More

    ತನ್ನ ಪತಿ​ ರಾಹುಲ್​ಗೆ ಬೈದ LSG ಮಾಲೀಕನಿಗೆ ಅತಿಯಾ ಶೆಟ್ಟಿ ಕೊಟ್ರಾ ತಿರುಗೇಟು? ಫೋಟೋ ವೈರಲ್

    ಲಕ್ನೋ: ಕಳೆದ ಐಪಿಎಲ್​ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಲಖನೌ ಸೂಪರ್‌ಜೈಂಟ್ಸ್ (ಎಲ್​ಎಸ್​ಜಿ) ಹೀನಾಯ ಸೋಲು ಅನುಭವಿಸಿತು. ಇದರಿಂದ ಕೆರಳಿದ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಎಲ್​ಎಸ್​ಜಿ ಕ್ಯಾಪ್ಟನ್​, ಕನ್ನಡಿಗ ಕೆ.ಎಲ್. ರಾಹುಲ್​ಗೆ ಮೈದಾನದಲ್ಲೇ ಎಲ್ಲರ ಸಮ್ಮುಖದಲ್ಲಿ ಹಿಗ್ಗಾಮುಗ್ಗಾ ಜಾಡಿಸಿದರು. ರಾಹುಲ್ ವಿರುದ್ಧ ಮಾಲೀಕ ಆಕ್ರೋಶ ವ್ಯಕ್ತಪಡಿಸಿದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ವೈರಲ್ ಆಗಿ, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು.

    ಇದನ್ನೂ ಓದಿ: ವಿಜಯವಾಣಿಯ ಈ ದಿನದ ಪ್ರಮುಖ ಸುದ್ದಿಗಳು- 14/05/2024

    ಇದಲ್ಲದೆ, ಕೋಚ್ ಜಸ್ಟಿನ್ ಲ್ಯಾಂಗರ್ ಜತೆಯೂ ಇದೇ ರೀತಿಯ ವರ್ತನೆ ತೋರಿದ್ದರು. ಈ ವಿಡಿಯೋಗಳು ಭಾರೀ ವೈರಲ್ ಆಗುತ್ತಿದ್ದಂತೆ ಕೇವಲ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲದೇ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರು ಸಹ ಮಾಲೀಕ ಸಂಜೀವ್ ನಡೆಗೆ ತೀವ್ರ ಅಸಮಾಧಾನ ಹೊರಹಾಕಿದ್ದು, ಇದೆಲ್ಲಾ ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಸದ್ಯ ಇದೆಲ್ಲಾ ಮಾಸುವ ಮುನ್ನವೇ ರಾಹುಲ್ ಪತ್ನಿ ಅತಿಯಾ ಶೆಟ್ಟಿ ಹಂಚಿಕೊಂಡ ಸ್ಟೋರಿ ಮಾತ್ರ ಸದ್ಯ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

    ಮಾಲೀಕ ಸಂಜೀವ್​ ಗೋಯೆಂಕಾ ತನಗೆ ಬೈಯುತ್ತಿದ್ದ ವೇಳೆ ಹೆಚ್ಚು ಮಾತನಾಡದೆ, ಮೌನದಿಂದ ಆಲಿಸುತ್ತಿದ್ದ ರಾಹುಲ್​ರನ್ನು ನೋಡಿ ಅತೀವ ಬೇಸರಕ್ಕೊಳಗಾದ ಫ್ಯಾನ್ಸ್​ಗೆ ಇದೀಗ ಅವರ ಪತ್ನಿ ಹಾಕಿದ ಪೋಸ್ಟ್​ ಕಂಡು​ ಭಾರೀ ಖುಷಿಪಟ್ಟಿದ್ದಾರೆ. ಅಸಲಿಗೆ ಅತಿಯಾ ಶೆಟ್ಟಿ ಹಂಚಿಕೊಂಡ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ, “ದಿ ಕಾಮ್ ಆಫ್ಟರ್​ ದಿ ಸ್ಟೋರ್ಮ್​” ಎಂಬ ಶೀರ್ಷಿಕೆಯುಳ್ಳ ಫೋಟೋ ಹಾಕಿದ್ದಾರೆ.

    ಇದನ್ನೂ ಓದಿ: ರೈಲಿನ ಮೇಲೆ ಮರ ಬಿದ್ದು ಲೋಕೋ ಪೈಲೆಟ್‌ಗೆ ಗಾಯ: ಇಲಾಖೆಯಿಂದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ

    ಇದು ರಾಹುಲ್ ಫ್ಯಾನ್ಸ್​ಗಳ ಹುಬ್ಬೇರಿಸಿದ್ದು, ಮಾಲೀಕರ ಎದುರು ಕೆ.ಎಲ್​ ಅವರ ಶಾಂತ ಸ್ವಭಾವ, ಕೊಟ್ಟ ಗೌರವವನ್ನು ಪರೋಕ್ಷವಾಗಿ ತಿಳಿಸುತ್ತಿರುವ ಸಾಲಗಳೇ ಎಂದು ಪ್ರಶ್ನಿಸಿದ್ದಾರೆ. ಒಂದು ರೀತಿಯಲ್ಲಿ ಲಕ್ನೋ ತಂಡ ಮಾಲೀಕನಿಗೆ ಇದು ತಕ್ಕ ತಿರುಗೇಟು ಇರಬಹುದು ಎಂದು ಹೇಳಲಾಗುತ್ತಿದೆ,(ಏಜೆನ್ಸೀಸ್).

    ಅಂದು ಆರ್​ಸಿಬಿ ಪ್ಲೇಆಫ್​ ಕನಸಿನ ಬಗ್ಗೆ ವಿಲ್​ ಜ್ಯಾಕ್ಸ್​ ನುಡಿದಿದ್ದ ಭವಿಷ್ಯ ಇಂದು ನಿಜವಾಗ್ತಿದೆ! ಏನು ಗೊತ್ತೇ?

    ಪಕ್ಕಾ ಆರ್​ಸಿಬಿ ಪ್ಲೇಆಫ್​ಗೆ ಹೋಗೋದಿಲ್ಲ! ಹೇಗೆ ಅಂತೀರಾ? ಇಲ್ಲಿದೆ ನೋಡಿ ಲೆಕ್ಕಾಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts