ಶೂಟಿಂಗ್ ಸಂದರ್ಭ ಎಷ್ಟು ಜನರಿಗೆ ಚುಂಬಿಸಿದ್ದೇನೆ ಎಂಬ ಲೆಕ್ಕವೇ ಇಲ್ಲ: ನಟ ನಾಗ ಚೈತನ್ಯ

naga
Published on

ನವದೆಹಲಿ: ನಾಗ ಚೈತನ್ಯ ಅವರು ಯೂಟ್ಯೂಬರ್ ಇರ್ಫಾನ್ ಅವರೊಂದಿಗೆ ಟ್ರೂತ್ ಅಂಡ್ ಡೇರ್ ಗೇಮ್ ವಿಡಿಯೋ ಕಾಣಿಸಿಕೊಂಡರು. ಅಲ್ಲಿ ಅವರು ತಮ್ಮ ಹಳೆ ಪ್ರೇಯಸಿಯರೊಂದಿಗೆ ಸ್ನೇಹಿತರಾಗಿ ಮುಂದುವರೆಯುವುದನ್ನು ಇಷ್ಟಪಡುವುದಿಲ್ಲ ಎಂದಿದ್ದಾರೆ. ತಮ್ಮ ಎರಡೂವರೆ ವರ್ಷದ ಹಿಂದೆ ಮಾಜಿ ಪ್ರೇಯಸಿಯೊಬ್ಬರು ದೂರವಾಗಿ ನಂತರ ಹೇಗೆ ಉತ್ತಮ ಸ್ನೇಹಿತರಾಗಲು ಬಯಸಿದ್ದರು ಎಂಬುದರ ಬಗ್ಗೆ ಇರ್ಫಾನ್ ಮಾತನಾಡಿದರು.

ಈ ಸಂದರ್ಶನದಲ್ಲಿ ನಟ ನಾಗ ಚೈತನ್ಯರನ್ನು “ನೀವು ಎಷ್ಟು ಜನರನ್ನು ಚುಂಬಿಸಿದ್ದೀರಿ?” ಎಂದು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, “ಆ ಲೆಕ್ಕವನ್ನೇ ನಾನು ಕಳೆದುಕೊಂಡಿದ್ದೇನೆ “ಎಂದರು. ಆದಾಗ್ಯೂ, ನಟ ಚಲನಚಿತ್ರಗಳಲ್ಲಿ ಅನೇಕ ಜನರನ್ನು ಚುಂಬಿಸಿದ್ದೇನೆ ಎಂದು ಹೇಳಿದರು, ಅದನ್ನು ಅವರು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ನಟ ತನ್ನ ಈ ಹೇಳಿಕೆಯ ನಂತರ ತೊಂದರೆಗೆ ಸಿಲುಕುವ ಭಯವನ್ನು ಸಹ ವ್ಯಕ್ತಪಡಿಸಿದರು.

ಇತ್ತೀಚೆಗೆ, ನಟನನ್ನು ಅವರ 'ಅತಿದೊಡ್ಡ ವಿಷಾದ'ದ ಬಗ್ಗೆ ಕೇಳಲಾಯಿತು. ನಾಗ ಚೈತನ್ಯಗೆ ಜೀವನದಲ್ಲಿ ಯಾವುದೇ ನಿರ್ದಿಷ್ಟ ವಿಚಾರಗಳ ಬಗ್ಗೆ ಪಶ್ಚಾತ್ತಾಪಗಳಿಲ್ಲ ಎಂದು ತಿಳಿದು ಬಂದಿದೆ. "ನನ್ನ ಜೀವನದಲ್ಲಿ ಯಾವುದೇ ಪಶ್ಚಾತ್ತಾಪವಿಲ್ಲ. ಎಲ್ಲವೂ ಕೇವಲ ಒಂದು ಪಾಠ” ಎಂದಿದ್ದಾರ. ಈ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಾಗ ಚೈತನ್ಯ ವೈಯಕ್ತಿಕ ಜೀವನ

ನಾಗಚೈತನ್ಯ ಕಳೆದ ವರ್ಷ ಪತ್ನಿ ಸಮಂತಾ ರುತ್ ಪ್ರಭು ಅವರಿಂದ ಬೇರ್ಪಟ್ಟಿದ್ದರು. ಆದಾಗ್ಯೂ, ಅವರು ಮತ್ತೆ ಪ್ರೀತಿಯನ್ನು ಕಂಡುಕೊಂಡರು. ಅವರು ಪ್ರಸ್ತುತ ಶೋಭಿತಾ ಧುಲಿಪಾಲ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ಅವರು ತಮ್ಮ ಸಂಬಂಧವನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ಆದರೆ ಅವರ ಚಿತ್ರಗಳು ಮತ್ತು ವರದಿಗಳು ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ.

ಮುಂಬರುವ ಚಲನಚಿತ್ರಗಳು

ಕಸ್ಟಡಿ ಎಂಬ ಮುಂಬರುವ ಕಾಪ್ ಡ್ರಾಮಾದಲ್ಲಿ ನಾಗ ಚೈತನ್ಯ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ತಮಿಳಿನಲ್ಲಿ ನಾಗಚೈತನ್ಯ ಅವರ ಚೊಚ್ಚಲ ದ್ವಿಭಾಷಾ ಚಿತ್ರವಾಗಿದೆ. ಈ ನಾಟಕದಲ್ಲಿ ಅರವಿಂದ್ ಸ್ವಾಮಿ ಖಳನಾಯಕನಾಗಿ ನಟಿಸಿದ್ದಾರೆ, ಇದರಲ್ಲಿ ಪ್ರಿಯಾಮಣಿ ಕೂಡ ನಿರ್ಣಾಯಕ ಪಾತ್ರದಲ್ಲಿ ನಟಿಸಿದ್ದಾರೆ. ಶರತ್ ಕುಮಾರ್, ಸಂಪತ್ ರಾಜ್, ಪ್ರೇಮ್ ಜಿ ಅಮರನ್, ವೆನ್ನೆಲಾ ಕಿಶೋರ್ ಮತ್ತು ಪ್ರೇಮಿ ವಿಶ್ವನಾಥ್ ಚಿತ್ರದ ಪೋಷಕ ಪಾತ್ರಗಳಲ್ಲಿದ್ದಾರೆ. ಕೀರ್ತಿ ಶೆಟ್ಟಿ ನಾಯಕಿ. ಕಸ್ಟಡಿ ಮೇ 12, 2023 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net