ರೋಪ್​ ವೇ ಮೂಲಕ ಮದ್ವೆ ಮಂಟಪಕ್ಕೆ ಎಂಟ್ರಿಕೊಟ್ಟ ವಧು! ಶೋಕವಾಗದಿರಲಿ ಆಡಂಬರ… ಎಂದ ನೆಟ್ಟಿಗರು, ಸಖತ್​ ವೈರಲ್​ ಆಗ್ತಿದೆ ವಿಡಿಯೋ

wedding
Published on

ನವದೆಹಲಿ: ಮದುವೆ ಅಂದ್ರೆ ಸಂಭ್ರಮ, ವಧು-ವರರ ಬದುಕಿನ ಅತ್ಯಮೂಲ್ಯ ಘಳಿಗೆ. ನೂರಾರು ಕನಸಿನ ಬುತ್ತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುವ ಜೋಡಿ, ತಮ್ಮ ಮದುವೆ ದಿನಕ್ಕೆ ಮತ್ತಷ್ಟು ಮೆರುಗು ನೀಡಲು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾ ಸುದ್ದಿಯಾಗುವುದು ಈಗಿನ ಟ್ರೆಂಡ್​. ಇನ್ನು ಗೆಳೆಯರೂ ಕಮ್ಮಿಯಿಲ್ಲ, ನವಜೋಡಿಗೆ ಸರ್​ಪ್ರೈಸ್​ ಗಿಫ್ಟ್​ ಕೊಟ್ಟು, ಇಲ್ಲವೇ ಕಾಡಿಸಿ ಮನರಂಜಿಸುವ ದೃಶ್ಯವೂ ವೈರಲ್​ ಆಗುತ್ತಲೇ ಇರುತ್ತೆ. ಇದೀಗ ಅದ್ದೂರಿ ಮದುವೆಯೊಂದರ ವಿಡಿಯೋ ಸಖತ್​ ವೈರಲ್​ ಆಗಿದ್ದು, ತಂದೆ ಜತೆ ರೋಪ್​ ವೇ ನಲ್ಲಿ ಮದುವೆ ಮಂಟಪಕ್ಕೆ ವಧು ಬಂದಿದ್ದು, ಶೋಕವಾಗದಿರಲಿ ಆಡಂಬರ... ಎಂದು ಅತಿಥಿಗಳು ಮಾತ್ರವಲ್ಲ, ನೆಟ್ಟಿಗರೂ ಕಮೆಂಟ್​ ಕೊಟ್ಟಿದ್ದಾರೆ.

ಈಗ ವೈರಲ್ ಆಗಿರುವ ವೀಡಿಯೊದಲ್ಲಿ ವಧು ತನ್ನ ತಂದೆಯ ಜೊತೆಯಲ್ಲಿ ರೋಪ್​ ವೇ ಮೂಲಕ ಮದುವೆ ಹಾಲ್‌ನ ಮುಖ್ಯ ವೇದಿಕೆಗೆ ಆಗಮಿಸಿದ್ದಾರೆ. ಈ ದೃಶ್ಯವನ್ನು ಫಾಸಿ ಝಕಾ (@fasi_zaka) ಎನ್ನುವವರು ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಿದ್ದು, "ದಯವಿಟ್ಟು ಇದು ವಿಷಯವಾಗಲು ಬಿಡಬೇಡಿ" ಎಂದು ಬರೆದಿದ್ದಾರೆ. ಡಿ.8ರಂದು ಈ ವಿಡಿಯೋ ಪೋಸ್ಟ್​ ಆಗಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

ಬಹುತೇಕ ನೆಟ್ಟಿಗರು ಈ ದೃಶ್ಯ ನೋಡಿ, ಶ್ರೀಮಂತಿಕೆಯ ಮದವೇರಿದೆ... ಮದುವೆಯಲ್ಲೂ ಆಡಂಬರ, ಶ್ರೀಮಂತಿಕೆಯ ತೋರ್ಪಡಿಕೆಯ ಪರಮಾವಧಿ.. ಎಂದು ತರೇಹವಾರಿ ಕಮೆಂಟ್​ ಕೊಟ್ಟಿದ್ದಾರೆ.

“ಶ್ರೀಮಂತರು ಜಗತ್ತನ್ನು ಮೆಚ್ಚಿಸಲು ತಮ್ಮ ಮಗಳ ಮದುವೆಯಲ್ಲಿ ಲೆಕ್ಕವಿಲ್ಲದಷ್ಟು ಖರ್ಚು ಮಾಡುತ್ತಾರೆ. ಅದನ್ನು ಬಿಟ್ಟು ಅನಾಥರಿಗೆ/ಬಡವರನ್ನು ಮದುವೆಗೆ ಆಹ್ವಾನಿಸಿ ಭರ್ಜರಿ ಭೋಜನವಾದರೂ ಹಾಕಿಸಿದರೆ ಖುಷಿ ಹೆಚ್ಚು ಸಿಗುತ್ತೆ. ದಾನ ಮಾಡಿ ಬಡವರ ಮುಖದಲ್ಲಿ ನಗು ನೋಡಿದರೆ ಅದರಲ್ಲಿ ಸಿಗುವ ಆನಂದವೇ ಬೇರೆ. ಇದನ್ನು ಶ್ರೀಮಂತರು ಏಕೆ ಅರ್ಥ ಮಾಡಿಕೊಳ್ಳುತ್ತಿಲ್ಲ' ಎಂದು ಮತ್ತೊಬ್ಬ ನೆಟ್ಟಿಗ ಕಮೆಂಟ್​ ಮಾಡಿದ್ದಾನೆ. ಅಂದಹಾಗೆ ಈ ಮದುವೆ ಪಾಕಿಸ್ತಾನದಲ್ಲಿ ನಡೆದಿರುವುದು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net