More

    ಇನ್ನೂ ಸಿಕ್ಕಿಲ್ಲ RSS ಕಾರ್ಯಕರ್ತ ರುದ್ರೇಶ್ ಹತ್ಯೆ ಆರೋಪಿ; 5 ಲಕ್ಷ ರೂ. ಬಹುಮಾನ ಘೋಷಿಸಿದ NIA!

    ಬೆಂಗಳೂರು: ಆರ್.ಎಸ್.ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ. ಆದರೆ ಆ ಕೇಸ್ ನ ಪ್ರಮುಖ ಆರೋಪಿ ಇನ್ನೂ ಪತ್ತೆಯಾಗಿಲ್ಲ.

    2016 ರಲ್ಲಿ ನಡೆದ ಕೊಲೆಗೆ ಫ್ಲ್ಯಾನಿಂಗ್ ಮಾಡಿದ್ದ ಆರೋಪಿ ಅಸೀಂ ಷರೀಫ್ ನನ್ನು ಸದ್ಯ ಎನ್ಐಎ ಹುಡುಕಾಡುತ್ತಿದೆ. ಎನ್ಐಎ ತನಿಖೆ ವೇಳೆ ಅಸೀಂ ಷರೀಫ್ ಮಾಡಿದ್ದ ಫ್ಲ್ಯಾನಿಂಗ್ ಬಯಲಾಗಿದ್ದು ಎಷ್ಟು ಹುಡುಕಿದರೂ ರುದ್ರೇಶ್ ಕೊಲೆ‌ ಆರೋಪಿ ಸಿಗುತ್ತಿಲ್ಲ.

    ನಿಷೇಧಿತ PFI‌ ಸಂಘಟನೆಯ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷನಾಗಿದ್ದ!

    ಈ ಅಸೀಂ ಷರೀಫ್, ಕೊಲೆ ಮಾಡುವುದರಿಂದ ಹಿಡಿದು ಆರೋಪಿಗಳು ತಪ್ಪಿಸಿಕೊಂಡು ಹೋಗುವ ತನಕವೂ ಪ್ಲ್ಯಾನ್ ಮಾಡಿದ್ದಾನೆ ಎನ್ನಲಾಗಿದ್ದು ಈತ ನಿಷೇಧಿತ PFI‌ ಸಂಘಟನೆಯ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷನಾಗಿದ್ದ. 2016 ರಿಂದಲೂ ಎನ್ಐಎ ಅಸೀಂ ಷರೀಫ್ ಗಾಗಿ ಹುಡುಕಾಟ ಮಾಡುತ್ತಿದೆ.

    ಇನ್ನೂ ಸಿಕ್ಕಿಲ್ಲ RSS ಕಾರ್ಯಕರ್ತ ರುದ್ರೇಶ್ ಹತ್ಯೆ ಆರೋಪಿ; 5 ಲಕ್ಷ ರೂ. ಬಹುಮಾನ ಘೋಷಿಸಿದ NIA!

    ಇಡೀ ದೇಶಾದ್ಯಂತ PFI ಮುಖಂಡರ ಮನೆಗಳ ದಾಳಿ ಮಾಡಿದಾಗಲೂ ಇಲ್ಲ ಈತನ ಸುಳಿವು ಸಿಕ್ಕಿರಲಿಲ್ಲ. ಸದ್ಯ ಸುಮಾರು 50ಕ್ಕೂ ಹೆಚ್ಚು PFI ಮುಖಂಡರನ್ನು ಎನ್ಐಎ ವಿಚಾರಣೆ ಮಾಡುತ್ತಿದೆ. ಈ ವೇಳೆ ಗೌಸ್ ನಿಯಾಜಿ ಅನ್ನೋ ವ್ಯಕ್ತಿ ಜತೆ ಅಸೀಂ ಷರೀಫ್ ಸಂಪರ್ಕದಲ್ಲಿ ಇರುವುದು ಪತ್ತೆಯಾಗಿದೆ.

    ಇನ್ನೂ ಸಿಕ್ಕಿಲ್ಲ RSS ಕಾರ್ಯಕರ್ತ ರುದ್ರೇಶ್ ಹತ್ಯೆ ಆರೋಪಿ; 5 ಲಕ್ಷ ರೂ. ಬಹುಮಾನ ಘೋಷಿಸಿದ NIA!

    ಈ‌ ಗೌಸ್ ನಿಯಾಜಿ ಸಹ ಪಿಎಫ್ಐ ಸಂಘಟನೆಯ ಸಕ್ರೀಯ ಕಾರ್ಯಕರ್ತ. ಆದರೆ ಪಿಎಫ್ಐ ಮುಖಂಡರ ಮನೆಗಳ ಮೇಲೆ ದಾಳಿ ವೇಳೆ ಗೌಸ್ ನಿಯಾಜಿ‌ ನಾಪತ್ತೆಯಾಗಿದ್ದ. ಹೀಗಾಗಿ ಸದ್ಯ ಅಸೀಂ ಷರೀಫ್ ಜತೆಗೆ ಗೌಸ್ ನಿಯಾಜಿಗಾಗಿಯೂ ಎನ್ಐಎ ಹುಡುಕಾಟ ನಡೆಸುತ್ತಿದೆ.

    ಇದೀಗ ಎನ್ಐಎ ಗೌಸ್ ನಿಯಾಜಿ ಪತ್ತೆಗೆ ಲುಕ್ ಔಟ್ ನೊಟೀಸ್ ಜಾರಿ ಮಾಡಿದ್ದು ಆರೋಪಿ ಸುಳಿವು ಕೊಟ್ಟವರಿಗೆ 5 ಲಕ್ಷ ಬಹುಮಾನ ಘೋಷಿಸಿದೆ. ಗೌಸ್ ನಿಯಾಜಿ ಸಿಕ್ಕರೆ ಆಸೀಂ ಷರೀಫ್ ಪತ್ತೆ ಆಗ್ತಾನೆ ಅನ್ನೋದು ಎನ್ಐಎ ಫ್ಲ್ಯಾನ್ ಎನ್ನಲಾಗುತ್ತಿದೆ.

    ರುದ್ರೇಶ್ ಕೊಲೆ ಪ್ರಕರಣದ ಆರೋಪಿಗಳಿಗಿಲ್ಲ ಜಾಮೀನು ಭಾಗ್ಯ

    ಏಳು ವರ್ಷಗಳಿಂದ ಜಾಮೀನಿಗಾಗಿ ರುದ್ರೇಶ್ ಕೊಲೆ ಆರೋಪಿಗಳು ಕಾಯುತ್ತಿದ್ದು ಈಗ ಮತ್ತೆ ಸುಪ್ರೀಂ ಕೋರ್ಟ್ ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ಹೀಗಾಗಿ ಪರಪ್ಪನ ಅಗ್ರಹಾರದಲ್ಲಿ ಆರೋಪಿಗಳು ಬಂಧಿತರಾಗಿಯೇ ಇದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts