ಕೊನೆಗೂ ಸೆರೆಯಾದ ನರಹಂತಕ ಕಾಡಾನೆ ಬೈರ! ನಿಟ್ಟುಸಿರುಬಿಟ್ಟ ಸ್ಥಳೀಯರು

kadane bhaira
Published on

ಮೂಡಿಗೆರೆ: ನರಹಂತಕ ಕಾಡಾನೆ ಬೈರ ಕೊನೆಗೂ ಸೆರೆ ಸಿಕ್ಕಿದ್ದಾನೆ. ಮೂಡಿಗೆರೆ ತಾಲೂಕಿನ ಬೈರಾಪುರ ಮೀಸಲು ಅರಣ್ಯ ಪ್ರದೇಶದಲ್ಲಿ ಬಿಡುಬಿಟ್ಟಿದ್ದ ಬೈರನನ್ನು ಭಾನುವಾರ ಖೆಡ್ಡಾಕ್ಕೆ ಕೆಡವಿ ದುಬಾರೆ ಆನೆ ಶಿಬಿರಕ್ಕೆ ಸಾಗಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಕುಂಡ್ರಾ ಅರಣ್ಯ ಭಾಗದಲ್ಲಿ ಕಾಡಾನೆ ಸೆರೆಹಿಡಿಯಲು ಆರು ಸಾಕಾನೆಗಳೊಂದಿಗೆ ಸ್ಥಳಕ್ಕೆ ಧಾವಿಸಿದ ತಂಡವು ಬೈರನನ್ನು ಸೆರೆ ಹಿಡಿದಿದ್ದು, ಸ್ಥಳೀಯರ ನಿಟ್ಟುಸಿರು ಬಿಟ್ಟಿದ್ದಾರೆ.

ಕಾಡಾನೆ ಬೈರ ಸೆಪ್ಟೆಂಬರ್​ನಲ್ಲಿ ಊರುಬಗೆ ಗ್ರಾಮದ ನಿವಾಸಿ ಅರ್ಜುನ್​, ಎರಡು ವರ್ಷಗಳ ಹಿಂದೆ ಅಡ್ಡಗುಡ್ಡೆ ನಿವಾಸಿ ಸುನಿಲ್​ಕುಮಾರ್​, ಇದಕ್ಕಿಂತ ಮೂರು ತಿಂಗಳ ಹಿಂದೆ ಗುತ್ತಿ ಗ್ರಾಮದ ಜಯಮ್ಮ ಎಂಬುವವರನ್ನು ಕೊಂದುಹಾಕಿತ್ತು. ಕಳೆದ ವರ್ಷ ಬೈಕಿನಲ್ಲಿ ತೆರಳುತ್ತಿದ್ದ ಪ್ರಭಾಕರ್​ ಎಂಬುವರ ಬೈಕ್​ ಅನ್ನು ಧ್ವಂಸಗೊಳಿಸಿ ಅವರನ್ನೂ ಸೊಂಡಿಲಿನಿಂದ ದೂರಕ್ಕೆ ಎಸೆದು ಗಾಯಗೊಳಿಸಿತ್ತು. ಸುತ್ತಮುತ್ತರ ಊರುಗಳ ಜನರು ಕಾಡಾನೆ ಬೈರನ ಹೆಸರು ಕೇಳಿದ್ರೆ ಸಾಕು ಭಯ ಪಡುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net