More

  ಪ್ಲೇಆಫ್​​ಗೂ ಮುನ್ನ ಕೆಕೆಆರ್​ ತಂಡಕ್ಕೆ ಆಘಾತ; ಟೂರ್ನಿಯಿಂದ ಹೊರನಡೆದ ಸ್ಟಾರ್​ ಆಟಗಾರ

  ಕೋಲ್ಕತ: ಹಾಲಿ ಐಪಿಎಲ್​ ಆವೃತ್ತಿಯಲ್ಲಿ ಆಲ್ರೌಂಡ್​ ಪ್ರದರ್ಶನದ ಮೂಲಕ ಟೇಬಲ್​ ಟಾಪರ್​ ಆಗಿ ಪ್ಲೇಆಫ್​ ಪ್ರವೇಶಿಸಿರುವ ಕೋಲ್ಕತ ನೈಟ್​ರೈಡರ್ಸ್​ ತಂಡವು ಮೇ 21 ರಂದು ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೆಕೆಆರ್ ತಂಡ ಕಣಕ್ಕಿಳಿಯಲಿದೆ. ಆದರೆ, ಸಂಭ್ರಮದ ನಡುವೆಯೇ ಕೋಲ್ಕತ ನೈಟ್​ರೈಡರ್ಸ್​ ತಂಡಕ್ಕೆ ಭಾರೀ ಹಿನ್ನಡೆಯಾಗಿದ್ದು, ಪ್ರಮುಖ ಆಟಗಾರನೋರ್ವ ತವರಿಗೆ ಮರಳಿದ್ದಾರೆ.

  ಹಾಲಿ ಆವೃತ್ತಿಯಲ್ಲಿ ಕೋಲ್ಕತ ನೈಟ್​ರೈಡರ್ಸ್​ ಪರ ಆರಂಭಿಕರಾಗಿ ಸುನಿಲ್​ ನರೈನ್​ ಜೊತೆ ಕಣಕ್ಕಿಳಿಯುತ್ತಿದ್ದ ಫಿಲ್​ ಸಾಲ್ಟ್​ ತಂಡದಿಂದ ಹೊರನಡೆದಿದ್ದು, ವಿಶ್ವಕಪ್​ಗೂ ಮುನ್ನ ಪಾಕಿಸ್ತಾನ ಹಾಗೂ ಇಂಗ್ಲೆಂಡ್​ ನಡುವೆ ಟಿ-20 ಸರಣಿ ನಡೆಯಲಿದ್ದು, ಈ ಸರಣಿಯಲ್ಲಿ ಆಡಲು ಫಿಲ್​ ಸಾಲ್ಟ್​ ತವರಿಗೆ ಮರಳಿದ್ದಾರೆ ಎಂದು ವರದಿಯಾಗಿದೆ.

  Phill Salt

  ಇದನ್ನೂ ಓದಿ: ಕಾರು-ಲಾರಿ ನಡುವೆ ಭೀಕರ ರಸ್ತೆ ಅಪಘಾತ; ಆರು ಮಂದಿ ಸ್ಥಳದಲ್ಲೇ ಸಾವು

  ಇದರೊಂದಿಗೆ ಕೆಕೆಆರ್ ತಂಡದ ಪ್ಲೇಆಫ್ ಪಂದ್ಯಗಳಿಗೆ ಫಿಲ್ ಸಾಲ್ಟ್ ಕಣಕ್ಕಿಳಿಯುವುದಿಲ್ಲ ಎಂಬುದು ಖಚಿತವಾಗಿದೆ. ಇತ್ತ ಸಾಲ್ಟ್ ಅಲಭ್ಯತೆಯು ಕೋಲ್ಕತ ನೈಟ್ ರೈಡರ್ಸ್ ತಂಡದ ಬ್ಯಾಟಿಂಗ್ ಲೈನಪ್ ಮೇಲೆ ಪರಿಣಾಮ ಬೀರಬಹುದು. ಏಕೆಂದರೆ ಆಡಿರುವ 12 ಪಂದ್ಯಗಳಿಂದ 04 ಅರ್ಧಶತಕ ಒಳಗೊಂಡಂತೆ 435​ ರನ್​ಗಳನ್ನು ಕಲೆಹಾಕಿರುವ ಫಿಲ್​ ಸಾಲ್ಟ್​ 14 ವರ್ಷಗಳಿಂದ ಸೌರವ್ ಗಂಗೂಲಿ (331) ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಮುರಿದಿದ್ದರು.

  ಇದೀಗ ನಿರ್ಣಾಯಕವಾಗಿರುವ ಪ್ಲೇಆಫ್ ಪಂದ್ಯಗಳಿಗೂ ಮುನ್ನ ಫಿಲ್ ಸಾಲ್ಟ್ ತಂಡವನ್ನು ತೊರೆದಿರುವುದು ಕೆಕೆಆರ್ ಪಾಲಿಗೆ ಹಿನ್ನಡೆಯನ್ನು ಉಂಟು ಮಾಡಲಿದೆ. ಇನ್ನು ಸಾಲ್ಟ್ ಅಲಭ್ಯತೆಯ ನಡುವೆ ಕೋಲ್ಕತ ನೈಟ್ ರೈಡರ್ಸ್ ಪರ ರಹಮಾನುಲ್ಲಾ ಗುರ್ಬಾಝ್ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts