More

    ವೋಟ್ ಬ್ಯಾಂಕ್ ಛಿದ್ರವಾಗಿದ್ದಕ್ಕೆ ಕಾಂಗ್ರೆಸ್ ಅಳಲು ತೋಡಿಕೊಳ್ಳುತ್ತಿದೆ: ಸಂಸದ ತೇಜಸ್ವಿ ಸೂರ್ಯ ವ್ಯಂಗ್ಯ

    – ಮುಸ್ಲಿಂ ಮೀಸಲು ರದ್ದು ಸಂವಿಧಾನಾತ್ಮಕ  

    ಬೆಂಗಳೂರು: ಪರಿಶಿಷ್ಟ ಜಾತಿ ಒಳ ಮೀಸಲು, ಒಕ್ಕಲಿಗರು ಹಾಗೂ ಲಿಂಗಾಯತರಿಗೆ ಮೀಸಲು ಪ್ರಮಾಣ ಹೆಚ್ಚಳ ಮತ್ತು ಅಸಂವಿಧಾನಿಕವಾಗಿದ್ದ ಮುಸ್ಲಿಮರಿಗೆ ಶೇ.4ರಷ್ಟು ಮೀಸಲು ರದ್ದು ಮಾಡಿದ ರಾಜ್ಯ ಸರ್ಕಾರ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದು, ವಾಸ್ತವಿಕ ನೆಲೆಗಟ್ಟಿನ ದಿಟ್ಟ ನಡೆಯಾಗಿದೆ ಎಂದು ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಪ್ರಶಂಸಿಸಿದ್ದಾರೆ.

    ಇದನ್ನೂ ಓದಿ: ನೋವು ನಿವಾರಕ, ಆ್ಯಂಟಿ ಬಯೋಟಿಕ್ ಸೇರಿದಂತೆ ಅಗತ್ಯ ಔಷಧಗಳು ಏಪ್ರಿಲ್‌ನಿಂದ ಇನ್ನಷ್ಟು ದುಬಾರಿ

    ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ‌ಯಲ್ಲಿ ಮಾತನಾಡಿದ ಅವರು, ವೋಟ್ ಬ್ಯಾಂಕ್ ಛಿದ್ರ, ತುಷ್ಟಿಕರಣ ರಾಜಕಾರಣಕ್ಕೆ ಹೊಡೆತ ಬಿದ್ದಿರುವುದರಿಂದ ಕಾಂಗ್ರೆಸ್ ಅಳಲು ತೋಡಿಕೊಳ್ಳುತ್ತಿದ್ದು, ಈ ಕಾರಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರಿಗೆ ಶಕುನಿ ಎಂದು ಟೀಕಿಸಲಾರಂಭಿಸಿದೆ ಎಂದು ವ್ಯಂಗ್ಯವಾಡಿದರು.

    ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಶೇ4 ಮೀಸಲು ವಾಪಸ್ ಕೊಡುತ್ತೇವೆ ಎನ್ನುತ್ತಿದ್ದಾರೆ. ಯಾವ ಸಮುದಾಯಗಳಿಂದ ಕಿತ್ತುಕೊಂಡು ವಾಪಸ್ ಕೊಡುತ್ತಾರೆ ? ಎಂಬ ಪ್ರಶ್ನೆಗೆ ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ.

    ಇದನ್ನೂ ಓದಿ: ಬೆಂಕಿಯಿಂದ ಪಾರಾಗಲು ಹೋಗಿ 6ನೇ ಮಹಡಿಯಿಂದ ಬಿದ್ದು ಪ್ರಾಣ ಬಿಟ್ಟ ಮಾಡೆಲ್​​
    ಇತರೆ ಹಿಂದುಳಿದ ವರ್ಗಗಳ ಬಗ್ಗೆ ಕಾಂಗ್ರೆಸ್​ ಯಾಕಿಷ್ಟು ದ್ವೇಷ ಮಾಡುತ್ತಿದೆ. ಆಕ್ರೋಶವೆಂಬುದು ಅರ್ಥವಾಗುತ್ತಿಲ್ಲ. ಅನೇಕ ಹಿಂದುಳಿದ ವರ್ಗಗಳ ನಾಯಕರಿಗೆ ಅಪಮಾನ ಮಾಡಿದ ಐತಿಹಾಸಿಕ ಉದಾಹರಣೆಗಳಿವೆ ಎಂದು ತೇಜಸ್ವಿ ಸೂರ್ಯ ಕಿಡಿಕಾರಿದರು.

    VIDEO| ಹಾಸ್ಟೆಲ್ ಸಮಯದ ವಿಚಾರವಾಗಿ ಹಿಗ್ಗಾಮುಗ್ಗಾ ಹೊಡೆದಾಡಿಕೊಂಡ ವಿದ್ಯಾರ್ಥಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts