ವೀರಶೈವ ಲಿಂಗಾಯತ ಮಹಾಸಭಾದ ಪೂರ್ವಭಾವಿ ಸಭೆ ಡಿ. 9ರಂದು

je721538035802367-abc
Published on

ರಾಣೆಬೆನ್ನೂರ: ದಾವಣಗೆರೆಯಲ್ಲಿ ಡಿ. 23, 24ರಂದು ನಡೆಯಲಿರುವ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನ ಕುರಿತು ಚರ್ಚಿಸಲು ಡಿ. 9ರಂದು ಸಂಜೆ 6ಕ್ಕೆ ನಗರದ ಮೆಡ್ಲೇರಿ ರಸ್ತೆ ಆದಿಶಕ್ತಿ ದೇವಸ್ಥಾನದ ಬಿ.ಕೆ. ಗುಪ್ತಾ ಸಮುದಾಯ ಭವನದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಆವರಗೊಳ್ಳದ ಓಂಕಾರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕೆ.ಎನ್. ಕೋರಧಾನ್ಯಮಠ ಅಧ್ಯಕ್ಷತೆ ವಹಿಸುವರು. ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್. ಕೋರಿಶೆಟ್ಟರ, ಸಂಘಟನೆಯ ಸ್ಥಳೀಯ ಘಟಕದ ಉಪಾಧ್ಯಕ್ಷ ಸಿ.ಎಸ್. ಕಲ್ಯಾಣಿ ಮತ್ತಿತರರು ಉಪಸ್ಥಿತರಿರುವರು ಎಂದು ಮಹಾಸಭಾದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net