More

    ಕೆಲಸ ಮಾಡುವವರಿಗೆ ಭಾಷೆ ಮುಖ್ಯವಲ್ಲ: ಪ್ರಮೋದ್​ ಮಧ್ವರಾಜ್​

    ಉಡುಪಿ: ಕೆಲಸ ಮಾಡುವವರಿಗೆ ಭಾಷೆ ಮುಖ್ಯವಲ್ಲ. ಉತ್ತರ ಭಾರತದವರು ಇಲ್ಲಿ ಬಂದು ಕಾರ್ಯನಿರ್ವಹಿಸುತ್ತಾರೆ. ತಮಿಳುನಾಡಿನ ಎಂಪಿಗಳಿಗೆ ಹಿಂದಿ ಬರೋದಿಲ್ಲ. ಕಾಂಗ್ರೆಸ್​ಗೆ ಭಾಷೆಯೇ ಮುಖ್ಯವಾದರೆ ಹಿಂದಿ ಪಂಡಿತರಿಗೆ , ಇಂಗ್ಲಿಷ್​ ಪ್ರಾಧ್ಯಾಪಕರಿಗೆಲ್ಲ ಟಿಕೆಟ್​ ನೀಡಬೇಕಿತ್ತು. ಆದರೆ ಮಂತ್ರಿಗಳ ಮಕ್ಕಳನ್ನು ಎಂಪಿ ಅಭ್ಯರ್ಥಿಗಳನ್ನಾಗಿ ಮಾಡಿದ್ದಾರೆ ಎಂದು ಉಡುಪಿ&ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಪ್ರಮೋದ್​ ಮಧ್ವರಾಜ್​ ಹೇಳಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3ನೇ ತರಗತಿ ಓದಿ ಕಾಂಗ್ರೆಸ್​ ಹಿರಿಯ ನಾಯಕ ಕಾಮರಾಜ್​ ಅವರು 2 ಪ್ರಧಾನಿಗಳ ನೇಮಕದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರಿಗೆ ತಮಿಳು ಬಿಟ್ಟರೆ ಬೇರೆ ಭಾಷೆ ಬರುತ್ತಿರಲಿಲ್ಲ. ಕೋಟ ಮತ್ತು ಜೆಪಿ ಹೆಗ್ಡೆಯವರ ಬಯೋಡಾಟ ಅಕ್ಕಪಕ್ಕವಿಟ್ಟರೆ ಕೋಟ ಅವರ ಸಾಧನೆಯೇ ಹೆಚ್ಚಿದೆ ಎಂದು ಹೇಳಿದರು.

    5 ಲಕ್ಷ ಮತದ ಅಂತರದಿಂದ ಗೆಲುವು
    ಸಾಮಾಜಿಕ ನ್ಯಾಯದಡಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದ್ದು, ಬಿಜೆಪಿ ಟಿಕೇಟ್​ ಘೋಷಣೆ ಬಳಿಕ ಎಲ್ಲರೂ ಐಕ್ಯಮತದಿಂದ ಕೋಟ ಅವರನ್ನು ಗೆಲ್ಲಿಸುವಲ್ಲಿ ಶ್ರಮ ವಹಿಸುತ್ತಿದ್ದೇವೆ. ಈ ಮೂಲಕ ಪ್ರಧಾನಿ ಮೋದಿಯವರ ಅಬ್​ ಕೀ ಬಾರ್​ 400 ಪಾರ್​ ಘೋಷಣೆಗೆ ಕೊಡುಗೆ ನೀಡಲಾಗುವುದು. ಎಂಪಿಯಾಗಿ (ಮೆಂಬರ್​ ಆ್​ ಪಂಚಾಯತ್​) ರಾಜಕೀಯ ಜೀವನ ಪ್ರಾರಂಭಿಸಿದ ಕೋಟ ಅವರಿಗೆ ಮತ್ತೆ 30 ವರ್ಷದ ಬಳಿಕ ಎಂಪಿಯಾಗುವ ಅವಕಾಶ ಲಭ್ಯವಾಗಿದೆ. 5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸವಿದೆ.

    ಬಿಜೆಪಿ ಕಾರ್ಯಕರ್ತರು ಜಾತಿ ನೋಡಲ್ಲ
    ಬಿಜೆಪಿ ಕಾರ್ಯಕರ್ತರು ಜಾತಿ ನೋಡಿ ಕೆಲಸ ಮಾಡಿದ ಉದಾಹರಣೆಗಳಿಲ್ಲ. ದೇಶದ ಬಗ್ಗೆ, ಹಿಂದುತ್ವದ ಬಗ್ಗೆ, ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುತ್ತಾರೆ. ನನಗೆ ಟಿಕೇಟ್​ ನೀಡದ ಬಗ್ಗೆ ಯಾವುದೇ ಬೇಸರವಿಲ್ಲ. ಕ್ರೀಡಾ ಮನೋಭಾವದಿಂದ ಸ್ವೀಕಾರ ಮಾಡುತ್ತೇನೆ. ಪಕ್ಷದ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇನೆ. ಕೊನೆಯ ಉಸಿರು ಇರುವರೆಗೂ ಬಿಜೆಪಿಯಲ್ಲಿ ಇರುತ್ತೇನೆ. ನನ್ನ ಯೋಜನೆ ಮತ್ತು ಯೋಚನೆ ಕಾಂಗ್ರೆಸ್​ ವಿರುದ್ಧ ಬಿಜೆಪಿಯನ್ನು ಗೆಲ್ಲಿಸುವುದು ಎಂದರು.

    ಮಾಧ್ಯಮ ವಿಭಾಗ ಸಂಚಾಲಕ ಶ್ರೀನಿಧಿ ಹೆಗ್ಡೆ, ವಕ್ತಾರ ವಿಜಯಕುಮಾರ್​, ಸತೀಶ್​ ಶೆಟ್ಟಿ ಮುಟ್ಲುಪಾಡಿ, ನಗರಸಭಾ ಸದಸ್ಯ ಗಿರೀಶ್​ ಅಂಚನ್​, ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್​ ಅಂಬಲಪಾಡಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts