More

    ಬಾಲ್ಯದಲ್ಲೇ ಸರಣಿ ಕೊಲೆಗಳ ಕಂಡೆ, ಕುಡಿತಕ್ಕೆ ದಾಸನದೆ! ಆತ್ಮಹತ್ಯೆಗೆ ಯತ್ನಿಸಿದ್ದ ಈ ವ್ಯಕ್ತಿ ಇಂದು ಸ್ಟಾರ್​ ನಟ…

    ಮುಂಬೈ: ಜೀವನವೆ ಹಾಗೇ ರೀ…ಯಾವ ಸಮಯದಲ್ಲಿ ಏನಾಗುತ್ತದೆ? ಎಂಬುದು ತಿಳಿಯುವುದಿಲ್ಲ. ಬದುಕು ದುಸ್ತರವಾಯಿತು ಎಂದು ಚಿಂತಿಸಿ, ಜೀವವನ್ನೇ ಅಂತ್ಯಗೊಳಿಸುವ ತಪ್ಪು ನಿರ್ಧಾರ ಕೈಗೊಳ್ಳುವವರ ಸಂಖ್ಯೆ ಅದೆಷ್ಟೋ! ಬಾಲ್ಯದಿಂದಲೇ ಮನೆಯ ಒತ್ತಡ, ಆರ್ಥಿಕ ಪರಿಸ್ಥಿತಿ ಹೀಗೆ ನಾನಾ ಸಮಸ್ಯೆಗಳಿಗೆ ಸಿಲುಕಿ, ಒದ್ದಾಡುವ ಜನರು ನಮ್ಮ ಜೀವನ ಇಲ್ಲಿಗೆ ಮುಗಿತು. ಇನ್ನು ನಮಗೆ ಬೇರೆ ದಾರಿಯಿಲ್ಲ ಎಂದು ತಮ್ಮ ಜೀವವನ್ನೇ ಬಲಿ ಕೊಡುವ ಮೂಲಕ ಇಂತಹ ಸಂಕಷ್ಟದಿಂದ ತಮಗೆ ತಾವೇ ಮುಕ್ತಿ ಕೊಟ್ಕಾತ್ತಾರೆ. ಇಂತಹದ್ದೇ ರೀತಿಯಲ್ಲಿ ಈ ನಟ ಕೂಡ ದುಡುಕಿ ನಿರ್ಧಾರ ಕೈಗೊಂಡಿದ್ದರು. ಆದ್ರೆ….ವಿಧಿಯಾಟವೇ ಬೇರೇ ಇತ್ತು.

    ಇದನ್ನೂ ಓದಿ: ಶೀಘ್ರದಲ್ಲೇ ಹಿಮ್ಸ್ನಲ್ಲಿ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ವಿಭಾಗ ಆರಂಭ: ಡಾ.ಎಸ್.ವಿ.ಸಂತೋಷ್

    ಬಾಲ್ಯದಲ್ಲೇ ಮನೆಯ ಒತ್ತಡ, ತಂದೆಯ ವಿಪರೀತ ಕುಡಿತದ ಚಟ ಇವರ ಜೀವನವನ್ನೇ ಬಹಳ ಬೇಸರಗೊಳಿಸಿತ್ತು. ಕಣ್ಣೆದುರೇ ಸರಣಿ ಹತ್ಯೆಗಳನ್ನು ಕಂಡು ದಿಕ್ಕಾಪಾಲಾದ ಈ ನಟ ಅಂದು ತಾವು ನಿರ್ಧರಿಸಿದಂತೆ ಜೀವನ ಕೊನೆಗೊಳಿಸಲು ಮುಂದಾಗಿದ್ದರು. ಈ ನಟ ಬೇರಾರು ಅಲ್ಲ. ಅದು ಎಲ್ಲರ ನೆಚ್ಚಿನ ಹಾಸ್ಯ ಕಲಾವಿದ ಜಾನಿ ಲಿವರ್. ಇಂದು ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ನಟರಾಗಿ ಹೊರಹೊಮ್ಮಿರುವ ಇವರು, ಅತ್ಯುತ್ತಮ ಹಾಸ್ಯನಟರಲ್ಲಿ ಒಬ್ಬರು. ವೀಕ್ಷಕರನ್ನು ಎಂದಿಗೂ ನಗಿಸಲು ವಿಫಲರಾಗದ ಜಾನಿ, ತಮ್ಮ ಬಾಲ್ಯದ ಘಟನೆಗಳನ್ನು ನೆನದು ಭಾವುಕರಾಗಿದ್ದಾರೆ.

