More

    ಪಶುಪತಿನಾಥ ದೇವಾಲಯದ ಪ್ರತಿಕೃತಿ ಭಾರತದಲ್ಲಿ ನಿರ್ಮಿಸಲು ಅನುಮತಿ; ಸುದ್ದಿ ನಿರಾಕರಿಸಿದ ನೇಪಾಳ

    ಭಾರತವನ್ನು ಹೊರತುಪಡಿಸಿ ಹಿಂದೂಗಳು ಬಹುಸಂಖ್ಯಾತರಾಗಿರುವ ದೇಶ ನೇಪಾಳ. ಹೀಗಾಗಿ ಭಾರತದಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ನೇಪಾಳಕ್ಕೆ ಧಾರ್ಮಿಕ ಯಾತ್ರೆ ಕೈಗೊಳ್ಳುತ್ತಾರೆ. ನೇಪಾಳಕ್ಕೆ ಪ್ರವಾಸ ಕೈಗೊಂಡವರು ನೇಪಾಳದ ವಿಶ್ವಪ್ರಸಿದ್ಧ ಯಾತ್ರಾ ಸ್ಥಳಕ್ಕೆ ಭೇಟಿ ನೀಡುವುದು ಬಹುತೇಕ ನಿಶ್ಚಿತ. ಈಗ ದೇವಾಲಯ ದೊಡ್ಡ ಸುದ್ದಿಯಲ್ಲಿದೆ.

    ವಿಶ್ವವಿಖ್ಯಾತ ಪಶುಪತಿನಾಥ ದೇವಾಲಯದ ಪ್ರತಿಕೃತಿಯನ್ನು ಭಾರತದಲ್ಲಿ ನಿರ್ಮಿಸಲು ಯಾರಿಗೂ ಅನುಮತಿ ನೀಡಿಲ್ಲ ಎಂದು ನೇಪಾಳದ ಪಶುಪತಿ ಪ್ರದೇಶಾಭಿವೃದ್ಧಿ ಟ್ರಸ್ಟ್‌ನ (ಪಿಎಡಿಟಿ) ಅಧಿಕಾರಿಗಳು ಶನಿವಾರ ಸ್ಪಷ್ಟಪಡಿಸಿದ್ದಾರೆ.

    ಕಠ್ಮಂಡುವಿನಲ್ಲಿರುವ ಪಶುಪತಿನಾಥ ದೇವಾಲಯದ ಪ್ರತಿಕೃತಿಯನ್ನು ಉತ್ತರಾಖಂಡದ ಹಳ್ಳಿಯೊಂದರಲ್ಲಿ ನಿರ್ಮಿಸಲಾಗುತ್ತಿದೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ (ಪಿಎಡಿಟಿ) ಈ ಕುರಿತುಹೇಳಿಕೆ ನೀಡಿದೆ.
    ಶತಮಾನಗಳಷ್ಟು ಹಳೆಯದಾದ ಈ ದೇವಾಲಯವು ಹಿಂದೂ ದೇವರಾದ ಶಿವನಿಗೆ, ಪ್ರಾಣಿಗಳ ರಕ್ಷಕನಾದ ಪಶುಪತಿಯ ಅವತಾರದಲ್ಲಿ ಸಮರ್ಪಿತವಾಗಿದೆ.

    “ಭಾರತದ ಉತ್ತರಾಖಂಡದಲ್ಲಿ ಪಶುಪತಿನಾಥ ದೇವಾಲಯ ನಿರ್ಮಿಸಲಾಗುತ್ತಿದೆ ಎಂಬ ವರದಿಯಲ್ಲಿ ಯಾವುದೇ ಸತ್ಯವಿಲ್ಲ ಮತ್ತು ಈ ಸುಳ್ಳು ವರದಿಯತ್ತ ಟ್ರಸ್ಟ್‌ನ ಗಮನ ಸೆಳೆಯಲಾಗಿದೆ” ಎಂದು ಪಿಎಡಿಟಿ ಕಾರ್ಯನಿರ್ವಾಹಕ ನಿರ್ದೇಶಕ ಡಾ ಘನಶ್ಯಾಮ್ ಖತಿವಾಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    “ಮಾಧ್ಯಮದ ಒಂದು ವಿಭಾಗದಲ್ಲಿ ಕಾಣಿಸಿಕೊಂಡಿರುವ ಇಂತಹ ಸುಳ್ಳು ಸುದ್ದಿ ವರದಿಯನ್ನು ನಾವು ಆಕ್ಷೇಪಿಸುತ್ತೇವೆ” ಎಂದು ಖತಿವಾಡ ಪಿಟಿಐಗೆ ತಿಳಿಸಿದರು.

    ಕಠ್ಮಂಡುವಿನ ಪೂರ್ವ ಹೊರವಲಯದಲ್ಲಿರುವ ಪವಿತ್ರ ನದಿ ಬಾಗ್ಮತಿ ದಡದಲ್ಲಿ ನೆಲೆಸಿರುವ ಪಶುಪತಿನಾಥ ಮಂದಿರವು ನೇಪಾಳದ ಅತ್ಯಂತ ಪೂಜ್ಯ ಹಿಂದೂ ದೇವಾಲಯವಾಗಿದೆ. ಇದು ಪ್ರಮುಖ ಪ್ರವಾಸಿ ತಾಣವಲ್ಲದೆ, ಪ್ರಪಂಚದಾದ್ಯಂತ ನೂರಾರು ಮತ್ತು ಸಾವಿರಾರು ಹಿಂದೂ ಯಾತ್ರಿಕರನ್ನು ಆಕರ್ಷಿಸುತ್ತದೆ.

    “ಪಶುಪತಿಯು ಎಲ್ಲಾ ಹಿಂದೂಗಳ ನಂಬಿಕೆಯ ಕೇಂದ್ರವಾಗಿದೆ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾದ ಇಂತಹ ಸುಳ್ಳು ಸುದ್ದಿಯು ಪಶುಪತಿ ದರ್ಶನದಲ್ಲಿ ಆಳವಾದ ನಂಬಿಕೆಯನ್ನು ಹೊಂದಿರುವ ಇಡೀ ಹಿಂದೂ ಸಮುದಾಯಕ್ಕೆ ಹೊಡೆತ ನೀಡಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

    ಭಾರತದಲ್ಲಿ ಪಶುಪತಿನಾಥ ದೇವಾಲಯದ ಪ್ರತಿಕೃತಿಯನ್ನು ನಿರ್ಮಿಸಲು ಯಾವುದೇ ರೀತಿಯ ಅನುಮತಿ ಅಥವಾ ಅನುಮೋದನೆಯನ್ನು ನೀಡಲು ಟ್ರಸ್ಟ್ “ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ” ಎಂದು ಅದು ಹೇಳಿದೆ.

    ಹುಲ್ಲು, ಎಲೆ ತಿಂದಿದ್ದಕ್ಕಾಗಿ ಒಂದು ವರ್ಷ ಜೈಲು; ಕೊನೆಗೂ ಬಿಡುಗಡೆ ಭಾಗ್ಯ

    ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರೊಂದಿಗೆ ಈಗ ಲ್ಯಾಂಡ್​ಲೈನ್​ ಫೋನ್​ ಸಂಪರ್ಕ; ರಕ್ಷಣಾ ಕಾರ್ಯದಲ್ಲಿ ಮಹತ್ವದ ಬೆಳವಣಿಗೆ

    ವೈವಿಧ್ಯದಿಂದಲೇ ಅನೈಕ್ಯತೆ, ಹಿಂದೂ ಸಂಘಟನೆಗಳ ನಡುವೆ ಸಮನ್ವಯ ಅಗತ್ಯ: ಆರ್​ಎಸ್​ಎಸ್​ ನಾಯಕ ಹೊಸಬಾಳೆ ಪ್ರತಿಪಾದನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts