More

    ಪ್ರಧಾನಿ ಮೋದಿ ಮೂರನೇ ಚುನಾವಣಾ ಪ್ರಚಾರ ಕಾರ್ಯಕ್ರಮ ಫಿಕ್ಸ್; ಹೀಗಿದೆ ವೇಳಾಪಟ್ಟಿ

    ಬೆಂಗಳೂರು: ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಪ್ರಕಟವಾದ ನಂತರ ಪ್ರಧಾನಿ ನರೇಂದ್ರ ಮೋದಿ ಮೇ 5 ರಂದು ರಾಜ್ಯಕ್ಕೆ ಮೋದಿ ಮೂರನೇ ಬಾರಿ‌ ಚುನಾವಣಾ ಪ್ರಚಾರದ ಅಖಾಡ ಪ್ರವೇಶಿಸಲಿದ್ದಾರೆ.

    ಮೇ 5 ರಂದು ಬಳ್ಳಾರಿ ಮತ್ತು ತುಮಕೂರುಗಳಲ್ಲಿ ಬೃಹತ್ ಸಾರ್ವಜನಿಕ ಸಭೆಗಳಲ್ಲಿ ಮೋದಿ ಭಾಗಿಯಾದ ನಂತರ ಅಂದು ರಾತ್ರಿ‌ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದು ಮೇ 06ರಂದು ಬೆಂಗಳೂರಿನಲ್ಲಿ ಐತಿಹಾಸಿಕ ಬೃಹತ್ ರೋಡ್ ಶೋ ನಡೆಸಲಿದ್ದಾರೆ.

    ಇದನ್ನೂ ಓದಿ: ಮೋದಿ ಕಾರ್ಯಕ್ರಮ ಯಶಸ್ವಿಗಾಗಿ 108 ತೆಂಗಿನಕಾಯಿ ಗಣಹೋಮ ಪೂಜೆ ಮಾಡಿದ ಬಿಜೆಪಿ ಅಭ್ಯರ್ಥಿ

    ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಿ ವಿ ರಾಮನ್ ನಗರ ಕ್ಷೇತ್ರದಿಂದ‌ ಬ್ರಿಗೇಡ್ ರಸ್ತೆವರೆಗೆ ಸುಮಾರು 8 ಕಿ.ಮೀ ಉದ್ದದ ಮೊದಲ ಮೆಗಾ ರೋಡ್ ಶೋ ನಡೆಸಲಿದ್ದಾರೆ. ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8.30 ರ ತನಕ ಎರಡನೇ ಮೆಗಾ ರೋಡ್ ಶೋ ಕೋಣನಕುಂಟೆ ಬಳಿಯ ಬ್ರಿಗೇಡ್ ಮಿಲೆನಿಯಂನಿಂದ ಸ್ಯಾಂಕಿ ಕೆರೆ ವರೆಗೆ 29.4 ಕಿ.ಮೀ ವರೆಗೆ ನಡೆಯಲಿದೆ. ಎರಡನೇ ದಿನವೂ ಬೆಂಗಳೂರಿನಲ್ಲೇ ಮೋದಿ ವಾಸ್ತವ್ಯ ಹೂಡುವರು.

    ಪ್ರಧಾನಿ ಮೋದಿ ಮೂರನೇ ಚುನಾವಣಾ ಪ್ರಚಾರ ಕಾರ್ಯಕ್ರಮ ಫಿಕ್ಸ್; ಹೀಗಿದೆ ವೇಳಾಪಟ್ಟಿ ಪ್ರಧಾನಿ ಮೋದಿ ಮೂರನೇ ಚುನಾವಣಾ ಪ್ರಚಾರ ಕಾರ್ಯಕ್ರಮ ಫಿಕ್ಸ್; ಹೀಗಿದೆ ವೇಳಾಪಟ್ಟಿ

    ಮೇ 07 ರಂದು ಬಾದಾಮಿ, ಹಾವೇರಿ, ಶಿವಮೊಗ್ಗ ಗ್ರಾಮೀಣ ಹಾಗೂ ನಂಜನಗೂಡು ಕ್ಷೇತ್ರಗಳಲ್ಲಿ ಮೋದಿ ಪ್ರವಾಸ ನಡೆಸಲಿದ್ದು ಈ ನಾಲ್ಕೂ ಕ್ಷೇತ್ರಗಳಲ್ಲಿ ಸಾರ್ವಜನಿಕ ಬೃಹತ್ ಸಭೆಗಳಲ್ಲಿ ಮೋದಿ ಭಾಷಣ ಮಾಡಲಿದ್ದಾರೆ.

    ಇದನ್ನೂ ಓದಿ: ಕಾಂಗ್ರೆಸ್​ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ: ಹೊಸಪೇಟೆಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

    ಬಳಿಕ ಅಂದು ಸಂಜೆ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದು, ಅಂದು ರಾತ್ರಿ 7ಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ ಮೋದಿ ದೆಹಲಿಗೆ ಮರು ಪ್ರಯಾಣ ಬೆಳೆಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts