ಮತ್ತೆ ಒಂದಾಗಲಿದ್ದಾರೆ ಸಮಂತಾ ಮತ್ತು ನಾಗ ಚೈತನ್ಯ! ಹೇಗೆ ಅಂತೀರಾ?

WhatsApp Image 2022-11-12 at 5.33.08 PM
Published on

ಮುಂಬೈ: 2021ರಲ್ಲಿ ನಡೆದ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯರ ವಿಚ್ಛೇದನ ಅಭಿಮಾನಿಗಳಿಗೆ ಆಘಾತ ನೀಡಿತ್ತು. 2017ರಲ್ಲಿ ಮದುವೆಯಾದ ಈ ದಂಪತಿ ನಾಲ್ಕು ವರ್ಷಗಳ ಬಳಿಕ ದೂರವಾಗಿದ್ದರು. ಈ ಬಗ್ಗೆ ಅನೇಕ ಬಾರಿ ಸಮಂತಾ ಸಂದರ್ಶನಗಳಲ್ಲಿ ಪರೋಕ್ಷವಾಗಿ ಮಾತನಾಡಿದ್ದಾರೆ, ನಾಗ ಚೈತನ್ಯ ಅವರು ಮೌನ ವಹಿಸಿದ್ದಾರೆ.

ಆದರೆ ಬಾಲಿವುಡ್ ವರದಿಗಳು ಬೇರೆ ರೀತಿಯೇ ಇವೆ. ಸಮಂತಾ ಮತ್ತು ನಾಗ ಚೈತನ್ಯ ವೈಯಕ್ತಿಕ ಭಿನ್ನಾಭಿಪ್ರಾಯ ಮರೆತು ವೃತ್ತಿಪರವಾಗಿ ಅತೀ ಶೀಘ್ರದಲ್ಲಿ ಒಟ್ಟಿಗೆ ಕೆಲಸ ಮಾಡಲಿದ್ದಾರಂತೆ. ಆಶ್ಚರ್ಯವಾದರೂ ಇದು ಸತ್ಯ. ಹೇಗೆ ಅಂತೀರಾ? ಈ ಸುದ್ದಿ ಪೂರ್ತಿ ಓದಿ.

ಈ ಹಿಂದೆ, ಜನಪ್ರಿಯ ಟಾಕ್ ಶೋ 'ಕಾಫಿ ವಿತ್ ಕರಣ್​ 7​'ರಲ್ಲಿ ಕಾಣಿಸಿಕೊಂಡಿದ್ದ ಸಮಂತಾ ಅವರು, ನಾಗ ಚೈತನ್ಯರ ಜತೆ ಇರುವ ಸಂಬಂಧದ ಬಗ್ಗೆ ಮಾತಾಡಿದರು. "ನಮ್ಮಿಬ್ಬರ ನಡುವೆ ಒಳ್ಳೆಯ ಸಂಬಂಧವಿಲ್ಲ, ನಮ್ಮಿಬ್ಬರನ್ನು ನೀವು ಒಂದು ರೂಮಿನಲ್ಲಿ ಬಿಟ್ಟರೆ ಚೂಪಾದ ಅಪಾಯಕಾರಿ ವಸ್ತುಗಳನ್ನು ಬಚ್ಚಿಟ್ಟು ಬಿಡಿ" ಎಂದಿದ್ದರು. ಈ ಮಾತು ಜನರಲ್ಲಿ ಅಚ್ಚರಿ ಮೂಡಿಸಿತ್ತು. ಇವರಿಬ್ಬರ ಆನ್-ಸ್ಕ್ರೀನ್ ಮಿಲನದ ಬಗ್ಗೆ ಜನರು ಯಾವ ರೀತಿ ಪ್ರತಿಕ್ರಿಯೆಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net