ಸಿನಿಮಾ

ಶಿವಮೊಗ್ಗದ ಯುವತಿ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಸ್ಟ್; ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ಮುಂಬೈಗೆ ಹೊರಟಿದ್ದಳಾ ಆ ಹುಡುಗಿ?

ಶಿವಮೊಗ್ಗ: ದಾವಣಗೆರೆ ಮೂಲದ ರಂಜಿತಾ(20) ಎಂಬ ಯುವತಿಯ ಅಪಹರಣ ಪ್ರಕರಣಕ್ಕೆ ಮಹತ್ವದ ತಿರುವು ಲಭಿಸಿದೆ. ಮತಾಂತರಗೊಳ್ಳಲು ಹೋರಟ ಯುವತಿ ಅಪಹರಣದ ಕಥೆ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ಇದೀಗ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲು ಹೊರಟಿದ್ದ ಯುವತಿ ಸುರಕ್ಷಿತವಾಗಿ ಪಾಲಕರ ಸುಪರ್ದಿಗೆ ಸೇರಿದ್ದಾಳೆ.

ಮಗಳು ರಂಜಿತಾಳನ್ನು ಯಾರೋ ಅಪಹರಣ ಮಾಡಿದ್ದಾರೆ ಎಂದು ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಪಾಲಕರು ದೂರು ನೀಡಿದ್ದರು. ಯುವತಿಯ ಕುಟುಂಬಸ್ಥರಿಗೆ 20 ಲಕ್ಷ ರೂಪಾಯಿಗೆ ದುಷ್ಕರ್ಮಿಗಳು ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ಮುಂದೆ ಆಗುವ ಅನಾಹುತವನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯೊಡ್ಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದರು.

ಕ್ರಿಶ್ಚಿಯನ್ ಧರ್ಮದಿಂದ ಪ್ರಭಾವಿತ

ಇದೀಗ ಜಯನಗರ ಪೊಲೀಸರ ತನಿಖೆಯಿಂದ ಅಪಹರಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಕ್ರಿಶ್ಚಿಯನ್ ಧರ್ಮದಿಂದ ತೀವ್ರ ಪ್ರಭಾವಿತಳಾದ ರಂಜಿತಾ, ಸೇವೆ ಮಾಡಲು ನಿರ್ಧರಿಸಿ ಮಂತಾತರಗೊಳ್ಳಲು ಮುಂದಾಗಿದ್ದಳು ಎಂಬುದು ಬಹಿರಂಗವಾಗಿದೆ.

ಮುಂಬೈನಲ್ಲಿ ಮತಾಂತರಗೊಳ್ಳಲು ನಿರ್ಧಾರ

ಚೆನ್ನಗಿರಿಯ ನವಚೇತನ ಕ್ರಿಶ್ಚಿಯನ್ ಶಾಲೆಯಲ್ಲಿ ಓದಿದ್ದ ರಂಜಿತಾ, ಹೈಸ್ಕೂಲ್ ಸಮಯದಿಂದಲೂ ಕ್ರಿಶ್ಚಿಯನ್ ಧರ್ಮದ ಬಗ್ಗೆ ಒಲವು ಹೊಂದಿದ್ದಳು. ಪಿಯುಸಿ ಬಳಿಕ ಫಿಸಿಯೋ ಥೆರಫಿ ವ್ಯಾಸಾಂಗಕ್ಕೆ ಶಿವಮೊಗ್ಗದ ನರ್ಸಿಂಗ್ ಕಾಲೇಜು ಸೇರಿದ್ದ ವೇಳೆ, ಕೇರಳ ಮೂಲದ ಕ್ರಿಶ್ಚಿಯನ್ ವಿದ್ಯಾರ್ಥಿನಿಯರ ಸಂಪರ್ಕದಿಂದ ಪ್ರಭಾವಿತಳಾಗಿದ್ದಳು. ಇದೇ ಕಾರಣಕ್ಕೆ ಮುಂಬೈಗೆ ಹೋಗಿ ಮತಾಂತರಗೊಂಡು, ಅಲ್ಲಿನ ಕ್ಯಾಥೊಲಿಕ್ ಚರ್ಚ್​ಗೆ ಸೇರಿ, ಸನ್ಯಾಸಿನಿಯಾಗಿ ಸೇವೆ ಮಾಡಲು ರಂಜಿತಾ ನಿರ್ಧರಿಸಿದ್ದಳು.

ಇದನ್ನೂ ಓದಿ: ನಿಮ್ಮ ಮುಂದಿನ ಜನಾಂಗ ಕೊಲ್ಲೂರು ದೇವಸ್ಥಾನಕ್ಕೆ ಬರಬೇಕೆಂದರೆ ‘ದಿ ಕೇರಳ ಸ್ಟೋರಿ’ ಸಿನಿಮಾ ನೋಡಿ!

ಹಣಕ್ಕಾಗಿ ಅಪಹರಣದ ನಾಟಕ

ಮುಂಬೈನಲ್ಲಿ ವಾಸಿಸಲು ಹಣದ ಅವಶ್ಯಕತೆ ಇದ್ದ ಹಿನ್ನೆಲೆ ರಂಜಿತಾ ಅಪಹರಣ ಕಥೆ ಕಟ್ಟಿದ್ದಾಳೆ. ಪಾಲಕರಿಗೆ ತನ್ನ ಮೊಬೈಲ್​ನಿಂದಲೇ ಕರೆ ಮಾಡಿ 20 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಬಳಿಕ 5 ಸಾವಿರ ಹಣ ಡ್ರಾ ಮಾಡಿ, ಶಿವಮೊಗ್ಗ- ತೀರ್ಥಹಳ್ಳಿ- ಶೃಂಗೇರಿ-ಬೆಂಗಳೂರು ಮೂಲಕ ರಂಜಿತಾ ಹುಬ್ಬಳಿಗೆ ಹೋಗಿದ್ದಾಳೆ. ಹುಬ್ಬಳ್ಳಿಯಿಂದ ಮುಂಬೈಗೆ ಹೋಗಲು ತಯಾರಿ ಮಾಡಿಕೊಂಡಿದ್ದ ರಂಜಿತಾಳನ್ನು ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಠಾಣೆಗೆ ಕರೆತಂದು ವಿಚಾರಣೆ ನಡೆಸಿ, ಕೌನ್ಸೆಲಿಂಗ್ ಬಳಿಕ ಜಯನಗರ ಪೊಲೀಸರು ಪಾಲಕರಿಗೆ ಒಪ್ಪಿಸಿದ್ದಾರೆ.

Latest Posts

ಲೈಫ್‌ಸ್ಟೈಲ್