ಅಬ್ಬಬ್ಬಾ! ವಿನೋದ್​ ರಾಜ್​ ಅವರ ತಿಂಗಳ ಆದಾಯ ಇಷ್ಟಿದ್ಯಾ?; ವಿಡಿಯೋ ನೋಡಿ

ವಿಜಯವಾಣಿ
Published on

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಆರೋಗ್ಯದಲ್ಲಿ ಉಂಟಾದ ವ್ಯತ್ಯಾಸದ ಬೆನ್ನಲ್ಲೇ ನಟಿಯ ಯೋಗಕ್ಷೇಮ ವಿಚಾರಿಸಿದ ವಿಜಯವಾಣಿ ತಂಡ, ಅವರ ಪುತ್ರ ನಟ ವಿನೋದ್​ ರಾಜ್​ ಅವರೊಂದಿಗೆ ಕೆಲ ಕಾಲ ಸಂದರ್ಶನ ನಡೆಸಿತು. ಈ ವೇಳೆ ವಿನೋದ್​ ತಮ್ಮ ಒಟ್ಟು ಆಸ್ತಿ ಮತ್ತು ತಿಂಗಳ ಆದಾಯದ ಮೊತ್ತವನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ.

"ಇಲ್ಲಿ ಒಟ್ಟು ಜಾಗ ಇರೋದು 7 ಎಕರೆ 16 ಗುಂಟೆ. ಈ ಜಾಗವನ್ನು ತೆಗೆದುಕೊಂಡಾಗ ಕೇವಲ ಒಂದೆರೆಡು ಹಲಸಿನ ಮರಗಳಿದ್ದವು ಅಷ್ಟೇ! ಇನ್ನೆಲ್ಲಾ ಮುಳ್ಳಿನ ಬೇಲಿಗಳ ಗಿಡವೇ ತುಂಬಿತ್ತು. ಇದನ್ನೆಲ್ಲಾ ಸ್ವಚ್ಚಗೊಳಿಸಲು ಹೋಗಿ ನನ್ನ ಮೂಗೇ ಕುಯ್ದು ಹೋಗಿತ್ತು. ಇದನ್ನು ಕ್ಲೀನ್​ ಮಾಡಲು ಹೋಗಿ ಬಹಳ ಅನುಭವಿಸಿದ್ದೇನೆ. ಇಷ್ಟು ಚೆನ್ನಾಗಿ ಕಾಣಿಸುತ್ತಿದೆ ಅಂದ್ರೆ, ಅದಕ್ಕೆ ಅಷ್ಟು ಕಠೋರ ಶ್ರಮವಿದೆ" ಎಂದು ವಿನೋದ್ ಹೇಳಿದರು.

"ಬೆಂಗಳೂರಿನ ಮೈಲಹಳ್ಳಿಯಲ್ಲಿ ನಮ್ಮ ತೋಟವಿದೆ. 20 ವರ್ಷದ ಹಿಂದೆ 21 ಲಕ್ಷಕ್ಕೆ ಜಮೀನು ಖರೀದಿ ಮಾಡಿದ್ವಿ, ಬೆಳೆದು ಒಳ್ಳೆ ವ್ಯಾಲ್ಯೂ ಬಂತು, ಕರೋನಾ ಸಮಯದಲ್ಲಿ ಉತ್ತಮ ವ್ಯಾಪಾರ ಕೂಡ ಮಾಡಿದೆವು. 103 ಸೈಟ್​ ವ್ಯಾಪಾರದಲ್ಲಿ 6-7.30 ಕೋಟಿ ರೂ. ಬಂತು".....ಇನ್ನು ಹೆಚ್ಚಿನ ಸಂಗತಿ ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ಕ್ಲಿಕ್ ಮಾಡಿ, ವೀಕ್ಷಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net