More

    ರೈಲಿನ ಮೇಲೆ ಮರ ಬಿದ್ದು ಲೋಕೋ ಪೈಲೆಟ್‌ಗೆ ಗಾಯ: ಇಲಾಖೆಯಿಂದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ

    ಮಂಡ್ಯ: ಸೋಮವಾರ ಸಂಜೆ ಬಿರುಗಾಳಿ ಸಹಿತ ಮಳೆಯಿಂದಾಗಿ ನಗರದ ಫ್ಯಾಕ್ಟರಿ ವೃತ್ತದ ಸಮೀಪ ಮರವೊಂದು ಮುರಿದು ವೇಗವಾಗಿ ಬರುತ್ತಿದ್ದ ರೈಲ್ವೆ ಮುಂದಿನ ಭಾಗಕ್ಕೆ ಹೊಡೆದ ಪರಿಣಾಮ ಪೈಲೆಟ್ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
    ಪೈಲೆಟ್ ಎನ್.ಎಸ್.ಪ್ರಶಾಂತ್ ತಲೆಗೆ ಗಾಯವಾಗಿದ್ದು, ಈತನಿಗೆ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ‌.
    ಏನಿದು ಘಟನೆ?: ಮೆಮೋ ರೈಲು ಸೋಮವಾರ ಸಂಜೆ ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿತ್ತು. ಈ ನಡುವೆ ಫ್ಯಾಕ್ಟರಿ ವೃತ್ತದಲ್ಲಿ ಮರ ಏಕಾಏಕಿ ರೈಲಿನ ಮುಂಭಾಗಕ್ಕೆ ಹೊಡೆದಿದೆ. ಮಾತ್ರವಲ್ಲದೆ ಈ ವೇಳೆ ಕಿಟಕಿಯ ಗಾಜುಗಳು ಪೈಲೆಟ್‌ನ ತಲೆಗೆ ಹೊಡೆದಿದೆ. ಈ ವೇಳೆ ಪೈಲೆಟ್ ಕೂಡಲೇ ರೈಲನ್ನು ನಿಲ್ಲಿಸಿ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಂಡ್ಯ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿದ್ದಾರೆ. ಕೂಡಲೇ ರೈಲ್ವೆ ಪೊಲೀಸರು ಪೈಲೆಟ್‌ನನ್ನು ಮಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
    ಇನ್ನು ಇತ್ತ 500ಕ್ಕೂ ಹೆಚ್ಚು ಪ್ರಯಾಣಿಕರನ್ನು ವಿಶ್ವಮಾನವ ಪ್ಯಾಸೆಂಜರ್ ರೈಲಿನಲ್ಲಿ ಮೈಸೂರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು. ಈ ಎಲ್ಲ ಪ್ರಕ್ರಿಯೆಯಿಂದಾಗಿ ಪ್ರಯಾಣಿಕರು ಸುಮಾರು ಒಂದು ಗಂಟೆ ಕಾಯುವಂತಾಯಿತು. ಇನ್ನು ನಿಲ್ದಾಣದಲ್ಲಿದ್ದ ಮೆಮೋ ರೈಲನ್ನು ಮತ್ತೊಬ್ಬರು ಪೈಲೆಟ್ ಬಂದು ತೆಗೆದುಕೊಂಡು ಹೋದರು.

    ರೈಲಿನ ಮೇಲೆ ಮರ ಬಿದ್ದು ಲೋಕೋ ಪೈಲೆಟ್‌ಗೆ ಗಾಯ: ಇಲಾಖೆಯಿಂದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts