ಲಾಟರಿಯಲ್ಲಿ ಆಟೋ ಚಾಲಕನಿಗೆ 25 ಕೋಟಿ ರೂ. ಬಂಪರ್​ ಪ್ರೈಜ್!

Lottery
Published on

ತಿರುವನಂತಪುರ: ದಿನವಿಡೀ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಚಾಲಕನೊಬ್ಬನಿಗೆ ಇದೀಗ ಭಾಗ್ಯದ ಬಾಗಿಲು ತೆರೆದಿದೆ. ಅದರಲ್ಲೂ ಆತನ ಅದೃಷ್ಟ ಸಾಮಾನ್ಯದ್ದಲ್ಲ. ಏಕೆಂದರೆ ಆತನಿಗೆ ಲಾಟರಿಯಲ್ಲಿ ಬರೋಬ್ಬರಿ 25 ಕೋಟಿ ರೂ. ಬಂದಿದೆ.

ಕೇರಳ ಸರ್ಕಾರದ ಓಣಂ ವಿಶೇಷ ಲಾಟರಿಯಲ್ಲಿ ತಿರುವನಂತಪುರದ ಆಟೋಚಾಲಕ ಅನೂಪ್​ 25 ಕೋಟಿ ರೂ. ಬಂಪರ್ ಬಹುಮಾನಕ್ಕೆ ಪಾತ್ರನಾಗಿದ್ದಾನೆ. ಈತ ಪತ್ನಿ, ಮಗು ಹಾಗೂ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದು, ಇದೀಗ ಲಾಟರಿ ಬಂಪರ್ ಬಹುಮಾನದಿಂದಾಗಿ ಈ ಕುಟಂಬದ ಭಾಗ್ಯದ ಬಾಗಿಲು ತೆರೆದಂತಾಗಿದೆ.

ಸ್ಥಳೀಯ ಪಝವಂಗಡಿ ಗಣೇಶ ದೇವಸ್ಥಾನ ಬಳಿಯ ಏಜೆಂಟ್​​ನಿಂದ ಈತ ಟಿಕೆಟ್ ಖರೀದಿಸಿದ್ದು, ಟಿಕೆಟ್ ಕೊಟ್ಟ ಸಬ್​ ಏಜೆಂಟ್ ಈತನ ಹತ್ತಿರದ ಸಂಬಂಧಿ. ತೆರಿಗೆ ಮೊತ್ತ ಕಡಿತದ ಬಳಿಕ ಅನೂಪ್​ ಸುಮಾರು 15 ಕೋಟಿ ರೂ. ಬಹುಮಾನವಾಗಿ ಪಡೆಯಲಿದ್ದಾನೆ. ಕಳೆದ ವರ್ಷದ ಓಣಂ ಬಂಪರ್ ಪ್ರೈಜ್​ ಕೂಡ ಆಟೋಚಾಲಕನ ಪಾಲಾಗಿತ್ತು. ಪಿ.ಆರ್. ಜಯಪಾಲನ್ ಎಂಬಾತ ಬಂಪರ್​ ಬಹುಮಾನ ಗಳಿಸಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net