More

  ನಟಿ ಸನ್ನಿ ಲಿಯೋನ್‌ಗೆ ಬರ್ತಡೇ ಸಂಭ್ರಮ: ಮಂಡ್ಯದ ಕಾರ್ಕಳ್ಳಿಯಲ್ಲಿ ಭರ್ಜರಿ ಸೆಲೆಬ್ರೇಷನ್ ಮಾಡಿದ ಸನ್ನಿ ಬಾಯ್ಸ್…!

  ಮಂಡ್ಯ: ಪಡ್ಡೆ ಹೈಕಳ ಹಾಟ್ ಫೆವರೇಟ್ ಸನ್ನಿಲಿಯೋನ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಅದೆಷ್ಟೋ ಜನ ಆಕೆಯನ್ನ ಹಾಡಿ ಹೊಗಳಿದರೆ, ಮತ್ತೊಂದಷ್ಟು ಜನ ಆಕೆ ನೀಲಿ ಚಿತ್ರದ ತಾರೆ ಅಂತ ಮೂಗು ಮುರಿತಾರೆ. ಆದರೆ ಇಲ್ಲೊಂದು ಗ್ರಾಮದ ಯುವಕರಿಗೆ ಸನ್ನಿ ಅಂದರೆ ಪಂಚ ಪ್ರಾಣ ಹೀಗಾಗಿ ನೆಚ್ಚಿನ ನಟಿಯ ಜನ್ಮದಿನವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ. 

  ಹೌದು, ಖ್ಯಾತ ನಟಿ ಸನ್ನಿಲಿಯೋನ್ ಎಂದರೆ ಮಂಡ್ಯ ಜಿಲ್ಲೆಯ ಕಾರ್ಕಳ್ಳಿ ಗ್ರಾಮದ ಯುವಕರಿಗೆ ತುಂಬಾ ಅಚ್ಚುಮೆಚ್ಚು. ಹೀಗಾಗಿ ಆಕೆಯ ಜನ್ಮದಿನವನ್ನು ಗ್ರಾಮದ ಸನ್ನಿ ಬಾಯ್ಸ್ ಯುವಕರು ಅತ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ. ಗ್ರಾಮದ ಯುವಕರೆಲ್ಲರು ಒಟ್ಟಾಗಿ ಸೇರಿ ಸನ್ನಿಲಿಯೋನ್ ರ ಬೃಹತ್ ಕಟೌಟ್ ನಿರ್ಮಿಸಿ ಅದರ ಮುಂಭಾಗ ಕೇಕ್ ಕತ್ತರಿಸಿದ್ದಾರೆ. ಈ ವೇಳೆ ಸನ್ನಿಗೆ ಹುಟ್ಟುಹಬ್ಬದ ಶುಭಕೋರಿ ಯುವಕರೆಲ್ಲರು ಪರಸ್ಪರ ಕೇಕ್ ತಿನ್ನಿಸಿ ಸಂಭ್ರಮಿಸಿದ್ರು.

  ಸನ್ನಿಲಿಯೋನ್ ನಟನೆ ಜತೆಗೆ ನೂರಾರು ಅನಾಥ ಮಕ್ಕಳನ್ನು ಸಾಕುತ್ತಿದ್ದಾರೆ. ಅವರ ಸಮಾಜಮುಖಿ ಕೆಲಸ ಕಂಡು ನಾವು ಅಭಿಮಾನಿ ಆಗಿದ್ದೇವೆ. ನೀಲಿ ಚಿತ್ರದ ತಾರೆ ಅಂತ ಜನ ಅವರನ್ನು ನೋಡಿ ಮೂಗು ಮುರಿತಾರೆ. ಆದರೆ ಅವರಲ್ಲಿರುವ ಒಳ್ಳೆಯ ಗುಣ ಹಾಗೂ ಸಹಾಯ ಮನೋಭಾವವೇ ನಮ್ಮನ್ನು ಇಂದು ಅವರ ಅಭಿಮಾನಿಯನ್ನಾಗಿಸಿದೆ ಎಂದು ಗ್ರಾಮದ ಸನ್ನಿ ಬಾಯ್ಸ್ ಯುವಕರು ತಿಳಿಸಿದ್ದಾರೆ.

  ನಟಿ ಸನ್ನಿ ಲಿಯೋನ್‌ಗೆ ಬರ್ತಡೇ ಸಂಭ್ರಮ: ಮಂಡ್ಯದ ಕಾರ್ಕಳ್ಳಿಯಲ್ಲಿ ಭರ್ಜರಿ ಸೆಲೆಬ್ರೇಷನ್ ಮಾಡಿದ ಸನ್ನಿ ಬಾಯ್ಸ್…!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts