More

    ಅಪರಿಚಿತರು ಕೊಟ್ಟದ್ದನ್ನು ತಿನ್ನಬೇಡಿ ಎನ್ನುವುದು ಇದಕ್ಕೇ; ಹತ್ತನೇ ತರಗತಿ ಮುಗಿಸಿ ಪ್ರವಾಸಕ್ಕೆ ಹೋದ ಬಾಲಕಿ ಎರಡು ಬಾರಿ ಬಿಕರಿ!  

    ಕೋಟಾ: 10ನೇ ತರಗತಿ ಪರೀಕ್ಷೆ ಮುಗಿಸಿ ಪ್ರವಾಸಕ್ಕೆಂದು ತೆರಳಿದ್ದ ಮಧ್ಯಪ್ರದೇಶದ 17 ವರ್ಷದ ಬಾಲಕಿ ಯನ್ನು ಅಪಹರಿಸಿ ಎರಡು ಬಾರಿ ಮಾರಾಟ ಮಾಡಿರುವ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಅಧಿಕಾರಿಯೊಬ್ಬರು ಮಂಗಳವಾರ ಮಾಹಿತಿ ನೀಡಿದ್ದಾರೆ.

    ತನ್ನ ಇಚ್ಛೆಗೆ ವಿರುದ್ಧವಾಗಿ ತಿಂಗಳುಗಟ್ಟಲೆ ಬಂಧಿಸಲಾಗಿದ್ದ ಮನೆಯಲ್ಲಿ ಈ ಬಾಲಕಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಅದರಲ್ಲಿ ಅದೃಷ್ಟವಶಾತ್ ವಿಫಲಳಾಗಿದ್ದಳು. ಇದಾದ ಸ್ವಲ್ಪ ಸಮಯದ ನಂತರ ಆಕೆ ಆ ಮನೆಯಿಂದ ಓಡಿ ಹೋಗಿ ರೈಲು ನಿಲ್ದಾಣ ಸೇರಿದ್ದಾಳೆ. ಅಲ್ಲಿ ಆಕೆಯ ಪರಿಸ್ಥಿತಿ ಗಮನಿಸಿದ ರೈಲ್ವೆ ಪೊಲೀಸರು ಆಕೆಯನ್ನು ಸಿಡಬ್ಲ್ಯೂಸಿ ಸಮಿತಿಗೆ ಒಪ್ಪಿಸಿದ್ದಾರೆ ಎಂದು ಅಧ್ಯಕ್ಷೆ ಕನಿಜ್ ಫಾತಿಮಾ ಹೇಳಿದ್ದಾರೆ.

    ಹತ್ತನೇ ತರಗತಿ ಪರೀಕ್ಷೆ ನಂತರ ಜೀವನದ ಪರೀಕ್ಷೆ! ಅಪರಿಚಿತರು ಕೊಟ್ಟದ್ದು ತಿನ್ನಬೇಡಿ…

    ಐದು ತಿಂಗಳ ಹಿಂದೆ ಬಾಲಕಿ 10 ನೇ ತರಗತಿ ಪರೀಕ್ಷೆ ಬರೆದು ಪ್ರವಾಸಕ್ಕಾಗಿ ಮಧ್ಯಪ್ರದೇಶದ ಕಟ್ನಿಯಲ್ಲಿರುವ ತನ್ನ ಮನೆಯಿಂದ ಹೊರಟಿದ್ದಳು.

    ಬಾಲಕಿ ಕಟ್ನಿ ರೈಲ್ವೆ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದಾಗ, ಕೆಲವು ಯುವಕರು ಅವಳೊಂದಿಗೆ ಸ್ನೇಹ ಬೆಳೆಸಿ ಹತ್ತಿರದ ಉದ್ಯಾನವನಕ್ಕೆ ಕರೆದೊಯ್ದರು. ಅಲ್ಲಿ ಅವರು ಆಕೆಗೆ ಆಹಾರ ಮತ್ತು ಪಾನೀಯವನ್ನು ನೀಡಿದ್ದಾರೆ. ಅದನ್ನು ಸೇವಿಸಿದ ನಂತರ ಅವಳು ಪ್ರಜ್ಞಾಹೀನಳಾದಳು.

    ಇದನ್ನೂ ಓದಿ: ಹತ್ತನೇ ತರಗತಿ ವಿದ್ಯಾರ್ಥಿನಿಗೆ ಹೃದಯಾಘಾತ; ಫ್ರೆಂಡ್ ಜತೆ ಮಾತನಾಡುತ್ತಲೇ ಕುಸಿದು ಬಿದ್ದು ಸಾವು

    ಮೊದಲ ಮದುವೆ

    ಬಾಲಕಿ ಗೆ ಪ್ರಜ್ಞೆ ಬಂದಾಗ, ಅವಳು ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆಯೊಂದಿಗೆ ಉಜ್ಜಯಿನಿಯ ಹೋಟೆಲ್ ಕೋಣೆಯಲ್ಲಿ ಇರುವುದು ತಿಳಿದು ಬಂದಿದೆ. ಈ ಸಂದರ್ಭ ಅವರು ಬೆದರಿಕೆ ಹಾಕಿ ಮತ್ತು 27 ವರ್ಷದ ವ್ಯಕ್ತಿಯನ್ನು ಮದುವೆಯಾಗುವಂತೆ ಒತ್ತಾಯಿಸಿದರು ಎಂದು ಸಂತ್ರಸ್ತೆ ಹೇಳಿದ್ದಾರೆ. ಮದುವೆಯ ನಂತರ ಆಕೆಯನ್ನು 2 ಲಕ್ಷ ರೂ.ಗೆ ಖರೀದಿಸಲಾಗಿದೆ ಎಂದು ಯುವಕ ಸಂತ್ರಸ್ತೆಗೆ ಹೇಳಿದನು ಎಂದು ಫಾತಿಮಾ ಹೇಳಿದರು.

    ಮದುವೆಯಾದ ನಾಲ್ಕು ತಿಂಗಳ ನಂತರ ಆಕಸ್ಮಿಕವಾಗಿ ಕ್ರಿಮಿನಾಶಕ ಸೇವಿಸಿ ಯುವಕ ಸಾವನ್ನಪ್ಪಿದ್ದು, ನಂತರ ಅವನ ಕುಟುಂಬ ಸದಸ್ಯರು ಮದುವೆಯ ನೆಪದಲ್ಲಿ ಕೋಟಾ ಜಿಲ್ಲೆಯ ಕನ್ವಾಸ್ ಪ್ರದೇಶದಲ್ಲಿ ಬಾಲಕಿಯನ್ನು ಇನ್ನೊಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ.

    ಎರಡನೇ ಮದುವೆ

    ಹೊಸ ಜಾಗದಲ್ಲಿ ಸಂತ್ರಸ್ತೆಗೆ ದೈಹಿಕ ಶೋಷಣೆ ಸಹಿಸಲಾಗುತ್ತಿರಲಿಲ್ಲ. ಈ ನಡುವೆ “ಎರಡನೇ ಪತಿ” ಅವಳನ್ನು 3 ಲಕ್ಷ ರೂ.ಗೆ ಖರೀದಿಸಿದ್ದಾನೆ ಎಂದು ತಿಳಿದ ಬಾಲಕಿಗೆ ತಿಳಿದುಬಂದಿದ್ದು ಇದರಿಂದ ನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದಳು. ಆದರೆ ಅದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಆಕೆ ತನ್ನ ‘ಅತ್ತೆಯ’ ಮನೆಯಿಂದ ಓಡಿಹೋದಳು ಎಂದು ಸಿಡಬ್ಲ್ಯೂಸಿ ಅಧ್ಯಕ್ಷರು ಹೇಳಿದರು.

    ರೈಲ್ವೇ ನಿಲ್ದಾಣದಲ್ಲಿ ಬಾಲಕಿ ಮುಂದೆ ಆಶಾಕಿರಣ…

    ಅವಳು ಸ್ಥಳೀಯ ರೈಲ್ವೆ ನಿಲ್ದಾಣವನ್ನು ತಲುಪಿದಳು ಮತ್ತು ಕೋಟಾ ನಗರಕ್ಕೆ ರೈಲು ಹತ್ತಿದಳು. ಸೋಮವಾರ ಬೆಳಿಗ್ಗೆ ಕೋಟಾ ರೈಲ್ವೆ ನಿಲ್ದಾಣದಲ್ಲಿ ಅಪ್ರಾಪ್ತೆ ಕೆಟ್ಟ ಸ್ಥಿತಿಯಲ್ಲಿರುವುದನ್ನು ಗಮನಿಸಿದ ರೈಲ್ವೆ ಪೊಲೀಸ್ ಸಿಬ್ಬಂದಿ ಅವಳನ್ನು ಸಂಪರ್ಕಿಸಿದರು. ಅವಳು ತನ್ನ ಕಥೆಯನ್ನು ಅವರಿಗೆ ವಿವರಿಸಿದ ನಂತರ ಪೊಲೀಸರು ಚೈಲ್ಡ್ ಲೈನ್ ಮತ್ತು ಸಿಡಬ್ಲ್ಯೂಸಿಗೆ ಮಾಹಿತಿ ನೀಡಿದರು.

    ಇದನ್ನೂ ಓದಿ: ಮಹಿಳೆಯ ಒಳ ಉಡುಪು, ಸೀರೆ, ಬಿಂದಿ, ಬಳೆ ಧರಿಸಿದ್ದ ಹತ್ತನೇ ತರಗತಿ ಹುಡುಗ ಮನೆಯಲ್ಲಿ ಶವವಾಗಿ ನೇತಾಡುತ್ತಿದ್ದ!

    ಬಾಲಕಿ ಯ ಪೋಷಕರನ್ನು ಸಂಪರ್ಕಿಸಿದಾಗ, ಬಾಲಕಿ ಮನೆಗೆ ಮರಳದ ನಂತರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಅವರು ತಿಳಿಸಿದ್ದಾರೆ ಎಂದು ಅವರು ಹೇಳಿದರು. ಪೋಷಕರು ಮತ್ತು ಸ್ಥಳೀಯ ಪೊಲೀಸರು ಬುಧವಾರ ಕೋಟಾ ತಲುಪಲಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts