More

    ಬೇಸಿಗೆಯಲ್ಲಿ ಕಾಡುವ ಅನಾರೋಗ್ಯ ಸಮಸ್ಯೆಗಳಿಗೆ ಮಾವಿನಕಾಯಿ ರಾಮಬಾಣ!

    ಬೆಂಗಳೂರು: ಮಾವಿನಕಾಯಿ ಎಂದರೆ ಸಾಕು ಬಾಯಲ್ಲಿ ನೀರು ಬರುತ್ತದೆ. ಮಾವಿನ ಕಾಯಿಯನ್ನು ಬೇಸಿಗೆಯಲ್ಲಿ ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ. ಈ ಸ್ಟೋರಿ ಓದಿ…

    ಹುಳಿಯಾಗಿರುವ ಮಾವಿನ ಕಾಯಿಯನ್ನು ಉಪ್ಪು, ಖಾರ ಹಾಕಿದ್ರೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಮಾವಿನ ಹಣ್ಣು  ಸಿಹಿಯಾದ ಹಣ್ಣಾಗಿದ್ದು, ಬಹಳ ರುಚಿಯಾಗಿರುತ್ತದೆ. ಮಾವಿನ ಕಾಯಿಯಲ್ಲಿ ವಿಟಮಿನ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ.

    ಇದನ್ನೂ ಓದಿ: ಪಾಕ್​​ನಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚಳಕ್ಕೆ ಹಲ್ಲಿ ತೈಲ ಬಳಕೆ!

    ಆರೋಗ್ಯಕ್ಕೆ ಮಾವಿನ ಕಾಯಿ ಸೇವನೆ ಉತ್ತಮ:

    • ಬೇಸಿಗೆಯಲ್ಲಿ ಮಾವಿನಕಾಯಿ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
    • ಬೇಸಿಗೆಯ ತಿಂಗಳುಗಳಲ್ಲಿ ನೀವು ತೂಕವನ್ನು ಕಳೆದುಕೊಳ್ಳುವ ಗುರಿಯನ್ನು ಹೊಂದಿದ್ದರೆ, ಮಾವಿನಕಾಯಿಯನ್ನು ನಿಯಮಿತವಾಗಿ ಸೇವಿಸುತ್ತಾ ಬನ್ನಿ.
    • ಜೀರ್ಣಕಾರಿ ಕಿಣ್ವಗಳ ಸ್ರವಿಸುವಿಕೆಯನ್ನು ಹೆಚ್ಚಿಸುವ ಮೂಲಕ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ನಿಮಗೆ ಅಸಿಡಿಟಿ ಇದ್ದರೆ, ಮಾವಿನಕಾಯಿಯನ್ನು ಸೇವಿಸಿ.
    • ಮಾವಿನ ಕಾಯಿಯಲ್ಲಿ ವಿಟಮಿನ್ ಎ, ಕ್ಯಾಲ್ಸಿಯಂ ಹಾಗೂ ಮೆಗ್ನೇಷಿಯಂ ಕೂಡ ಅಧಿಕ ಪ್ರಮಾಣದಲ್ಲಿದೆ. ಬೇಸಿಗೆಯಲ್ಲಿ ಶಾಖದ ದಾಳಿಯಿಂದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ.
    • ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಮಾವಿನಕಾಯಿ ಸೇವನೆಯಿಂದ ಕಡಿಮೆ ಮಾಡಬಹುದು. ಬೇಸಿಗೆಯಲ್ಲಿ ಹೆಚ್ಚಾಗಿ ಕಾಡುವ ಅಜೀರ್ಣ, ಭೇದಿ, ಮಲಬದ್ಧತೆಯಂತಹ ಸಮಸ್ಯೆಗಳಿಗೆ ಮಾವಿನ ಕಾಯಿ ರಾಮಬಾಣವಾಗಿದೆ.
    • ಮಾವಿನ ಕಾಯಿ ವಸಡಿನ ರಕ್ತಸ್ರಾವವನ್ನು ತಗ್ಗಿಸಲು ನೆರವು ನೀಡುತ್ತೆ. ಅಷ್ಟೇ ಅಲ್ಲ, ಹಲ್ಲುಗಳು ಹುಳುಕಾಗದಂತೆ ತಡೆಯುತ್ತೆ ಕೂಡ.

    ಆಜಾನ್‌ ವೇಳೆ ಭಾಷಣ ನಿಲ್ಲಿಸಿ ಗೌರವ ತೋರಿದ ರಾಹುಲ್ ಗಾಂಧಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts