More

    ನಾಗ ಚೈತನ್ಯ ಮೊದಲ ಭೇಟಿಯ ಗಳಿಗೆ ನೆನಪಿಸಿಕೊಂಡ ಸಮಂತಾ!

    ನಟಿ ಸಮಂತಾ ಎಂಬ ಹೆಸರೇ ಸಾಕು ಅಭಿಮಾನಿಗಳನ್ನು ಖುಷಿ ಪಡಿಸಲು. ಇನ್ನು, ಅವರ ಸಿನಿಮಾಗಳ ಬಗ್ಗೆಯಂತೂ ಹೇಳ ಬೇಕಿಲ್ಲ. ಹೌದು, ಕೇವಲ ಪಕ್ಕದ ಮನೆಯ ಹೀರೋಯಿನ್ ಆಗಿ ಮಾತ್ರವಲ್ಲದೇ ಹಲವು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಬಹುತೇಕ ಎಲ್ಲಾ ಸೌತ್ ಸಿನಿಪ್ರೇಕ್ಷಕರ ಗಮನ ಸೆಳೆದಿದ್ದಾರೆ ಸ್ಯಾಮ್. ಉದಾಹರಣೆಗೆ ದಿ ಫ್ಯಾಮಿಲಿ ಮ್ಯಾನ್ವೆಬ್ ಸರಣಿ. ಅದರಿಂದ ನಟಿ ಸಮಂತಾ ಅವರ ಜೀವನವೇ ಬದಲಾಯಿತು. ಬಳಿಕ, ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಾಯಿತು. ಇಂತಹ ನಟಿಗೆ ಫೆಬ್ರವರಿ. 26, ಅಂದರೆ ಇಂದು ತುಂಬಾ ಪ್ರಮುಖವಾದ ದಿನವಂತೆ.
    ಹೌದು, 2010 ರ ಫೆಬ್ರವರಿ 26 ರಂದು ನಟಿ ಸಮಂತಾ ಸಿನಿಮಾರಂಗದಲ್ಲಿ ತಮ್ಮ ಪ್ರಯಾಣವನ್ನು ಆರಂಭಿಸಿದರು. ಹಾಗಾಗಿ, ನಟಿ ಸಮಂತಾ ಅವರ ಸಿನಿ ಪಯಣಕ್ಕೆ ಇಂದಿಗೆ 12 ವರ್ಷ ತುಂಬಿದೆ. ಹೀಗಾಗಿ, ಈ ವಿಶೇಷ ದಿನಕ್ಕೆ ಒಂದು ವಿಶೇಷ ಫೋಟೋ ಶೇರ್ ಮಾಡಿದ ನಟಿ ತಮ್ಮ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ. ಇನ್ನು, ನಟಿ ಸಮಂತಾಗೆ ಬೇರೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳ ಸಾವಿರ ಸಾವಿರ ಅಭಿನಂದನೆಗಳ ಕಾಮೆಂಟ್​ಗಳು ಹರಿದುಬಂದಿವೆ. 2010 ರ ಫೆಬ್ರವರಿ 26 ರಂದು ‘ಏ ಮಾಯ ಚೇಸಾವೆ’ ರಿಲೀಸ್ ಆಗಿದ್ದು, ಇದು ನಟಿ ಸಮಂತಾ ಅವರ ಮೊದಲ ಸಿನಿಮಾ ಆಗಿದೆ. ಇದೇ ಚಿತ್ರದ ಮೂಲಕ ನಟಿ ತಮ್ಮ ಮಾಜಿ ಪತಿ ನಾಗ ಚೈತನ್ಯಾರನ್ನು ಮೊದಲು ಭೇಟಿಯಾಗಿದ್ದು.
    ಈ ಚಿತ್ರದಲ್ಲಿ ನಟ ನಾಗ ಚೈತನ್ಯ ಜತೆಗೆ ನಾಯಕಿಯಾಗಿ ನಟಿಸಿದ ಸಮಂತಾ ಅವರಿಗೆ ಸೌತ್ ಸಿನಿರಂಗದಲ್ಲಿ ಬಹಳಷ್ಟು ಅವಕಾಶಗಳು ಹರಿದು ಬಂದವು. ತಾವು ಮೊದಲು ಬಣ್ಣ ಹಚ್ಚಿದ ಚಿತ್ರದ ಮೂಲಕವೇ ಸಮಂತಾ ‘ಸಿನಿಮಾ ಅವಾರ್ಡ್’, ‘ಫಿಲ್ಮ್​ ಫೇರ್​ ಸೌತ್​’, ‘ನಂದಿ ಅವಾರ್ಡ್ಎಂಬ ಮೂರು ಖ್ಯಾತ ಪ್ರಶಸ್ತಿಗಳನ್ನು ತಮ್ಮ ಉತ್ತಮ ನಟನೆಗಾಗಿ ಪಡೆದಿದ್ದರು. ಅಂದಿನಿಂದ ಇಂದಿನವರೆಗೆ ಸಮಂತಾ ನಟಿಸಿದ ಎಲ್ಲಾ ಚಿತ್ರಗಳಿಗೆ ಬಹುತೇಕ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, ಅವರ ಪಾತ್ರಗಳು ಒಂದೊಂದು ಕೂಡಾ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದಿವೆ. ಇನ್ನು, ಇದೀಗ ‘ಶಾಕುಂತಲಂ’, ‘ಯಶೋಧಾ’ ಸೇರಿ ಸೌತ್ ಮತ್ತು ಉತ್ತರ ಭಾಗದ ಹಲವು ಸಿನಿಮಾಗಳಲ್ಲಿ ನಟಿ ಸಮಂತಾ ಅಭಿನಯಿಸುತ್ತಿದ್ದಾರೆ.

    ನಾಗ ಚೈತನ್ಯ ಮೊದಲ ಭೇಟಿಯ ಗಳಿಗೆ ನೆನಪಿಸಿಕೊಂಡ ಸಮಂತಾ! ನಾಗ ಚೈತನ್ಯ ಮೊದಲ ಭೇಟಿಯ ಗಳಿಗೆ ನೆನಪಿಸಿಕೊಂಡ ಸಮಂತಾ! ನಾಗ ಚೈತನ್ಯ ಮೊದಲ ಭೇಟಿಯ ಗಳಿಗೆ ನೆನಪಿಸಿಕೊಂಡ ಸಮಂತಾ! ನಾಗ ಚೈತನ್ಯ ಮೊದಲ ಭೇಟಿಯ ಗಳಿಗೆ ನೆನಪಿಸಿಕೊಂಡ ಸಮಂತಾ!

    ‘ಭೀಮ್ಲಾ ನಾಯಕ್’ ಅಬ್ಬರ ತಡೆಯಲು ದಿನವೊಂದಕ್ಕೆ 3 ಕೋಟಿ ರೂ. ಖರ್ಚು ಮಾಡುತ್ತಿರುವ ಜಗನ್?

    ಸಂಬಂಧಿಯ ಮದುವೆಯಲ್ಲಿ ಮಕ್ಕಳೊಟ್ಟಿಗೆ ಮಿಂಚಿದ ಯಶ್, ರಾಧಿಕಾ! ಫೋಟೋಗಳು ವೈರಲ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts