ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಖಂಡಿತ ಈಡೇರಿಸುತ್ತೇವೆ: ಪ್ರಧಾನಿ ಮೋದಿ

WhatsApp Image 2024-05-20 at 2.18.45 PM
Published on

ಭುವನೇಶ್ವರ್: ಈ ಲೋಕ ಸಮರದಲ್ಲಿ ನಾವು ಗೆಲುವು ದಾಖಲಿಸಿ, ಮತ್ತೆ ಅಧಿಕಾರಕ್ಕೆ ಬಂದರೆ ಒಂದು ರಾಷ್ಟ್ರ, ಒಂದು ಚುನಾವಣೆ ಮತ್ತು ಏಕರೂಪ ನಾಗರಿಕ ಸಂಹಿತೆ ಯೋಜನೆಗಳ ಅನುಷ್ಠಾನವನ್ನು ಜಾರಿಗೊಳಿಸುತ್ತೇವೆ ಎಂದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಖಂಡಿತ ಈಡೇರಿಸುತ್ತದೆ ಎಂದು ಹೇಳಿದರು.

ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ, "ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದ ಕೂಡಲೇ ನಮ್ಮ ಸರ್ಕಾರದಿಂದ ಜನಸಾಮಾನ್ಯರು ಏನನ್ನು ನಿರೀಕ್ಷಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ನನ್ನ 100 ದಿನಗಳ ಯೋಜನೆಗೆ ಇನ್ನೂ 25 ದಿನಗಳನ್ನು ಸೇರಿಸಿ, ದೇಶದ ಯುವಜನತೆಯಿಂದ ಮತ್ತಷ್ಟು ಸಲಹೆಗಳನ್ನು ಪಡೆಯುತ್ತೀನಿ" ಎಂದರು.

"ಭಾರತದ ಯುವಶಕ್ತಿಯಿಂದ ಸರ್ಕಾರ ನಿರ್ಮಾಣಕ್ಕೆ ಏನು ಅಗತ್ಯ ಸಲಹೆಗಳು ಬೇಕಿದೆಯೋ, ಅದನ್ನು ಪಡೆಯಲು ಬಯಸುತ್ತೀವಿ. ನಮ್ಮ ಪಕ್ಷ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದು, ಸರ್ಕಾರ ರಚಿಸಿದ ಬಳಿದ ಅದರಿಂದ ಜನರು ಏನು ಬಯಸುತ್ತಾರೆ? ಎಂಬುದು ನನಗೆ ತಿಳಿಯಬೇಕು. ಯಾಕಂದ್ರೆ, ಅಂತಿಮವಾಗಿ ಅವರ ನಿರೀಕ್ಷೆಗಳನ್ನು ಈಡೇರಿಸುವುದೇ ನನ್ನ ಗುರಿ, ದೇಶದ ಅಭಿವೃದ್ಧಿಗೆ ಅದೇ ಅಡಿಪಾಯ" ಎಂದು ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net