More

    ಹಿಮಾಲಯದಲ್ಲಿ ಕಾಮೋತ್ತೇಜಕ ಮೂಲಿಕೆ ಹುಡುಕಲು ಹೋಗಿದ್ದ ಐವರು ಹಿಮಕುಸಿತದಲ್ಲಿ ನಾಪತ್ತೆ

    ಕಠ್ಮಂಡು: ಹಿಮಾಲಯನ್ ವಯಾಗ್ರ ಅಥವಾ ಯಾರ್ಸಗುಂಬಾ ಎಂಬ ಮೂಲಿಕೆಯನ್ನು ಹುಡುಕುತ್ತಿರುವ ಕನಿಷ್ಠ 5 ಮಂದಿ, ದೂರದ ಪಶ್ಚಿಮದ ದಾರ್ಚುಲಾ ಜಿಲ್ಲೆಯಲ್ಲಿ ಸಂಭವಿಸಿದ ಹಿಮಪಾತದಲ್ಲಿ ಹೂತು ಹೋಗಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

    ಅಧಿಕಾರಿಗಳ ಪ್ರಕಾರ, ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ (ಸ್ಥಳೀಯ ಕಾಲಮಾನ) ಬೋಲಿನ್ನ ಬೈನ್ಸ್ ವಿಲೇಜ್ ಕೌನ್ಸಿಲ್ -01 ನಲ್ಲಿ ಹಿಮಪಾತ ಸಂಭವಿಸಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಶೋಧ ತಂಡವು ಐದು ಜನರು ಕಾಣೆಯಾಗಿರುವುದು ದೃಢಪಟ್ಟಿದೆ.

    ಕಾಣೆಯಾದವರಲ್ಲಿ 4 ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದ್ದಾರೆ. ಹವಾಮಾನ ಪರಿಸ್ಥಿತಿಯೂ ಉತ್ತಮವಾಗಿಲ್ಲ” ಎಂದು ಉಪ ಮುಖ್ಯ ಜಿಲ್ಲಾ ಅಧಿಕಾರಿ ಪ್ರದೀಪ್ ಸಿಂಗ್ ಧಾಮಿ ದೂರವಾಣಿ ಮೂಲಕ ಖಚಿತಪಡಿಸಿದ್ದಾರೆ. ನೇಪಾಳ ಪೊಲೀಸರೊಂದಿಗೆ ಸಶಸ್ತ್ರ ಪೊಲೀಸ್ ಪಡೆಯ 80 ತಂಡಗಳನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ ಎಂದು ದಾರ್ಚುಲಾದ ಉಪ ಮುಖ್ಯ ಜಿಲ್ಲಾ ಅಧಿಕಾರಿ ಪ್ರದೀಪ್ ಸಿಂಗ್ ಧಾಮಿ ತಿಳಿಸಿದ್ದಾರೆ.

    ಇದನ್ನೂ ಓದಿ: 16 ವರ್ಷದ ಬಾಲಕಿಗೆ ಕಾಮೋತ್ತೇಜಕ ನೀಡಿ 8 ವರ್ಷಗಳ ಕಾಲ ರೇಪ್​ ಮಾಡಿದ ಕಾಮುಕ! 

    ಯಾರ್ಸಗುಂಬ ಸಸ್ಯದ ಕೊಯ್ಲಿನ ಋತುವಿನಲ್ಲಿ ಜನರ ಒಂದು ಕಾರವಾನ್ ವಾರಗಳ ಕಾಲ ಹಿಮದಿಂದ ಆವೃತವಾದ ಪರ್ವತಗಳ ಮೇಲೆ ಏರುತ್ತದೆ. ಈ ವರ್ಷ ನೇಪಾಳದ ಹಿಮಾಲಯದಲ್ಲಿ ಕೊಯ್ಲು ಪ್ರಾರಂಭವಾಗಲಿದೆ, ನಂತರ ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ.

    ಏನಿದು ಯಾರ್ಸಗುಂಬಾ ಕಾಮೋತ್ತೇಜಕ ಮೂಲಿಕೆ?

    ಔಷಧೀಯ ಗಿಡಮೂಲಿಕೆ ಎಂದು ಪರಿಗಣಿಸಲಾದ ಯಾರ್ಸಗುಂಬಾ, ಪರಾವಲಂಬಿ ಅಣಬೆ ಬೀಜಕಗಳು (ಒಫಿಯೋಕಾರ್ಡಿಸೆಪ್ಸ್ ಸಿನೆನ್ಸಿಸ್). ಇವು ಮಣ್ಣಿನಲ್ಲಿ ವಾಸಿಸುವ ಪತಂಗದ ಲಾರ್ವಾಗೆ ಸೋಂಕು ತಗುಲಿಸಿ ಮಮ್ಮಿ ಮಾಡಿದಾಗ ವಿಶಿಷ್ಟ ಮರಿಹುಳು-ಶಿಲೀಂಧ್ರ ಸಮ್ಮಿಳನ ಸಂಭವಿಸುತ್ತದೆ.

    ಸತ್ತ ಮರಿಹುಳುವಿನ ತಲೆಯಿಂದ ಸ್ಪಿಂಡ್ಲಿ ಶಿಲೀಂಧ್ರ ಮೊಳಕೆಯೊಡೆಯುತ್ತದೆ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಎರಡರಿಂದ ಆರು ಸೆಂಟಿಮೀಟರ್ ಉದ್ದವಿರುವ ಶಿಲೀಂಧ್ರವು ಮಣ್ಣಿನ ಮೇಲೆ ಚಿಮ್ಮುತ್ತದೆ. ಇದು ಕೊಯ್ಲುಗಾರರಿಗೆ ಕಂಡುಹಿಡಿಯಲು ಸಣ್ಣ, ಬೆರಳಿನ ಆಕಾರದ ಧ್ವಜವಾಗಿ ಕಾರ್ಯನಿರ್ವಹಿಸುತ್ತದೆ.

    ಇದನ್ನೂ ಓದಿ: ವಯಾಗ್ರ ತೆಗೆದುಕೊಂಡ ಆತ ಅವಳ ಮಾತು ಕೇಳದೆ ಕೊನೆಗೆ ಸಾವಿಗೀಡಾದ!

    ಇದು ನೇಪಾಳ, ಭಾರತ ಮತ್ತು ಭೂತಾನ್ ನಲ್ಲಿ 3000 ರಿಂದ 5000 ಮೀಟರ್ ಎತ್ತರದಲ್ಲಿ ಕಂಡುಬರುತ್ತದೆ. ಯಾರ್ಸಗುಂಬಾವನ್ನು ಹಿಮಾಲಯನ್ ವಯಾಗ್ರ ಎಂದೂ ಕರೆಯಲಾಗುತ್ತದೆ, ಇದು ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ ಮಾತ್ರ ಕಂಡುಬರುತ್ತದೆ. ಇದಕ್ಕೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೆಲೆ ಇರುವ ಕಾರಣ ಇದನ್ನು ಹುಡುಕಿಕೊಂಡು ಅನೇಕ ಜನ ಪರ್ವತ ಏರುತ್ತಾರೆ ಎನ್ನಲಾಗಿದೆ.

    ಪಶ್ಚಿಮದಿಂದ ಭಾರತದ ಉತ್ತರಾಖಂಡ ಮತ್ತು ಉತ್ತರದಿಂದ ಟಿಬೆಟ್ ಗಡಿಯಲ್ಲಿರುವ ದೂರದ ಪಶ್ಚಿಮ ನೇಪಾಳದ ಪರ್ವತ ಜಿಲ್ಲೆಗಳಲ್ಲಿ ಒಂದಾದ ದಾರ್ಚುಲಾ ಸಮುದ್ರ ಮಟ್ಟದಿಂದ 518 ರಿಂದ 7132 ಮೀಟರ್ ಎತ್ತರದಲ್ಲಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts