ಸಾಗರಯಾನ ಭದ್ರತೆ ಹೆಚ್ಚಿಸಿದ ನೌಕಾಪಡೆ

ಸಾಂದರ್ಭಿಕ ಚಿತ್ರ
Published on

ನವದೆಹಲಿ: ಅಂತಾರಾಷ್ಟ್ರೀಯ ಜಲ ಮಾರ್ಗಗಳಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳ ಮೇಲೆ ಇತ್ತೀಚಿನ ದಿನಗಳಲ್ಲಿ ಪದೆ ಪದೇ ಡ್ರೋನ್​ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ನೌಕೆಗಳ ಭದ್ರತೆಗಾಗಿ ಉತ್ತರ ಹಾಗೂ ಮಧ್ಯ ಅರಬ್ಬಿ ಸಮುದ್ರ ಮತ್ತು ಏಡನ್​ ಕೊಲ್ಲಿಯಲ್ಲಿ ಕಣ್ಗಾವಲು ಹೆಚ್ಚಿಸಲು ಭಾರತೀಯ ನೌಕಾ ಪಡೆ ಕ್ರಮಗಳನ್ನು ಕೈಗೊಂಡಿದೆ.

ಜಲಮಾರ್ಗಗಳಲ್ಲಿ ಭದ್ರತೆಯನ್ನು ಖಾತರಿಪಡಿಸಲು ಪಣಿ ನಾಶಕಗಳು (ಡಸ್ಟ್ರಾಯರ್​) ಹಾಗೂ ಫ್ರಿಗೇಟ್​ಗಳುಳ್ಳ ನೇವಿಯ ಕಾರ್ಯ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ನೇವಿ ಭಾನುವಾರ ತಿಳಿಸಿದೆ. ಹಿಂದು ಮಹಾಸಾಗರದಲ್ಲಿ ಭದ್ರತೆಯ ಹೊಸ ಸವಾಲುಗಳ ಪರಿಶೀಲನೆಗೆ ಕರಾವಳಿ ಕಾವಲು ಪಡೆ ಜೊತೆ ನಿಕಟವಾಗಿ ಕೆಲಸ ಮಾಡುತ್ತಿರುವುದಾಗಿಯೂ ನೇವಿ ಹೇಳಿದೆ.

ಭಾರತದ ಕರಾವಳಿಯಿಂದ 400 ಕಿಮೀ ದೂರದಲ್ಲಿ ಎಂವಿ ಕೆಮ್​ ಎಂಬ ವಾಣಿಜ್ಯ ನೌಕೆ ಮೇಲೆ ಡ್ರೋನ್​ ದಾಳಿ ನಡೆದಿದ್ದ ಹಿನ್ನೆಲೆಯಲ್ಲಿ ಭಾರತೀಯ ನೌಕಾ ಪಡೆ ಭದ್ರತಾ ಕ್ರಮಗಳನ್ನು ಹೆಚ್ಚಿಸಲು ಮುಂದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net