ಸಿನಿಮಾ

ಪಾಕ್​​ನಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚಳಕ್ಕೆ ಹಲ್ಲಿ ತೈಲ ಬಳಕೆ!

ಪಾಕಿಸ್ತಾನ: ಮುಳ್ಳು ಬಾಲದ ಹಲ್ಲಿಯ ಎಣ್ಣೆಯಿಂದ ಮಸಾಜ್ ಮಾಡಿಕೊಂಡರೆ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಪಾಕ್​​ನಲ್ಲಿ ಹಲ್ಲಿ ತೈಲಕ್ಕೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ರಾವಲ್ಪಿಂಡಿ ಪ್ರದೇಶದ ಪುರುಷರು ಇದನ್ನು ಹೆಚ್ಚು ಪ್ರಮಾಣದಲ್ಲಿ ಬಳಕೆ ಮಾಡುತ್ತಿದ್ದಾರೆ.

ರಾವಲ್ಪಿಂಡಿ ಪುರುಷರು ಹೊಸ ಮಾರ್ಗ ಕಂಡುಕೊಂಡಿದ್ದಾರೆ ಎಂದು ಹೇಳಲಾಗಿದೆ. ವೈಜ್ಞಾನಿಕವಾಗಿ ಇದು ಸಾಬೀತಾಗಿಲ್ಲ. ಆದರೂ ಬೇಡಿಕೆ ಮಾತ್ರ ವಿಪರೀತವಾಗಿದೆ.

ಹಲ್ಲಿಯ ಕೊಬ್ಬಿನಿಂದ ತೆಗೆದ ಎಣ್ಣೆ, ಚೇಳಿನ ತೈಲವನ್ನು ಕಟುವಾದ ಮಸಾಲೆಯೊಂದಿಗೆ ಬೆರೆಸಲಾಗುತ್ತದೆ. ಇದನ್ನು ಸಾಂಡಾ ತೈಲ ಎಂದೂ ಕರೆಯಲ್ಪಡುತ್ತದೆ. ರಾಜಾ ಮಾರುಕಟ್ಟೆಯಲ್ಲಿ ನಾಲ್ಕು ವ್ಯಾಪಾರಿಗಳು ಇದನ್ನು ಮಾರಾಟ ಮಾಡುತ್ತಾರೆ. ಇವರಲ್ಲಿ ಒಬ್ಬರಾಗಿರುವ ಯಾಸಿರ್ ಅಲಿ ಎಂಬುವರು “ಕೇವಲ ಐದು ಹನಿಗಳನ್ನು ಪುರುಷರ ಜನನಾಂಗಕ್ಕೆ ಹಚ್ಚಿ ಮಸಾಜ್ ಮಾಡಬೇಕು. ಲೈಂಗಿಕ ಸಾಮರ್ಥ್ಯ ಹೆಚ್ಚಿಸುತ್ತದೆ’ ಎಂದು ಹೇಳುತ್ತಾರೆ.

ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯಗಳಲ್ಲಿ ಈ ಹಲ್ಲಿಯನ್ನು ಕಳ್ಳ ಬೇಟೆ, ಸಾಗಾಟ ಮಾಡಲಾಗುತ್ತದೆ. ತಮ್ಮ ಗೂಡುಗಳಿಂದ ಹೊರಬಂದು ಬಿಸಿಲಿಗೆ ಕೂರುವ ಸಮಯದಲ್ಲಿ ಅವುಗಳನ್ನು ಹಿಡಿಯಲಾಗುತ್ತದೆ. ಇಸ್ಲಾಮಾಬಾದ್ ಸಮೀಪದ 25 ವರ್ಷದ ಮಹಮ್ಮದ್ ನಾಸೀರ್ ಎಂಬಾತ ಮೀನುಗಾರಿಕೆಗೆ ಬಳಕೆ ಮಾಡುವ ತಂತಿ ಬಲೆಗಳ ಮೂಲಕ ಈ ಹಲ್ಲಿಗಳನ್ನು ಹಿಡಿಯುತ್ತಾನೆ. ಈತನ ವಂಶ ಇದರಲ್ಲಿ ಪಳಗಿದೆ. ಈತ ನಾಲ್ಕನೇ ತಲೆಮಾರಿನ ಕಳ್ಳ ಬೇಟೆಗಾರನಾಗಿದ್ದು, ‘ಪ್ರಾಣಿ ಓಡಿ ಹೋಗದಿರಲು ತಂತಿಬಲೆ ಬಳಕೆ ಮಾಡುತ್ತೇವೆ. ಯಾವುದೇ ಪ್ರಾಣಿ ಪ್ರಾಣಭಯದಲ್ಲಿರುವಾಗ ಬುಲೆಟ್ ವೇಗದಲ್ಲಿ ಓಡುತ್ತದೆ’ ಎಂದು ಹೇಳುತ್ತಾನೆ.

BJP Manifesto: ಬಿಜೆಪಿಯ ‘ಪ್ರಜಾ ಪ್ರಣಾಳಿಕೆ’ಯಲ್ಲಿ ಏನಿದೆ?

Latest Posts

ಲೈಫ್‌ಸ್ಟೈಲ್