More

    ಭಜರಂಗದಳ ನಿಷೇಧವನ್ನು ಪ್ರಣಾಳಿಕೆಯಿಂದ ಹಿಂಪಡೆಯದಿರಲು ಕಾಂಗ್ರೆಸ್ ನಿರ್ಧಾರ

    ಬೆಂಗಳೂರು: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ದ ನಿಷೇಧ ಪ್ರಸ್ತಾಪವಾಗುತ್ತಿದ್ದಂತೆ ಹಿಂದೂಪರ ಸಂಘಟನೆಗಳು ಸಿಡಿದೆದ್ದಿದ್ದವು. ರಾಜ್ಯದ ಬಹುತೇಕ ಕಡೆಗಳಲ್ಲಿ ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಇದು ಚುನಾವಣೆಯ ದೃಷ್ಟಿಯಿಂದ ಕಾಂಗ್ರೆಸ್​ಗೆ ಹಿನ್ನೆಡೆ ಆಗಬಹುದು ಎಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಭಜರಂಗದಳ ನಿಷೇಧ ಮಾಡುತ್ತೇವೆ ಎಂದಿರುವುದಕ್ಕೆ ಕಾಂಗ್ರೆಸ್​ನ ಕೆಲ ಹಿರಿಯ ನಾಯಕರೂ ಅಸಮಾಧಾನಕ್ಕೆ ಒಳಗಾಗಿದ್ದು, ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ.

    ಇಷ್ಟೆಲ್ಲಾ ಆದರೂ ಭಜರಂಗದಳ ನಿಷೇಧದ ವಿಚಾರವನ್ನು ವಾಪಸ್ ಪಡೆದುಕೊಳ್ಳದಿರಲು ಕಾಂಗ್ರೆಸ್ ನಿರ್ಧರಿಸಿದೆ ಎನ್ನಲಾಗಿದೆ. ಈ ವಿಚಾರವನ್ನು ಪ್ರಣಾಳಿಕೆಯಿಂದ ಕೈಬಿಡದೇ ಇರಲು ತೀರ್ಮಾನಿಸಿರುವ ಕಾಂಗ್ರೆಸ್ ಬಿಜೆಪಿ ವಿರುದ್ಧ ಇನ್ನಷ್ಟು ಪರಿಣಾಮಕಾರಿಯಾಗಿ ಹೋರಾಟಕ್ಕೆ ಮುಂದಾಗಿದೆ.

    ಇದನ್ನೂ ಓದಿ: ನೇತ್ರಾವತಿ ನದಿಯಲ್ಲಿ ಭಜರಂಗದಳ ಮುಖಂಡನ ಶವ ಪತ್ತೆ! ಸಾವಿನ ಸುತ್ತ ಅನುಮಾನದ ಹುತ್ತ…

    ಹನುಮಂತ ಮತ್ತು ಭಜರಂಗದಳ ಬೇರೆ ಬೇರೆ: ಡಿಕೆಶಿ

    ಈ ನಡೆಗೆ ಸ್ಪಷ್ಟನೆ ರೂಪದಲ್ಲಿ ಹನುಮಂತನಿಗೂ ಭಜರಂಗದಳ ಕ್ಕೂ ಸಂಬಂಧ ಇಲ್ಲ, ಹನುಮನೇ ಬೇರೆ ಭಜರಂಗದಳ ವೇ ಬೇರೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಈ ವಿಚಾರವಾಗಿ ಡಿಕೆಶಿ ಮಾತನಾಡಿದ್ದು “ನಾವೂ ಆಂಜನೇಯ ಭಕ್ತರು. ಅವರು ಮಾತ್ರನಾ? ಶಾಂತಿ ತೋಟ ಕದಲಬಾರದು. ಸೌಹಾರ್ದತೆ‌ ಇರಬೇಕು. ಭಜರಂಗದಳ ಬ್ಯಾನ್ ಮಾಡ್ತೀವಿ ಅಂದ್ರೆ ಯಾಕೆ ಅವರು ಗಾಬರಿ ಆಗ್ತಿದ್ದಾರೆ?

    ಇದನ್ನೂ ಓದಿ: ಸಾಗರದ ಭಜರಂಗದಳ ಕಾರ್ಯಕರ್ತನ ಹತ್ಯೆ ಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…!

    ಆಂಜನೇಯನಿಗೂ ಭಜರಂಗದಳ ಕ್ಕೂ ಏನ್ ಸಂಬಂಧ? ಬಿಜೆಪಿ ಅವರು ಬಹಳ ಪ್ರವೋಕ್ ಮಾಡ್ತಿದ್ದಾರೆ. ಜನಕ್ಕೆ ಇದು ಅರ್ಥ ಅಗಿದೆ. ನಾವು ಹನುಮಂತನ ಭಕ್ತರು. ನಮ್ಮದು ಆಂಜನೇಯ ಪ್ರವೃತ್ತಿ. ಆಂಜನೇಯ ಬೇರೆ ಭಜರಂಗದಳ ಬೇರೆ. ಬಿಜೆಪಿ ಅವರು ಭಜರಂಗಿ ಅಂತ ಕ್ಯಾಂಪೇನ್ ಮಾಡೋದು ಬೇಡ. ಹೊಟ್ಟೆಗೆ ಏನ್ ಕೊಟ್ರಿ, ಉದ್ಯೋಗ ಏನ್ ಕೊಟ್ರಿ ಹೇಳಿ” ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts