ಸಿನಿಮಾ

ದೇವೇಗೌಡ್ರು ಗಟ್ಟಿಮುಟ್ಟಾಗಿದ್ದಾರೆ, ಬೇಡಾ ಅಂದ್ರೂ ಮತ್ತೆ ಲೋಕಸಭೆಯಲ್ಲಿ ಕೂರಿಸ್ತೀವಿ: ಎಚ್​.ಡಿ.ರೇವಣ್ಣ

ಹಾಸನ: “ದೇವೇಗೌಡು ಇನ್ನೂ ನಾಲ್ಕೈದು ವರ್ಷ ಚೆನ್ನಾಗಿರ್ತಾರೆ. ಅವರನ್ನು ಲೋಕಸಭೆಗೆ ಕರ್ಕೊಂಡು ಹೋಗಿ ಕೂರಿಸಿಯೇ ಕೂರಿಸ್ತೀವಿ. ಅವ್ರು ಬೇಡ ಅಂದ್ರೂ ಬಿಡಲ್ಲ. ದೇವೇಗೌಡರು ಎಲ್ಲಿ ಸ್ಪರ್ಧಿಸುತ್ತಾರೆ ಅನ್ನೋದನ್ನು ನೋಡೋಣ” ಎಂದು ಹಾಸನದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: VIDEO | ಸಿದ್ದರಾಮಯ್ಯ ಸಿಎಂ ಆಗದಿದ್ದರೆ ಅರ್ಧ ಮೀಸೆ ಬೋಳಿಸ್ತೀನಿ, 1000 ರೂ. ಕೊಡ್ತೀನಿ ಎಂದ ಬಾಲಕ!

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಾನು ಬದುಕಿಂದಂತೆ ಹಾಸನವನ್ನು ರಾಜ್ಯದಲ್ಲಿ ನಂ.1 ಜಿಲ್ಲೆಯನ್ನಾಗಿ ಮಾಡಿಲ್ಲ ಅಂದರೆ ನಾನು ರಾಜಕೀಯದಲ್ಲೇ ಇರಲ್ಲ. ನನ್ನ ಗ್ರಹಗತಿ ಎಲ್ಲವೂ ಚೆನ್ನಾಗಿದೆ. ನಾನು ಬದುಕಿರುವುದರೊಳಗೆ ಮಾಡಿ ತೋರಿಸುತ್ತೇನೆ ಎಂದು ಸವಾಲ್ ಹಾಕಿದರು.

ಯಾರೂ ಧೃತಿಗೆಡಬೇಡಿ!

ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ರೇವಣ್ಣ ಮಾತನಾಡುತ್ತಾ, ರಾಷ್ಟ್ರೀಯ ಪಕ್ಷದ ಮುಖಂಡರೇ ಸೋತಿರುವಾಗ ನಮ್ಮದೇನಿದೆ. ನಮ್ಮ ಪಕ್ಷದವರು ಧೃತಿಗೆಡಬೇಕಾಗಿಲ್ಲ. 1991ರಲ್ಲಿ ಎಂಟಕ್ಕೆ ಎಂಟು ಕ್ಷೇತ್ರಗಳಲ್ಲಿ ಸೋತಿದ್ದೆವು. ಮೊದಲನೆಯದಾಗಿ ಪಕ್ಷತೀತವಾಗಿ ಮತ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ.

ಇದನ್ನೂ ಓದಿ: ಮುಸ್ಲಿಂ ಸಮುದಾಯಕ್ಕೆ ಡಿಸಿಎಂ, ಗೃಹಖಾತೆ ನೀಡಬೇಕು; ಕರ್ನಾಟಕ ಮುಸ್ಲಿಂ ಸಂಘದಿಂದ ಒತ್ತಾಯ

ಎರಡೂ ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಪಕ್ಷವನ್ನು ಮುಗಿಸಬೇಕೆಂದು ನಿರ್ಧರಿಸಿ, ಕಳೆದ ನಾಲ್ಕು ವರ್ಷದಿಂದ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಮಂಡ್ಯದಲ್ಲಿ‌ ಎರಡೂ ರಾಷ್ಟ್ರೀಯ ಪಕ್ಷಗಳೂ ನಮ್ಮನ್ನು ಸೋಲಿಸಬೇಕೆಂದು ಪ್ರಯತ್ನಿಸಿತ್ತು. ಇಂದು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಜೆಪಿ ಮುಖಂಡರೇ ಕಾರಣ ಎಂದರು.

Latest Posts

ಲೈಫ್‌ಸ್ಟೈಲ್