ಠಾಣೆಯಲ್ಲೇ ಪೊಲೀಸರಿಂದ ಮದ್ಯಪಾನ; ಕುಡಿಯುತ್ತಿರುವ ವಿಡಿಯೋ ವೈರಲ್​..

Pub crime
Published on

ಕೋಲಾರ: ಠಾಣೆಯಲ್ಲೇ ಪೊಲೀಸರು ಮದ್ಯಪಾನ ಮಾಡಿದ ಪ್ರಸಂಗ ನಡೆದಿದ್ದು, ಅದರ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೋಲಾರ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಸಿಬ್ಬಂದಿ ಠಾಣೆಯಲ್ಲೇ ಕುಳಿತು ಮದ್ಯಪಾನ ಸೇವನೆ ಮಾಡಿದ್ದಾರೆ. ಈ ಕುರಿತು ಪೊಲೀಸ್ ಕಾನ್​ಸ್ಟೇಬಲ್​ಗಳಾದ ಚಲಪತಿ, ಆಂಜಿ ಹಾಗೂ ಮಂಜುನಾಥ್ ವಿರುದ್ಧ ಆರೋಪವಿದೆ.

ಪೊಲೀಸ್ ಠಾಣೆಯನ್ನೇ ಬಾರ್ ಆಗಿ ಪರಿವರ್ತಿಸಿರುವ ಇವರು ಕೆಲಸದ ಸಮಯದಲ್ಲಿ ಮದ್ಯಪಾನ ಮಾಡುತ್ತ ಮಜಾ ಮಾಡುತ್ತಿರುವುದು ಕಂಡುಬಂದಿದೆ. ಈ ದೃಶ್ಯಾವಳಿಯ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇವರ ಈ ವರ್ತನೆ ಸಾರ್ವಜನಿಕರ ಟೀಕೆಗೂ ಗುರಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net