More

    ಶಿಕ್ಷಣಕ್ಕೆ ತಂತ್ರಜ್ಞಾನದ ಖದರ್​; ಆನ್​ಲೈನ್​​ನಲ್ಲೇ ವಿವಿಧ ಕೋರ್ಸ್​ಗಳು ಲಭ್ಯ

    ಭಾರತಕ್ಕೆ ಸ್ವಾತಂತ್ರ್ಯ ದೊರೆತು 75ವರ್ಷವಾಗಿದ್ದು, ಇಡೀ ಜಗತ್ತು ತನ್ನತ್ತ ತಿರುಗಿ ನೋಡುವಂತೆ ಎಲ್ಲ ಕ್ಷೇತ್ರಗಳಲ್ಲೂ ಮುನ್ನುಗುತ್ತಿದೆ. ವಿಶ್ವದಲ್ಲಿಯೇ ಅತಿಹೆಚ್ಚು ಯುವಶಕ್ತಿ ಹೊಂದಿರುವ ದೇಶ ಎಂಬ ಹೆಗ್ಗಳಿಕೆ ಹೊಂದಿದ್ದು, ಯುವಕರಿಗೆ ಉತ್ತಮ ಶಿಣ, ಅವಕಾಶಗಳನ್ನು ಒದಗಿಸುವ ಮೂಲಕ ಕೌಶಲಯುತ ಮಾನವ ಸಂಪನ್ಮೂಲಗಳನ್ನಾಗಿ ತಯಾರಿಸುವತ್ತ ಆಲೋಚನೆಗಳಿವೆ. ಮುಂದಿನ 25ವರ್ಷಗಳಲ್ಲಿ ಭಾರತ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಣಿಕವಾಗಿ ಹಾಗೂ ತಂತ್ರಜ್ಞಾನದಲ್ಲಿ ವಿಕಾಸ ಹೊಂದಲು ಅದ್ಭುತ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ 2047ರ ಹೊತ್ತಿಗೆ ಅಂದರೆ ಭಾರತ ಸ್ವತಂತ್ರಗೊಂಡ ಶತಮಾನೋತ್ಸವ ಆಚರಿಸುವಾಗ ಏನೆಲ್ಲ ಸಾಧಿಸಬಹುದು ಎಂಬುದರ ರೂಪುರೇಷೆಯನ್ನು ದೇಶದ ಮುಂದಿಟ್ಟಿದ್ದಾರೆ. ಇದಕ್ಕೆ ಪೂರಕವಾಗಿ ಯಾವೆಲ್ಲ ಕ್ಷೇತ್ರಗಳಲ್ಲಿ ಹೊಸ ದಾರಿಗಳಿವೆ, ಕ್ರಮಿಸುವುದು ಹೇಗೆ ಎಂಬುದರ ಬಗ್ಗೆ ವಿಜಯವಾಣಿ ಬೆಳಕು ಚೆಲ್ಲುವುದರ ಮೂಲಕ ಹೊಸವರ್ಷವನ್ನು ಆಶಾವಾದದಿಂದ, ತಾಜಾ ಚಿಂತನೆಗಳೊಂದಿಗೆ ಬರಮಾಡಿಕೊಳ್ಳುತ್ತಿದೆ.

    ಶಿಕ್ಷಣಕ್ಕೆ ತಂತ್ರಜ್ಞಾನದ ಖದರ್​

    ಚಾಟ್​ ಜಿಪಿಟಿ, ಬಾರ್ಡ್​ನಂಥ ತಂತ್ರಾಂಶಗಳನ್ನು ಮಾಡಿದ ಕೃತಕ ಬುದ್ಧಿಮತ್ತೆ (ಎಐ) ಜಗತ್ತನ್ನು ವೇಗವಾಗಿ ಆವರಿಸಿಕೊಳ್ಳುತ್ತಿದೆ. ಮಷಿನ್​ ಲರ್ನಿಂಗ್​, ಬ್ಲ್ಯಾಕ್​​ ಚೈನ್​ ಹೀಗೆ. ಸೈಬರ್​ ಸೆಕ್ಯುರಿಟಿ ಮುಂದುವರಿದ ಭಾಗವಾಗಿ ಕನ್ವರ್ಸೇಶನಲ್​ ಎಕ್ಸ್​ಪೀರಿಯನ್ಸ್​ ಡಿಸೈನ್​, ಯೂಸರ್​ ಬಿಹೇವಿಯರ್​ ಸ್ಟಡಿ, ಯುಐ ಮತ್ತು ಯುಎಕ್ಸ್​ನಂಥ ತಂತ್ರಜ್ಞಾನಗಳು ಇಂಜಿನಿಯರಿಂಗ್​, ವೈದ್ಯಕಿಯ, ಕೃಷಿ, ಆರೋಗ್ಯ ಸೇರಿ ಎಲ್ಲ ಕ್ಷೇತ್ರಗಳಿಗೂ ಪಸರಿಸುತ್ತಿವೆ. ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ.

