ಕಡೆಗೂ ಪ್ರಜ್ವಲ್ ಪ್ರತ್ಯಕ್ಷ! ಮೇ.31ಕ್ಕೆ ಬೆಂಗಳೂರಿಗೆ ಬರ್ತಿನಿ ಎಂದ ಹಾಲಿ ಸಂಸದ

WhatsApp Image 2024-05-27 at 3.54.50 PM
Published on

ಬೆಂಗಳೂರು: ಕಡೆಗೂ ವಿಡಿಯೋ ಸಂದೇಶದ ಮೂಲಕ ಪ್ರತ್ಯಕ್ಷವಾದ ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ, ಇದೇ ಮೇ.31ಕ್ಕೆ ಎಸ್​ಐಟಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದೇನೆ ಎಂದಿದ್ದಾರೆ.

ವಿದೇಶದಲ್ಲಿಯೇ ಕುಳಿತು ವಿಡಿಯೋ ಮಾಡಿರುವ ಹಾಲಿ ಸಂಸದ, ನನ್ನ ತಾಯಿ, ಜನರು ಮತ್ತು ಜೆಡಿಎಸ್ ಕಾರ್ಯಕರ್ತರಿಗೆ ಕ್ಷಮೆ ಕೇಳುತ್ತೇನೆ. ಮೇ. 31ರಂದು ಭಾರತಕ್ಕೆ ಬರುತ್ತೇನೆ, ಎಸ್​ಐಟಿ ಮುಂದೆ ಹಾಜರಾಗಿ, ತನಿಖೆಯನ್ನು ಎದುರಿಸುತ್ತೇನೆ ಎಂದಿದ್ದಾರೆ.

ನಾನು ವಿದೇಶಕ್ಕೆ ಹೋಗುವ ಪ್ಲ್ಯಾನ್ ಮುಂಚೆಯೇ ನಿಗದಿಯಾಗಿತ್ತು. ಅದರ ಮೇರೆಗೆ ಹೋಗಿದ್ದು, ನನ್ನ ತಾತ ಎಚ್​.ಡಿ. ದೇವೇಗೌಡರಿಗೆ ಕ್ಷಮೆಯಾಚಿಸುತ್ತೇನೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net