More

    ಜಗಳಗಂಟಿ ಸೋನು ಗೌಡ ; ‘ಮರೀಚಿ’ಯಲ್ಲಿ ಸವಾಲಿನ ಪಾತ್ರದ ಬಗ್ಗೆ ಏನಂತಾರೆ ನಟಿ?

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ಪುರಾಣಗಳಲ್ಲಿ ‘ಮರೀಚಿ’ ಎಂದರೆ ಬ್ರಹ್ಮನ ಮನಸ್ಸಿನಿಂದ ಹುಟ್ಟಿದ ಮಗ, ಅಸುರರ ಅಜ್ಜ, ಸಪ್ತಋಷಿಗಳಲ್ಲಿ ಒಬ್ಬರು ಎಂದೆಲ್ಲಾ ಅರ್ಥಗಳಿವೆ. ಆದರೆ, ಅದೇ ಹೆಸರಿನಲ್ಲಿ ಒಂದು ಮೆಡಿಕಲ್ ಥ್ರಿಲ್ಲರ್ ಜಾನರ್ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಸಿದ್ಧ್ರುವ್. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ವಿಜಯ್ ರಾಘವೇಂದ್ರ, ಸೋನು ಗೌಡ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಪಾತ್ರದ ಬಗ್ಗೆ ನಟಿ ಸೋನು, ‘ನಾನು ಮೌನ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ವಿಜಯ್ ರಾಘವೇಂದ್ರ ಅವರ ಪತ್ನಿಯ ಕ್ಯಾರಕ್ಟರ್. ‘ಮರೀಚಿ’ ಒಂದು ಎಕ್ಸ್‌ಪೆರಿಮೆಂಟಲ್ ಸಿನಿಮಾ ಎನ್ನಬಹುದು. ನನ್ನ ಪಾತ್ರಕ್ಕೂ ಬೇರೆ ಬೇರೆ ಆಯಾಮಗಳಿವೆ. ಶೂಟಿಂಗ್ ವೇಳೆ ಹೊಸದೇನೋ ಮಾಡುತ್ತಿದ್ದೇನೆ ಅಂತನ್ನಿಸುತ್ತಿತ್ತು’ ಎಂದು ಹೇಳಿಕೊಳ್ಳುತ್ತಾರೆ.

    ಇದನ್ನೂ ಓದಿ : ತೆಲಂಗಾಣ ನೂತನ ಸಿಎಂ ರೇವಂತ್​ ರೆಡ್ಡಿ ಹೆಸರಿನಲ್ಲಿ ಬಯೋಪಿಕ್ ತೆಗೆಯಲು ಮುಂದಾದ ಖ್ಯಾತ ನಿರ್ಮಾಪಕ

    ಜಗಳಗಂಟಿ ಸೋನು ಗೌಡ ; ‘ಮರೀಚಿ’ಯಲ್ಲಿ ಸವಾಲಿನ ಪಾತ್ರದ ಬಗ್ಗೆ ಏನಂತಾರೆ ನಟಿ?

    ಪ್ಲಸ್ ಮತ್ತು ಮೈನಸ್‌ಗಳ ಸುತ್ತ!
    ‘ಮರೀಚಿ’ ಚಿತ್ರದಲ್ಲಿ ಎಲ್ಲ ಪಾತ್ರಗಳಿಗೂ ಪ್ರಾಮುಖ್ಯ ನೀಡಲಾಗಿದೆ. ‘ಎಲ್ಲ ಪಾತ್ರಗಳಿಗೂ ಪ್ಲಸ್ ಮತ್ತು ಮೈನಸ್ ಎರಡೂ ಇದೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ನಾಯಕ ಮತ್ತು ನಾಯಕಿ ಹೀಗೇ ಇರುತ್ತಾರೆ ಅಂತ ಒಂದು ಯೋಚನೆ ಇರುತ್ತದೆ. ಆದರೆ, ಒಬ್ಬ ವ್ಯಕ್ತಿ ಒಳ್ಳೆಯದನ್ನೂ ಮಾಡುತ್ತಾನೆ, ಕೆಟ್ಟದ್ದನ್ನೂ ಮಾಡುತ್ತಾನೆ. ಹೀಗಾಗಿ ಇಲ್ಲಿ ನಾಯಕನಲ್ಲೂ ಪಾಸಿಟಿವ್ ಮತ್ತು ನೆಗೆಟಿವ್‌ಗಳಿವೆ ಹಾಗೇ ನಾಯಕಿಯಲ್ಲೂ ಪಾಸಿಟಿವ್ ಮತ್ತು ನೆಗೆಟಿವ್‌ಗಳಿವೆ. ಹೀಗಾಗಿ ಪಾತ್ರ ಚಾಲೆಂಜಿಂಗ್ ಆಗಿತ್ತು’ ಎಂದು ಮಾಹಿತಿ ನೀಡುತ್ತಾರೆ ಸೋನು.

    ಇದನ್ನೂ ಓದಿ : ಅಬ್ಬಬ್ಬಾ! ವಿನೋದ್​ ರಾಜ್​ ಅವರ ತಿಂಗಳ ಆದಾಯ ಇಷ್ಟಿದ್ಯಾ?; ವಿಡಿಯೋ ನೋಡಿ

    ಜಗಳಗಂಟಿ ಸೋನು ಗೌಡ ; ‘ಮರೀಚಿ’ಯಲ್ಲಿ ಸವಾಲಿನ ಪಾತ್ರದ ಬಗ್ಗೆ ಏನಂತಾರೆ ನಟಿ?

    ನಮ್ಮದು ಬೇರೆ ರೀತಿಯ ಜಗಳ
    ‘ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ’ ಎಂಬ ಗಾದೆ ಮಾತಿದೆ. ಆದರೆ, ‘ಮರೀಚಿ’ ಚಿತ್ರದಲ್ಲಿ ಪತಿ, ಪತ್ನಿಯ ಜಗಳವೇ ವಿಭಿನ್ನವಾಗಿ ಇರಲಿದೆಯಂತೆ. ‘ಚಿತ್ರದಲ್ಲಿ ಪ್ರೀತಿ ಜತೆ ಜಗಳವೂ ಇದೆ. ಆದರೆ, ಇಲ್ಲಿ ಗಂಡ- ಹೆಂಡತಿಯ ಜಗಳವೂ ವಿಭಿನ್ನ ರೀತಿ ಇದೆ. ಗಂಡ ಸರಿ ಅಂತ ಗೊತ್ತಿದ್ದರೂ, ನನ್ನದೇ ತಪ್ಪು ಅಂತ ತಿಳಿದಿದ್ದರೂ ಒಪ್ಪದೇ, ಜೋರಾಗಿ ಕೂಗಾಡದೇ, ವಾದಿಸುವ ಪತ್ನಿಯ ಪಾತ್ರ ನನ್ನದು. ಹೀಗಾಗಿ ರಾಘು ಸರ್ ಜತೆಗಿನ ಜಗಳದ ಸೀನ್‌ಗಳೂ ಕೂಡ ಚಾಲೆಂಜಿಂಗ್ ಅನ್ನಿಸಿತು’ ಎಂದು ನಗುತ್ತಾರೆ ಸೋನು ಗೌಡ. ‘ಮರೀಚಿ’ ಜತೆ ಅವರು ಇನ್ನೂ ಕೆಲ ಕಥೆಗಳನ್ನು ಕೇಳುತ್ತಿದ್ದು, ಸದ್ಯಕ್ಕೆ ಯಾವುದನ್ನೂ ಒಪ್ಪಿಕೊಂಡಿಲ್ಲವಂತೆ.

    ಜಗಳಗಂಟಿ ಸೋನು ಗೌಡ ; ‘ಮರೀಚಿ’ಯಲ್ಲಿ ಸವಾಲಿನ ಪಾತ್ರದ ಬಗ್ಗೆ ಏನಂತಾರೆ ನಟಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts