More

    ಎಲ್ಲೆಡೆಗೂ ವ್ಯಾಪಿಸಲಿದೆ ಎಐ; ಕೆಲಸಕ್ಕಿಲ್ಲ ಕುತ್ತು!

    ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು “ಭಾಷಿಣಿ’ ತಂತ್ರಾನ ಬಳಸಿ ಮಾತನಾಡಿದ್ದು ಆರ್ಟಿಫಿಷಿಯಲ್​ ಇಂಟೆಲಿಜೆನ್ಸ್​ (ಎಐ) ಸಾಧ್ಯತೆ ಬಗ್ಗೆ ಅತ್ಯುತ್ತಮ ಉದಾಹರಣೆ. ಅಂದು ಅವರು ಹಿಂದಿಯಲ್ಲಿ ಮಾತನಾಡಿದ್ದು ತಮಿಳಿನಲ್ಲಿ ಕೇಳಿಸುತ್ತಿತ್ತು. ಹೀಗೆ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ರಿಯಲ್​ಟೈಮ್​ನಲ್ಲಿ ಸಂವಹನ ಸಾಧ್ಯವಾಗಿಸಿದ್ದು ಎಐ.

    ಸರ್ಕಾರವೇ ಅಭಿವೃದ್ಧಿಪಡಿಸಿರುವ ಈ ಭಾಷಿಣಿ ಸದ್ಯ ಹಿಂದಿ, ತಮಿಳಿನಲ್ಲಿ ಸಂವಹನ ನಡೆಸಲಷ್ಟೇ ಅನುಕೂಲವಾಗಿದ್ದರೂ ಮುಂದೆ ಎಲ್ಲ ಭಾಷೆಯಲ್ಲೂ ಇದು ಸಾಧ್ಯವಾಗಲಿದೆ. ಎಐನ ಈ ಸೌಲಭ್ಯದಿಂದ ಮುಂದೆ ಯಾವ ಭಾಷೆಯವರ ಜೊತೆಗೂ ಕನ್ನಡದಲ್ಲೆ ಸಂವಹನ ನಡೆಸಬಹುದು.

    ಎಐನಿಂದ ಭಾಷೆಗಷ್ಟೇ ಅಲ್ಲ, ರೈತರಿಗೂ ಉಪಯೋಗವಿದೆ. ರೈತರಿಗೆ ಹವಾಮಾನದ ಕುರಿತ ಸಮರ್ಪಕ ಮಾಹಿತಿ ಸಿಗದಿರುವುದೇ ಎಷ್ಟೋ ಸಮಸ್ಯೆಗಳಿಗೆ ಕಾರಣ. ಆದರೆ ಈಗ ಎಐನಿಂದಾಗಿ ನಿಖರ ಮುನ್ಸೂಚನೆ ಸಿಗುತ್ತಿದೆ. ಹೈನುಗಾರಿಕೆಯಲ್ಲಿ ಭಾರತ ಬೇರೆಲ್ಲ ದೇಶಗಳಿಗಿಂತ ಹಿಂದಿದೆ. ಹಸುವಿನ ಸಂಖ್ಯೆಗಳು ಕಡಿಮೆ ಇರುವುದಷ್ಟೇ ಅಲ್ಲ, ಒಂದು ಹಸುವಿನ ವಾರ್ಷಿಕ ಸರಾಸರಿ ಹಾಲಿನ ಪ್ರಮಾಣ ಶೇಕಡ 50 ಕಡಿಮೆ ಇದೆ. ಇದಕ್ಕೆ ಇಂಟರ್​ ಬ್ರೀಡಿಂಗ್​, ಮ್ಯಾಚ್​ಮೇಕಿಂಗ್​, ರೋಗ ಗುರುತಿಸುವಿಕೆಯಲ್ಲಿನ ಸಮಸ್ಯೆ ಇತ್ಯಾದಿಗಳೇ ಪ್ರಮುಖ ಕಾರಣ. ಈ ನಿಟ್ಟಿನಲ್ಲಿ ಎಐ ಬಳಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಕೋಳಿಗಳಿಗೆ ಬರುವ ಕಾಯಿಲೆಗಳನ್ನು ಕೂಡ ಎಐ ಮೂಲಕ 3 ತಿಂಗಳ ಮುನ್ನವೇ ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಈ ಎಲ್ಲದರ ನಿಟ್ಟಿನಲ್ಲಿ ಎಐ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ.

    ಅಪಾರ ಉದ್ಯೋಗಾವಕಾಶ

    ಎಐ ಕ್ಷೇತ್ರದಲ್ಲೆ ದೇಶದಲ್ಲಿ 4.5 ಕೋಟಿ ಉದ್ಯೋಗಾವಕಾಶಗಳು ಇವೆ. ಅವುಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಜನರು ಅಪ್​ಡೇಟ್​ ಆಗಬೇಕಷ್ಟೇ. ಎಐ ಕಲಿಯಬೇಕು ಎನ್ನುವವರಿಗೆ ಸರ್ಕಾರದ ವೆಬ್​ಸೈಟ್​ನಲ್ಲೇ ಎಲ್ಲ ಮಾಹಿತಿಗಳಿವೆ, ಕೆಲವು ಉಚಿತ ಕೋರ್ಸ್​ಗಳೂ ಇವೆ. ಸ್ವಯಂ ಪೋರ್ಟಲ್​, ಸ್ಕಿಲ್ಸ್​ ಪೆಮ್​ ಆ್ಯಪ್​ನಲ್ಲಿ ಮಾಹಿತಿಗಳಿವೆ. ಆಸಕ್ತರು ಯಾವುದೇ ಪದವಿ ಇರದಿದ್ದರೂ ಈ ಸ್ಕಿಲ್ಸ್​ ಕಲಿಯಬಹುದು.

    ಮನುಷ್ಯರೇ ಸೃಷ್ಟಿಸಿರುವ ಎಐ ಮನುಷ್ಯರು ಹೇಳಿಕೊಟ್ಟಿದ್ದಷ್ಟನ್ನೇ ಮಾಡಲು ಸಾಧ್ಯ. ಅಪಾಯ ಇರುವುದು ಎಐಯಿಂದಲ್ಲ, ಅದನ್ನು ದುರ್ಬಳಕೆ ಮಾಡಿಕೊಳ್ಳುವವರಿಂದ ಮಾತ್ರ. ಎಐಯಿಂದ ಕೆಲಸಕ್ಕೆ ಕುತ್ತಿಲ್ಲ. ಅಸಲಿಗೆ ಎಐ ಕೆಲಸವನ್ನು ಸರಾಗ ಹಾಗೂ ಸುಲಭಗೊಳಿಸುತ್ತದೆ. ಅದನ್ನು ಟೂಲ್​ ಆಗಿ ಕಲಿತರೆ ಅಪಾರ ಉದ್ಯೋಗಾವಕಾಶಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts