮಿಗಳಲ್ಲಿ ಮೂಡಿದೆ. ಸದ್ಯ ಈ ಎಲ್ಲಾ ಪ್ರಶ್ನೆಗಳನ್ನು ಸೋಷಿಯಲ್ ಮೀಡಿಯಾ ಸೇರಿದಂತೆ ಹಲವಾರು ತಾಣಗಳಲ್ಲಿ ಕೇಳುತ್ತಿರುವ ಫ್ಯಾನ್ಸ್​ಗೆ ಇದೀಗ ಸಲಾರ್​ ಜತೆಗೆ ಎನ್​ಟಿಆರ್​ 31 ಚಿತ್ರದ ಬಗ್ಗೆಯೂ ಕೂಡ ಮಾಹಿತಿ ಸಿಕ್ಕಿದೆ.

ಸಲಾರ್ ಚಿತ್ರದ ಪ್ರಚಾರದ ವೇಳೆ ಎನ್​ಟಿಆರ್​ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ ಪ್ರಶಾಂತ್ ನೀಲ್, ತಾತ್ಕಾಲಿಕವಾಗಿ NTR31 ಎಂದು ಹೆಸರಿಡಲಾದ ಈ ಚಿತ್ರವು ವಿಭಿನ್ನ ಭಾವನೆಗಳನ್ನು ಹೊಂದಿರುವ ವಿಭಿನ್ನ ಕಥಾಹಂದರ ಚಿತ್ರವಾಗಲಿದೆ. ಹಿಂದೆಂದೂ ನೋಡಿರದ ಕಥೆಯಿರಲಿದೆ. ಇದೊಂದು ಆ್ಯಕ್ಷನ್​ ಸಿನಿಮಾ ಎಂದು ಪ್ರೇಕ್ಷಕರು ಭಾವಿಸಿರುತ್ತಾರೆ. ಆದ್ರೆ, ಚಿತ್ರಕ್ಕೆ ಅದರದ್ದೇ ಆದ ಭಾವನೆಯಿದೆ ಎಂದು ಹೇಳಿದರು.

ಎನ್​ಟಿಆರ್​ 31 ಸಿನಿಮಾದ ಚಿತ್ರೀಕರಣ ಮುಂದಿನ ವರ್ಷದ ಮೊದಲಾರ್ಧದಲ್ಲಿ ಪ್ರಾರಂಭವಾಗಲಿದ್ದು, ಹೆಸರಾಂತ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಈ ಪ್ರತಿಷ್ಠಿತ ಪ್ಯಾನ್-ಇಂಡಿಯಾ ಪ್ರಾಜೆಕ್ಟ್​ ಅನ್ನು ನಿರ್ಮಿಸಲಿದೆ ಎಂದು ಮಾಹಿತಿ ಲಭಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net