    ಹಿಂದೆಲ್ಲ ಹೊಸ ತಂತ್ರಜ್ಞಾನಗಳು ಬಂದ ಸಮಯದಲ್ಲಿ ಅನುಷ್ಠಾನ ಮಾಡಲು ಹೆಚ್ಚಿನ ಅಧ್ಯಯನ ಮಾಡುತ್ತಿದ್ದರು. ಆದರೆ ಈಗ ಬರುತ್ತಿರುವ ತಂತ್ರಾಂಶಗಳು ಯೂಸರ್​ ಬಿಹೇವಿಯರ್​ ಸ್ಟಡಿಗಳಾಗಿವೆ. ತಂತ್ರಜ್ಞಾನದ ಅಳವಡಿಕೆಯಿಂದಾಗುವ ಪರಿಣಾಮಗಳು ಮತ್ತು ಪರಿಹಾರಗಳನ್ನು ಕೂಡ ನೀಡಲಿವೆ. ಹೀಗಾಗಿ, ಕಂಪ್ಯೂಟರ್​ ಸೈನ್ಸ್​, ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಕೋರ್ಸ್​ಗಳಿಗೆ ಹೆಚ್ಚಿನ ಬೇಡಿಕೆ ಇದೆ. ತಂತ್ರಜ್ಞಾನಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಮಾತ್ರವಲ್ಲ, ರೊಬೊಟಿಕ್​, ಆಟೋಮಷಿನ್​ನಿಂದ ಆರೋಗ್ಯ, ಕೃಷಿ ಸೇರಿ ಇತರ ಕ್ಷೇತ್ರಗಳಲ್ಲಿಯೂ ಬೇಡಿಕೆ ಸೃಷ್ಟಿಯಾಗುತ್ತಿದೆ.

    ಆನ್​ಲೈನ್​ ಕೋರ್ಸ್​ಗಳು

    ಈ ಕೋರ್ಸ್​ಗಳನ್ನು ಕೆಲವು ವಿಶ್ವವಿದ್ಯಾಲಯಗಳು ಆನ್​ಲೈನ್​ ಮೂಲಕ ಬೋಧಿಸುತ್ತಿವೆ. ಹ್ಯೂಮನ್​ ಇಂಟರ್ಯಾಕ್ಷನ್​, ಹ್ಯೂಮನ್​ ಇಂಟರ್​ಫೇಸ್, ಸೈಬರ್​ ಫಿಜಿಕಲ್​ ಸಿಸ್ಟಂ, ಐಒಸಿ, ಎ ಆಂಡ್​ ಎಂಎಲ್​ನಂಥ ಕೋರ್ಸ್​ಗಳು ಬೇರೆಯದೇ ರೀತಿಯ ಪ್ರೋಗ್ರಾಂಗಳಾಗಿವೆ. ಉದಾಹರಣೆಗೆ ಪತ್ರಿಕೆಯನ್ನು ಮುದ್ರಿತ ಕಾಗದದಲ್ಲಿ ಓದುವುದಕ್ಕೂ ಮೊಬೈಲ್​ನಲ್ಲಿ ಓದುವುದಕ್ಕೂ ಇರುವ ವ್ಯತ್ಯಾಸವನ್ನು ಮನುಷ್ಯನ ಬಿಹೆವಿಯರ್​ ಪ್ಯಾರ್ಟನ್​ ಸ್ಟಡಿ ಮೂಲಕ ತಿಳಿಸಲಿವೆ.

    ನವೋದ್ಯಮದ ಯುಗ

    ತಂತ್ರಜ್ಞಾನ ಪ್ರತಿ ಕ್ಷೇತ್ರದಲ್ಲಿ ಅಳವಡಿಕೆಯಾಗುತ್ತಿರುವುದರಿಂದ ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ಕೃಷಿ ಸೇರಿ ಸೇವೆಗಳನ್ನು ನೀಡುವ ಕ್ಷೇತ್ರಗಳಲ್ಲಿ ನವೋದ್ಯಮಗಳು ಅಸಂಖ್ಯಾತವಾಗಿ ಆರಂಭವಾಗುತ್ತಿವೆ. ಇಲ್ಲಿ ತಮ್ಮದೇ ಛಾಪು ಮೂಡಿಸುವ ತಂತ್ರಜ್ಞರಿಗೆ ಬೇಡಿಕೆ ಉಂಟು. ಜನರ ಶ್ರಮವನ್ನು ಸುಲಭಗೊಳಿಸುವ, ಸುರಕ್ಷತೆ, ಭದ್ರತೆಯನ್ನು ಕಲ್ಪಿಸುವುದಕ್ಕಾಗಿ ಮತ್ತು ಈಗಾಗಲೇ ಇರುವ ತಂತ್ರಜ್ಞಾನಗಳ ಅಪ್​ಡೇಟ್​ ವರ್ಷನ್​ಗಳ ಸಂಶೋಧನೆಗಾಗಿಯೂ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ.

    ಮೊಬೈಲ್​ನಲ್ಲಿ ವಿವಿಧ ಆಪ್​ಗಳನ್ನು ಒತ್ತುವ ಮೂಲಕ ಹಣ ಕಳೆದುಕೊಳ್ಳುವ ಸೈಬರ್​ ಅಪರಾಧಗಳ ಪತ್ತೆಗಾಗಿ, ರಿಯಲ್​ ಎಸ್ಟೇಟ್​ನಲ್ಲಿ ಒಂದೇ ನಿವೇಶನ ಮತ್ತು ಫ್ಲ್ಯಾಟ್​ಗಳನ್ನು ಒಂದಕ್ಕಿಂತ ಹೆಚ್ಚಿನ ಮಂದಿಗೆ ಮಾರಾಟವಾದ ಸಂದರ್ಭದಲ್ಲಿ ಪತ್ತೆ ಹಚ್ಚುವುದಕ್ಕಾಗಿ ಬ್ಲ್ಯಾಕ್​ ಚೈನ್​ ತಂತ್ರಜ್ಞಾನ ಬಳಕೆಗೆ ಬರಲಿದೆ. ಹೀಗೆ ಹತ್ತಾರು ಬಗೆಯ ಪ್ರೋಗ್ರಾಂಗಳು ಪ್ರತಿ ಕ್ಷಣ ಆವಿಷ್ಕಾರಗೊಳ್ಳುತ್ತಿವೆ.

    ತಂತ್ರಜ್ಞಾನ ಅಳವಡಿಕೆಯಲ್ಲಿ ಇಂದು ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ಭಾರತದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ವಿದೇಶಗಳಲ್ಲಿ ಸುಲಭವಾಗಿ ಕೆಲಸ ತೆಗೆದುಕೊಳ್ಳುವಷ್ಟರ ಮಟ್ಟಿಗೆ ಅಭಿವೃದ್ಧಿ ಹೊಂದುತ್ತಿವೆ.

    ಹಿಂದೆಲ್ಲ ಹೊಸ ತಂತ್ರಾಂಶ ಸಂಶೋಧಿಸಿದಾಗ ಹೆಚ್ಚಿನ ಮಾಹಿತಿಗೆ ಅಧ್ಯಯನ ನಡೆಸಬೇಕಿತ್ತು. ಆದರೆ, ಹೊಸ ತಂತ್ರಜ್ಞಾನಗಳು ಸಂಬಂಧಪಟ್ಟ ಕ್ಷೇತ್ರದ ಅಭಿವೃದ್ಧಿ, ತಂತ್ರಾಂಶ ಬಳಕೆಯಿಂದಾಗುವ ಲಾಭ, ನಷ್ಟಗಳು ಮತ್ತು ಮಾನವನ ದೇಹದ ಮೇಲಾಗುವ ಪರಿಣಾಮಗಳು ಮತ್ತು ಪರಿಹಾರಗಳನ್ನು ಕೂಡ ಸೂಚಿಸುತ್ತಿವೆ.
    – ಡಾ. ಕೆ.ಎನ್​. ಸುಬ್ಯಮಣ್ಯ, ಆರ್​.ವಿ. ಇಂಜಿನಿಯರಿಂಗ್​ ಕಾಲೇಜ್​ ಪ್ರಾಂಶುಪಾಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts