ಮಾನ್ವಿತಾ ಜತೆ ನಕುಲ್ ರೊಮ್ಯಾನ್ಸ್​! "BAD" ಚಿತ್ರಕ್ಕೆ ಕವಿರಾಜ್ ಸಾಥ್​

WhatsApp-Image-2024-03-29-at-8.23.27-PM
Published on

ಬೆಂಗಳೂರು: ಪಿ.ಸಿ.ಶೇಖರ್ ನಿರ್ದೇಶನದ, ಎಸ್. ಆರ್. ವೆಂಕಟೇಶ್ ಗೌಡ ನಿರ್ಮಿಸಿರುವ ಹಾಗೂ ನಕುಲ್ ಗೌಡ ಮತ್ತು ಮಾನ್ವಿತಾ ಹರೀಶ್​ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ "BAD" ಚಿತ್ರಕ್ಕಾಗಿ ಖ್ಯಾತ ಸಾಹಿತಿ ಕವಿರಾಜ್ "ಮಾತಿಗೂ ಮಾತಿಗೂ" ಎಂಬ ಸುಂದರ ಯುಗಳಗೀತೆ ಬರೆದಿದ್ದಾರೆ. ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಈ ಹಾಡನ್ನು ಸರಿಗಮಪ ಖ್ಯಾತಿಯ ಪೃಥ್ವಿ ಭಟ್ ಹಾಗೂ ಸುನೀಲ್ ಗುಜಗೊಂಡ ಸುಶ್ರಾವ್ಯವಾಗಿ ಹಾಡಿದ್ದಾರೆ. ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಹಾಡು ಜನಮನಸೂರೆಗೊಳ್ಳುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಈಗಾಗಲೇ ಟೀಸರ್ ಹಾಗೂ ಟ್ರೇಲರ್ ಮೂಲಕ ಸದ್ದು ಮಾಡುತ್ತಿರುವ ಬ್ಯಾಡ್​ ಚಿತ್ರ, ಹಾಡುಗಳ ಮೂಲಕವೂ ಜನಪ್ರಿಯವಾಗುತ್ತಿದೆ. ಚಿತ್ರ ಶೀಘ್ರವೇ ತೆರೆಗೆ ಬರಲು ಸಜ್ಜಾಗಿದೆ.

ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ "BAD" ಚಿತ್ರಕ್ಕೆ ನಿರ್ದೇಶಕ ಪಿ.ಸಿ.ಶೇಖರ್ ಅವರೆ ಸಂಕಲನ ಮಾಡಿದ್ದಾರೆ. ಜಿ.ರಾಜಶೇಖರ್ ಕಲಾ ನಿರ್ದೇಶನ ಹಾಗೂ ಶಕ್ತಿ ಶೇಖರ್ ಛಾಯಾಗ್ರಹಣವಿರುವ ಸಿನಿಮಾಗೆ ಸಚಿನ್ ಜಡೇಶ್ವರ ಎಸ್​. ಬಿ ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಮಾನ್ವಿತಾ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್, ಅಶ್ವಿನಿ ಮುಂತಾದವರ ತಾರಾಬಳಗವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net