ಭಗವದ್ಗೀತೆ ಓದಿದ ಕಳ್ಳನಿಗೆ ಪಶ್ಚಾತ್ತಾಪ; 9 ವರ್ಷಗಳ ಹಿಂದೆ ದರೋಡೆ ಮಾಡಿದ್ದ ಆಭರಣ ಮರಳಿ ತಂದಿಟ್ಟ!

thief
Published on

ಒಡಿಶಾ: ದೇವಸ್ಥಾನವೊಂದರಲ್ಲಿ ಒಂಬತ್ತು ವರ್ಷಗಳ ಹಿಂದೆ 4 ಲಕ್ಷ ಮೌಲ್ಯದ ಆಭರಣಗಳನ್ನು ಕದ್ದಿದ್ದ ಕಳ್ಳ ಇದೀಗ ಪಶ್ಚಾತ್ತಾಪದಿಂದ ವಸ್ತುಗಳನ್ನು ಹಿಂದಿರುಗಿಸಿ ಕ್ಷಮೆಯಾಚಿಸಿದ್ದಾನೆ. ಗೋಪಿನಾಥಪುರದ ಗೋಪಿನಾಥ ದೇಗುಲದಲ್ಲಿ ಶ್ರೀಕೃಷ್ಣನ ಆಭರಣಗಳು ಕಳ್ಳತನವಾಗಿತ್ತು.

ಇತ್ತೀಚೆಗೆ ಭಗವದ್ಗೀತೆ ಓದಿದ ಬಳಿಕ ತಪ್ಪಿನ ಬಗ್ಗೆ ಪಶ್ಚಾತ್ತಾಪವಾಯಿತು. ಅಲ್ಲದೇ ಆಭರಣಗಳನ್ನು ಕದ್ದ ಬಳಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇನೆ. ಹೀಗಾಗಿ ರಾಧಾ-ಕೃಷ್ಣರ ಆಭರಣಗಳನ್ನು ಹಿಂತಿರುಗಿಸುತ್ತಿದ್ದೇನೆ ಎಂದು ಪತ್ರದಲ್ಲಿ ಕಳ್ಳ ತನ್ನ ಹೆಸರು ಉಲ್ಲೇಖಿಸಿದೆ ಹೇಳಿಕೊಂಡಿದ್ದಾನೆ.

ರಾಧಾ-ಕೃಷ್ಣ ವಿಗ್ರಹದ ಕಿರೀಟ, ಕಿವಯೋಲೆ, ಬಳೆ, ಕೊಳಲು ಇದ್ದ ಬ್ಯಾಗ್ ದೇವಸ್ಥಾನದ ಮುಂಬಾಗಿಲ ಬಳಿ ಸಿಕ್ಕಿದೆ. ತನಗಾದ ಪಶ್ಚಾತ್ತಾಪದ ಬಗ್ಗೆ ಕ್ಷಮಾಪಣೆ ಬರೆದ ಪತ್ರ ಹಾಗೂ ಪ್ರಾಯಶ್ಚಿತ್ತವಾಗಿ ನೀಡಿದ್ದ 300 ರೂ. ಬ್ಯಾನ್​ನಲ್ಲಿ ಇತ್ತು ಎಂದು ದೇವಸ್ಥಾನದ ಅರ್ಚಕ ದೇಬೇಶ್ ಚಂದ್ರ ಮೊಹಂತಿ ಅವರ ಬಳಿ ಹೇಳಿಕೊಂಡಿದ್ದಾರೆ.

ಒಂಭತ್ತು ವರ್ಷಗಳ ಹಿಂದೆ ಕಳ್ಳತನವಾಗಿದ್ದ ದೇವರ ಆಭರಣಗಳು ಮರಳಿ ಪತ್ತೆಯಾಗಿರುವುದರಿಂದ ದೇವಾಲಯ ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತರು ಸಂತಸ ಪಟ್ಟಿದ್ದಾರೆ. ಪಶ್ಚಾತ್ತಾಪ ಪಟ್ಟಿರುವ ಕಳ್ಳ ಶ್ರೀಕೃಷ್ಣನ ಬೋಧನೆಗಳ ಮಹತ್ವವನ್ನು ಅವನು ಅರಿತುಕೊಂಡಿರುವುದು ಭಗವದ್ಗೀತೆಯ ಶಕ್ತಿಗೆ ಸಾಕ್ಷಿಯಾಗಿದೆ ಎಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net