ಈ ವೈರಲ್ ಫೋಟೋ ನೋಡಿ ತಲೆಕೆಡಿಸಿಕೊಂಡ ನೆಟ್ಟಿಗರು! ಕಿಂಚಿತ್ತಾದರೂ…

WhatsApp Image 2024-05-14 at 2.56.03 PM
Published on

ಸೋಷಿಯಲ್ ಮೀಡಿಯಾದಲ್ಲಿ ಯಾವುದಾದರೂ ಒಂದು ಫೋಟೋ ಹರಿದಾಡಿದರೆ, ಅದು ಯಾವ ವಿಷಯವನ್ನು ಹೇಳುತ್ತಿದೆ? ಏನನ್ನು ಹೋಲುತ್ತದೆ ಎಂಬ ಹಲವಾರು ಪ್ರಶ್ನೆಗಳು ಭಾರೀ ಚರ್ಚೆಗೆ ಕಾರಣವಾಗುತ್ತದೆ. ಕೆಲವರು ಫೋಟೋ ಶೇರ್​ ಮಾಡಿ, ವ್ಯಾಪಕ ಟೀಕೆ ಮಾಡಿದ್ರೆ, ಇನ್ನೂ ಕೆಲವರು ಅದರಿಂದ ಜನರಿಗೆ ಏನಾದರೂ ಉಪಯೋಗವಾಗುತ್ತದೆಯೇ ಎಂಬ ಅಂಶವನ್ನು ಕೆದಕುತ್ತಾರೆ. ಸದ್ಯ ಇಲ್ಲೊಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, 1970ರಲ್ಲಿನ ಮುಂಬೈ ರೈಲು ಮತ್ತು ಇಂದಿನ ಮುಂಬೈ ರೈಲಿನ ಛಾಯಚಿತ್ರವನ್ನು ಹಂಚಿಕೊಂಡಿದ್ದಾರೆ.

1970ರ ಹಳೆಯ ಫೋಟೋದಲ್ಲಿ ಮುಂಬೈ ನಿವಾಸಿಗಳು ತಮ್ಮ ದಿನನಿತ್ಯದ ಕೆಲಸಗಳಿಗಾಗಿ ಲೋಕಲ್ ಟ್ರೈನ್​ ಹಿಡಿದು ಹೇಗೆಲ್ಲಾ ಪ್ರಯಾಣಿಸುತ್ತಿದ್ದರು ಎಂಬುದನ್ನು ತೋರಿಸಲಾಗಿದೆ. ಮತ್ತೊಂದು ಫೋಟೋದಲ್ಲಿಯೂ ವಾಣಿಜ್ಯ ನಗರಿಯ ಜನರು ಇಂದು ಹೇಗೆ ಪ್ರಯಾಣ ಮಾಡುತ್ತಿದ್ದಾರೆ ಎಂಬುದನ್ನೇ ತೋರಿಸಿದೆ. ಹಾಗಾದ್ರೆ, ಇದರಲ್ಲಿ ಏನಿದೆ ವಿಶೇಷತೆ? ಎಂಬ ಪ್ರಶ್ನೆಗೆ ನೆಟ್ಟಿಗರು ಕೊಟ್ಟ ಉತ್ತರ ಹೀಗಿದೆ.

ಎರಡು ಸಹ ಮುಂಬೈ ಲೋಕಲ್ ಟ್ರೈನ್​ ಅನ್ನೇ ಒಳಗೊಂಡಿದೆ ಹಾಗೂ ಸ್ಥಳೀಯ ಪ್ರಯಾಣಿಕರು ಇರುವುದು ಕಂಡುಬಂದಿದೆ. ಎರಡರಲ್ಲೂ ಕಿಂಚಿತ್ತಾದರೂ ಬದಲಾವಣೆ ಇದ್ಯಾ? ಖಂಡಿತ ಇಲ್ಲ. 1970ಕ್ಕೂ 2024ಕ್ಕೂ ಏನೂ ವ್ಯತ್ಯಾಸ ಇಲ್ಲ! ಆಗಲೂ ಸಹ ಜನರು ಡೋರಿನ ಹೊರಗೆಯೇ ನಿಂತಿದ್ದಾರೆ. ಈಗಲೂ ಬಾಗಿಲ ಹೊರಗೆ ನಿಂತುಕೊಂಡೆ ಪ್ರಯಾಣಿಸುತ್ತಿದ್ದಾರೆ. ಇದು ಯಾವ ಕರ್ಮ? ಅಭಿವೃದ್ಧಿ ಏನಾಯ್ತು? ಎಂದೆಲ್ಲಾ ಕಮೆಂಟ್ ಮಾಡಿ ಬೇಸರ ಹೊರಹಾಕಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net