    ಇತ್ತೀಚಿನ ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಜಾನಿ ಲಿವರ್​, “ನನ್ನ ತಂದೆ ವಿಪರೀತ ಕುಡಿತದ ಚಟಕ್ಕೆ ದಾಸರಾಗಿದ್ದರು. ಇದರಿಂದಾಗಿ ಅವರು ಎಂದಿಗೂ ನಮ್ಮ ಬಗ್ಗೆ ಗಮನ ಹರಿಸಲಿಲ್ಲ. ಶಾಲೆಯ ಫೀಸ್​ನೂ ಕಟ್ಟಲಿಲ್ಲ, ಯಾವುದಕ್ಕೂ ಹಣ ಕೊಡಲಿಲ್ಲ. ಅವರ ಬದಲಿಗೆ ನಮ್ಮನ್ನು ತಂದೆಯ ಸ್ಥಾನದಲ್ಲಿದ್ದು ನೋಡಿಕೊಂಡಿದ್ದು, ನಮ್ಮ ದೊಡ್ಡಪ್ಪ. ಇವರೇ ನಮ್ಮ ಶಾಲೆಯ ಫೀಸ್​ ಪಾವತಿಸಿದರು. ಆದರೆ ಕೆಲವು ವರ್ಷಗಳ ಬಳಿಕ ಸ್ಕೂಲ್​ ತೊರೆದೆ. ಆದರೆ, ಶಾಲೆಯಲ್ಲಿದ್ದ ಅಷ್ಟು ದಿನಗಳು ಎಲ್ಲರನ್ನೂ ಅನುಕರಿಸುತ್ತಿದ್ದೆ, ಎಲ್ಲರ ಪ್ರೀತಿಗೆ ಪಾತ್ರನಾಗಿದ್ದೆ” ಎಂದು ಭಾವುಕರಾದರು.

    ಇದನ್ನೂ ಓದಿ: ಪ್ರಶಾಂತ್ ನೀಲ್ ಯೋಜನೆಗೆ ಬಿಗ್ ಟ್ವಿಸ್ಟ್..! ಜೂ.ಎನ್​ಟಿಆರ್ ಅಭಿಮಾನಿಗಳಿಗೆ ಬಿಗ್ ಶಾಕ್!

    “ಶಿಕ್ಷಕರು ಕೂಡ ನನ್ನನ್ನು ಬಹಳ ಮೆಚ್ಚಿಕೊಂಡಿದ್ದರು. ನನ್ನ ಕ್ಲಾಸ್ ಟೀಚರ್ ದಮಯಂತಿ ಅವರು ನನ್ನನ್ನು ತುಂಬಾ ಪ್ರೀತಿ ಮಾಡುತ್ತಿದ್ದರು. ಇಂದಿಗೂ ಅವರನ್ನು ಭೇಟಿಯಾಗಿ, ಆಗಾಗ್ಗೆ ಮಾತನಾಡಿಸುತ್ತಿರುತ್ತೇನೆ. ನಾನು ಶಾಲೆ ಬಿಟ್ಟಾಗ, ವಿದ್ಯಾರ್ಥಿಗಳನ್ನು ನನ್ನ ಮನೆಗೆ ಕಳಿಸಿ, ನನ್ನನ್ನು ವಾಪಾಸ್​ ಕರೆದುಕೊಂಡು ಬರಲು ಹೇಳಿದ್ದರು. ನಾನೇ ನಿನ್ನ ಫೀಸ್ ಕಟ್ತೀನಿ​, ಯೂನಿಫಾರ್ಮ್​ ಕೊಡಿಸ್ತೀನಿ ಬಾ ಎಂದಿದ್ದರು. ಆದರೆ ನಾನು ಮಾತ್ರ ಹಿಂತಿರುಗಿ ಹೋಗಲೇ ಇಲ್ಲ ಎಂದರು.

    ಒಮ್ಮೆ ನನ್ನ ತಂದೆ ಇದನ್ನು ಕುಡಿ ನಿನ್ನ ಹೊಟ್ಟೆ ಸರಿಯಾಗುತ್ತದೆ ಎಂದು ಬಲವಂತವಾಗಿ ಮದ್ಯವನ್ನು ಕುಡಿಸಿದರು. ಇದರಿಂದ ಬಹಳ ನೋವುಂಟಾಯಿತು. ಬಾಲ್ಯದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇನೆ. ಅಪ್ಪನ ನಿರ್ಲಕ್ಷ್ಯದಿಂದ ನನ್ನ ಕುಟುಂಬವನ್ನು ನೋಡಿಕೊಳ್ಳಬೇಕಾಗಿತ್ತು. ಅಂದು ದುಡಿದರೆ ಮಾತ್ರ ಊಟ ಸಿಗುತ್ತಿತ್ತು. ನನ್ನ ತಂದೆಗೆ ಅವರೇನು ಮಾಡುತ್ತಿದ್ದಾರೆಂದು ಅವರಿಗೇ ತಿಳಿದಿರಲಿಲ್ಲ. ರೌಡಿಸಂನಲ್ಲಿ ತೊಡಗಿದ್ದರು. ಎಷ್ಟೋ ಸಲ ನಾನು ಅವರ ಆಯುಧಗಳನ್ನು ಕದ್ದು ಬಿಸಾಡಿದ್ದೆ” ಎಂದರು.

    ಇದನ್ನೂ ಓದಿ: ಮರಳಿ ಮನೆ ಸೇರಿದ ‘ರಾಮ’ಕೃಷ್ಣ, : “ದೊಡ್ಡಮನಿ’ಗಳ ನಡುವಿನ ಮನಸ್ತಾಪ ಅಂತ್ಯ

    “13ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೆ ಹಳಿಗೆ ಹೋಗಿದ್ದೆ. ನನ್ನ ತಂದೆಯ ವರ್ತನೆಯಿಂದ ತೀವ್ರ ಮನನೊಂದಿದ್ದೆ. ಹಾಗಾಗಿ ಟ್ರ್ಯಾಕ್ ಮೇಲೆ ಹೋಗಿ, ಮಲಗಿದ್ದೆ. ಆಗ ತಕ್ಷಣ ಇದ್ದಕ್ಕಿದ್ದಂತೆ ನನ್ನ ಮೂರು ತಂಗಿಯರ ಮುಖಗಳು ನನ್ನ ಕಣ್ಣ ಮುಂದೆ ಬಂದೆವು. ನಾನೇನಾದರೂ ಸಾವಿಗೀಡಾದರೆ ನನ್ನ ತಂಗಿಯರ ಗತಿಯೇನು? ಎಂದು ಯೋಚಿಸಿ, ಕೂಡಲೇ ಟ್ರ್ಯಾಕ್‌ನಿಂದ ಹೊರಬಂದೆ” ಎಂದು ತಮ್ಮ ಬಾಲ್ಯದ ಕಹಿದಿನಗಳ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).

    ಅಂದು RCB 263… ಇಂದು SRH 277! ಎರಡು ದಾಖಲೆಯ ಸಮಯದಲ್ಲೂ ತಂಡದಲ್ಲಿದ್ದ ಏಕೈಕ ಆಟಗಾರ ಇವರು

    ಅದೊಂದು ಪಾತ್ರ ನಾನು ಒಪ್ಪಬಾರದಿತ್ತು! ಆ ತಪ್ಪಿಂದ ನನ್ನ ಆಸೆಯೇ ನುಚ್ಚುನೂರಾಯ್ತು: ನಟಿ ಅರ್ಚನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts