More

    ಕಾಂಗ್ರೆಸ್ ಪ್ರಣಾಳಿಕೆ ಕನ್ನಡ ವಿರೋಧಿ: ಸಂಸದ ತೇಜಸ್ವಿ ಸೂರ್ಯ ಹೇಳಿಕೆ

    ಬೆಂಗಳೂರು: ಇದೀಗ ಕಾಂಗ್ರೆಸ್ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ ನಂತರ ವಿವಾದಗಳು ಶುರುವಾಗಿದೆ. ಭಜರಂಗ ದಳವನ್ನು ಪಿಎಫ್ಐಗೆ ಹೋಲಿಸಿ ಬ್ಯಾನ್ ಮಾಡುವುದಾಗಿ ಹೇಳಿದ್ದು ವ್ಯಾಪಕ ಖಂಡನೆಗೆ ಒಳಗಾಯಿತು. ಈ ನಡುವೆ ಹೊಸ ಶಿಕ್ಷಣ ನೀತಿಯನ್ನು ಹಿಂದಕ್ಕೆ ಪಡೆಯುವ ಬಗ್ಗೆಯೂ ಪ್ರಸ್ತಾಪ ಇದ್ದು ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದಾರೆ.   

    ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಸಿಟ್ಟಾಗಿದ್ದು “ಕಾಂಗ್ರೆಸ್ ಗೆ ಪ್ರಣಾಳಿಕೆ ಬಗ್ಗೆ ಗಂಭೀರತೆ ಇಲ್ಲ. ಯಾರೋ ನಾಲ್ಕು ಜನ ಹುಡುಗರನ್ನು ಕೂರಿಸಿ ಪ್ರಣಾಳಿಕೆ ಬರೆಸಿದ್ದಾರೆ. ಸುಳ್ಳು ಮತ್ತು ವಿಪರ್ಯಾಸಗಳಿಂದ ಅವರ ಪ್ರಣಾಳಿಕೆ ಕೂಡಿದೆ.

    ಇದನ್ನೂ ಓದಿ: ಸತೀಶ್ ರೆಡ್ಡಿ ಪರ ಸಂಸದ ತೇಜಸ್ವಿ ಸೂರ್ಯ ಭರ್ಜರಿ ಪ್ರಚಾರ

    ಕಾಂಗ್ರೆಸ್ ಪಕ್ಷ ಭೂತಕಾಲದಲ್ಲಿ ಸೇರಿಕೊಂಡಿದ್ದು ಈಗಾಗಲೇ ಜಾರಿಯಲ್ಲಿರುವ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿದ್ದಾರೆ. ಏನೋ ಒಂದು ಬರೆದು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ” ಎಂದು ಕಿಡಿಕಾರಿದರು.

    ಕಾಂಗ್ರೆಸ್ ಪ್ರಣಾಳಿಕೆ ಕನ್ನಡ ವಿರೋಧಿ: ತೇಜಸ್ವಿ ಸೂರ್ಯ

    ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಕಾಂಗ್ರೆಸ್ ಧೋರಣೆಯ ಬಗ್ಗೆಯೂ ಕಿಡಿ ಕಾರಿದ್ದು “ಕಾಂಗ್ರೆಸ್ ರಾಷ್ಟ್ರೀಯ ಶಿಕ್ಷಣ ನೀತಿ ತೆಗೆದುಹಾಕಲು ಘೋಷಿಸಿದೆ. ಇದು ಕನ್ನಡ ವಿರೋಧಿ. ಇವರದ್ದು ಹಿಂದೂ ವಿರೋಧಿ ಪ್ರಣಾಳಿಕೆ. ಭಜರಂಗದಳ ನಿಷೇಧ ಹೇಳಿದ್ದಾರೆ. ಇದು ಹಿಂದೂ ವಿರೋಧಿಯಾಗಿದೆ.

    ಪಿಎಫ್ಐ ಜೊತ ಭಜರಂಗದಳ ಸೇರಿಸಿರುವುದು ಸರಿಯಲ್ಲ. ಕರ್ನಾಟಕವನ್ನು ಅಶಾಂತಿಯ ತೋಟಮಾಡಲು ಕಾಂಗ್ರೆಸ್ ಹೊರಟಿದೆ. ಅಪ್ಪಿ ತಪ್ಪಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕ ಗೂಂಡಾರಾಜ್ಯ ಆಗಲಿದೆ” ಎಂದು ತೇಜಸ್ವಿ ಸೂರ್ಯ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.

    ಇದನ್ನೂ ಓದಿ: ವೋಟ್ ಬ್ಯಾಂಕ್ ಛಿದ್ರವಾಗಿದ್ದಕ್ಕೆ ಕಾಂಗ್ರೆಸ್ ಅಳಲು ತೋಡಿಕೊಳ್ಳುತ್ತಿದೆ: ಸಂಸದ ತೇಜಸ್ವಿ ಸೂರ್ಯ ವ್ಯಂಗ್ಯ

    ಇನ್ನು ಭಜರಂಗದಳದ ಕಾರ್ಯಕರ್ತರ ವಿರುದ್ಧ ಹಲವು ಪ್ರಕರಣ ದಾಖಲಾಗಿರುವ ವಿಚಾರವಾಗಿ ಮಾತನಾಡಿದ ಸಂಸದರು, “ಈ ರೀತಿಯ ಎಲ್ಲಾ ಪ್ರಕರಣಗಳು ವೈಯಕ್ತಿಕ ವಿಚಾರದ ಪ್ರಕರಣಗಳು” ಎಂದಿದ್ದಾರೆ. ಇನ್ನು ಭಜರಂಗದಳ ತ್ರಿಷೂಲ ದೀಕ್ಷೆ ಹಾಗು ನೈತಿಕ ಪೊಲೀಸ್ ಗಿರಿ ವಿಚಾರವಾಗಿ  ತೇಜಸ್ವಿ ಸೂರ್ಯ ಉತ್ತರ ಹೇಳಲು ನಿರಾಕರಿಸಿದ್ದು ಬಿಜೆಪಿಗೂ ಭಜರಂಗದಳಕ್ಕೂ ಏನು ಸಂಬಂಧ ಎಂಬ ಪ್ರಶ್ನೆಗೆ ಅದನ್ನು ಬಜರಂಗ ದಳದ ವಕ್ತಾರರನ್ನು ಕೇಳಿ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts