ಸಂಬಂಧಿಯ ಮದುವೆಯಲ್ಲಿ ಮಕ್ಕಳೊಟ್ಟಿಗೆ ಮಿಂಚಿದ ಯಶ್, ರಾಧಿಕಾ! ಫೋಟೋಗಳು ವೈರಲ್...

Published on
ತುಂಬಾ ದಿನಗಳ ಬಳಿಕ ನಟಿ ರಾಧಿಕಾ ಪಂಡಿತ್ ಹಾಗೂ ನಟ ಯಶ್ ಅವರು ಒಂದು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಹೌದು, ರಾಧಿಕಾ ಅವರ ತವರುಮನೆಯ ಸಂಬಂಧಿಯೊಬ್ಬರ ಮದುವೆಯಲ್ಲಿ ಈ ತಾರಾ ಜೋಡಿ ತಮ್ಮ ಮಕ್ಕಳೊಂದಿಗೆ ಭಾಗವಹಿಸಿದರು. ಹಾಗೂ, ಮದುವೆಯಲ್ಲಿನ ಫೋಟೋಗಳನ್ನು ನಟಿ ರಾಧಿಕಾ ಪಂಡಿತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ಫೋಟೋಗಳಿಗೆ ತಾರಾ ಜೋಡಿಯ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಟಿ ರಾಧಿಕಾ ಅವರು ಹಳದಿ ಬಣ್ಣದ ಸೀರೆಯಲ್ಲಿ ಮತ್ತು ಯಶ್ ಅವರು ಕಪ್ಪು ಬಣ್ಣದ ಕುರ್ತಾದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ಆಯ್ರಾ ಮತ್ತು ಯಥರ್ವ್​ ಕೂಡಾ ತುಂಬಾ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಇನ್ನು, ಮದುವೆ ಫೋಟೋಗಳು ಹಂಚಿಕೊಳ್ಳುವ ಮೊದಲು ನಟಿ ರಾಧಿಕಾ ಮಕ್ಕಳಾದ ಆಯ್ರಾ ಮತ್ತು ಯಥರ್ವ್ ವಿಮಾನದಲ್ಲಿರುವ ಫೋಟೋ ಪೋಸ್ಟ್ ಮಾಡಿದ್ದರು. ಸದ್ಯ, ಈ ಕುಟುಂಬದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ನಟಿಯ ಪೋಸ್ಟ್​ಗೆ ಕೆಲವೇ ಗಂಟೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net